ಬೋರ್ ವೆಲ್ ಕೊರೆಯುವಾಗ ನೀರು ಎಲ್ಲಿಂದ ಬರುತ್ತದೆ?
ಜನ ಬೋರ್ ವೆಲ್ ಎಂದರೆ ಭೂಮಿಯ ಅಥವಾ ಬಂಡೆಯ ಎಡೆಯಲ್ಲಿ ಅಂತರ್ಗಾಮೀ ನದಿಗಳೇ ಇದೆ ಎಂದು ತಿಳಿದಿದ್ದಾರೆ. ಆದರೆ ವಾಸ್ತವಿಕತೆ ಬೇರೆಯೇ ಇದೆ.ಭೂಮಿಯಲ್ಲಿ ಬಂಡೆಯ ಬಿರುಕುಗಳ ಎಡೆಯಲ್ಲಿ ಜಿನುಗುವ ನೀರು ಇರುತ್ತದೆ. ಇದೆಲ್ಲಾ ಒಟ್ಟುಗೂಡುತ್ತಾ ದೊಡ್ದ ಪ್ರಮಾಣದ ನೀರಾಗುತ್ತದೆಯೇ ಹೊರತು “ ದಂಡು” ಅಥವಾ ನದಿ ಇರುವುದಿಲ್ಲ. ಹಾಗಿದ್ದರೆ ಏನಿದೆ ಒಳಗೆ? ನೀವು ಎಲ್ಲಿಯಾದರೂ ಬೆಟ್ಟದ ಬದಿಯಲ್ಲಿ ನೀರು ಹೊರಬರುವ ಚಿಲುಮೆಯನ್ನು ಕಂಡದ್ದಿದೆಯೇ? ಕಂಡಿದ್ದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿರಿ. ಅದು ಹೇಗೆ ಹೊರ ಬರುತ್ತದೆ. ಎಲ್ಲಿಂದ ಬರುತ್ತದೆ. ಅದರ…