ಬೋರ್ ವೆಲ್ ಕೊರೆಯುವಾಗ ನೀರು ಎಲ್ಲಿಂದ ಬರುತ್ತದೆ?

ಜನ ಬೋರ್  ವೆಲ್ ಎಂದರೆ ಭೂಮಿಯ ಅಥವಾ ಬಂಡೆಯ ಎಡೆಯಲ್ಲಿ  ಅಂತರ್ಗಾಮೀ ನದಿಗಳೇ ಇದೆ ಎಂದು ತಿಳಿದಿದ್ದಾರೆ. ಆದರೆ ವಾಸ್ತವಿಕತೆ ಬೇರೆಯೇ ಇದೆ.ಭೂಮಿಯಲ್ಲಿ ಬಂಡೆಯ ಬಿರುಕುಗಳ ಎಡೆಯಲ್ಲಿ ಜಿನುಗುವ ನೀರು ಇರುತ್ತದೆ. ಇದೆಲ್ಲಾ ಒಟ್ಟುಗೂಡುತ್ತಾ ದೊಡ್ದ ಪ್ರಮಾಣದ ನೀರಾಗುತ್ತದೆಯೇ ಹೊರತು “ ದಂಡು” ಅಥವಾ ನದಿ ಇರುವುದಿಲ್ಲ. ಹಾಗಿದ್ದರೆ ಏನಿದೆ ಒಳಗೆ?

ನೀವು ಎಲ್ಲಿಯಾದರೂ ಬೆಟ್ಟದ ಬದಿಯಲ್ಲಿ ನೀರು ಹೊರಬರುವ ಚಿಲುಮೆಯನ್ನು ಕಂಡದ್ದಿದೆಯೇ? ಕಂಡಿದ್ದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿರಿ. ಅದು ಹೇಗೆ ಹೊರ ಬರುತ್ತದೆ. ಎಲ್ಲಿಂದ ಬರುತ್ತದೆ. ಅದರ ಹಿಂದೆ ಬೆಟ್ಟ ಗುಡ್ಡಗಳೇನಾದರೂ ಇದೆಯೇ ,ಬೇರೆ ಬೇರೆ  ಋತುಮಾನದಲ್ಲಿ ಅದರ ಹೊರ ಹರಿವು ಹೇಗೆ ಇರುತ್ತದೆ ಎಂಬುದನ್ನು  ಗಮನಿಸಿ. ಆಗ ಅದರ ಒಂದಷ್ಟು ಸೂಕ್ಷ್ಮ ವಿಚಾರಗಳು ಸ್ವಲ್ಪ ಸ್ವಲ್ಪವೇ ತಿಳಿಯುತ್ತಾ ಹೋಗುತ್ತದೆ. ಇದನ್ನೇ ನೀವು ನಿಮ್ಮ ಕೊಳವೆಬಾವಿಗೂ ಹೋಲಿಕೆ  ಮಾಡಬಹುದು.

Water percolating gaps in rocks
ಕಲ್ಲಿನಲ್ಲಿ ನೀರು ಜಿನುಗುವ ಬಿರುಕುಗಳು
  • ಬೋರ್ ವೆಲ್ ನಲ್ಲಿ ಲಭ್ಯವಾಗುವ ನೀರು ಮಣ್ಣಿನ ಮೂಲಕ  ಇಂಗಲ್ಪಟ್ಟದ್ದು.
  • ಇದರಲ್ಲಿ ಮಳೆಯಿಂದ ಇಂಗಿದ ನೀರು, ನದೀ ನೀರು, ಹಳ್ಳ ತೋಡು, ಕೆರೆ ಸರೋವರಗಳಿಂದ ಇಂಗಲ್ಪಟ್ಟ ನೀರೂ ಸೇರಿದೆ.
  • ಇದು ಸಹಸ್ರಾರು ವರ್ಷಗಳಿಂದ ಬಂಡೆಗಳ ಎಡೆಯಲ್ಲಿ ಇರುವ ಪೊಟರೆಯೊಳಗೆ (ಅವಕಾಶ)  ಸೇರಿದ ನೀರಾಗಿದೆ, groundwater can also sink into deep aquifers where it takes thousands of years to move back into
  • ಇದು ಅಕ್ಷಯ ಪಾತ್ರೆಯಂತೂ ಅಲ್ಲವೇ ಅಲ್ಲ.

ಕೊಳವೆ ಬಾವಿ ಅಥವಾ ಬೋರ್ ವೆಲ್ ಎಂಬ ನೀರು ಟ್ಯಾಪ್ ಮಾಡುವ ವಿಧಾನ ಮಣ್ಣಿನ ಮೂಲಕ ಶಿಲಾ ಪದರವನ್ನು ಕೊರೆಯುತ್ತಾ  ತಳಕ್ಕೆ ಹೋಗುವುದು. ಬಿರುಕುಗಳು ಸಿಗುವ ತನಕ ಕೊರೆದಾಗ ಆ ಬಿರುಕುಗಳ ಎಡೆಯಲ್ಲಿ ಸಂಗ್ರಹಿತ  ನೀರು ಕೊರೆದ ಗಾಯದ ಒಳಗೆ ಸೇರಿಕೊಳ್ಳುತ್ತದೆ. ಇದುವೇ ಕೊಳವೆ ಬಾವಿಯ ನೀರು. ಬಾವಿ ಕೊರೆಯುವಾಗ ಗ್ಯಾಪ್ ಬದಲಾಯಿತು ಎನ್ನುತ್ತಾರೆ. ಗ್ಯಾಪ್ ಎಂದರೆ ಶಿಲೆಯಲ್ಲಿ ಬಿರುಕು ಸಿಗುವುದು.

ಅಂತರ್ಜಲ ಹೇಗೆ ಆಗುತ್ತದೆ:

Rain water percolates in this gaps
ಇಂತಹ ಭಾಗಗಳಿಂದ ಮಳೆ ನೀರು ಅಂತರ್ಜಲಕ್ಕೆ ಸೇರಿಕೊಳ್ಳುತ್ತದೆ
  • ಇಲ್ಲಿ ಒಂದು ಚಿತ್ರವನ್ನು ತೋರಿಸುತ್ತೀದ್ದೇವೆ. ಇದು ರಸ್ತೆ ಗಲೀಕರಣಕ್ಕೆ ಅಗೆದದ್ದು.
  • ಇದರಲ್ಲಿ ಭೂ ಸ್ವರೂಪದ ಸಣ್ಣ ಚಿತ್ರಣ ಸಿಗುತ್ತದೆ.
  • ಇದನ್ನು ನೀವೆಲ್ಲರೂ ನೋಡಿರಬಹುದು. ನೆಲದಲ್ಲಿ ಮೇಲ್ಭಾಗದಲ್ಲಿ ಮಣ್ಣು ಇರುತ್ತದೆ.
  • ಅದರ ಕೆಳಗೆ ಮೆದು ಕಲ್ಲಿನ ಪದರ ಇರುತ್ತದೆ. ಅದರ ಕೆಳಗೆ ಗಟ್ಟಿ ಕಲ್ಲು ಇರುತ್ತದೆ.
  • ಮಣ್ಣು, ಮೆದು ಶಿಲೆಗಳ ಮೂಲಕ ಇಂಗಲ್ಪಟ್ಟ ನೀರು, ಈ ಗಟ್ಟಿ ಕಲ್ಲುಗಳ ಸೆರೆ ಅಥವಾ ಬಿರುಕುಗಳ ಎಡೆಯ spaces between soil and rock particles ಮೂಲಕ ಇಳಿದ ನೀರು   vast majority of underground water occupies the spaces between rocks and subsurface material  ಅಂತರ್ಜಲವಾಗಿ ಲಭ್ಯವಾಗುತ್ತದೆ.
  • ಇದು ಮಳೆಗಾಲದಲ್ಲಿ ಸ್ವಲ್ಪ ಮಟ್ಟಿಗೆಯಾದರೂ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ಕಡಿಮೆಯಾಗುತ್ತದೆ.
  • ಅದಕ್ಕೆ ಕಾರಣ  ಮೇಲ್ಭಾಗದ ಬಿರುಕುಗಳ ಮೂಲಕ ಸೇರಿಕೊಳ್ಳುವ ನೀರು ಕಡಿಮೆಯಾಗುತ್ತಾ ಹೋಗುವುದು.
  • ಮಳೆಗಾಲದಲ್ಲಿ ಚಿಲುಮೆ( Springs) ಗಳಲ್ಲಿ ಹರಿಯುವ ನೀರು ಹೆಚ್ಚು ಇರುತ್ತದೆ.
  • ಬೇಸಿಗೆ ಬಂದಂತೆ ಕಡಿಮೆಯಾಗುತ್ತದೆ.
  • ಕೆಲವೊಂದು ಕೊಳವೆ ಬಾವಿಗಳು ಮಳೆಗಾಲದಲ್ಲಿ ಓವರ್ ಫ಼್ಲೋ ಆಗುವುದು ಮೇಲಿನ ಶಿಲೆಗಳ ಬಿರುಕುಗಳ ನೀರು ಸೇರುವ ಕಾರಣದಿಂದಾಗಿ.
  • ಕೆಳಭಾಗದ ಶಿಲೆಗಳ ಬಿರುಕುಗಳ ಮೂಲಕ ಒಸರುವ ನೀರು ಅಷ್ಟೊಂದು ಬೇಗ ಕಡಿಮೆಯಾಗುವುದಿಲ್ಲ.
  • ಕಾರಣ ಅವು ಬಹಳ ದೂರದ ಪ್ರದೇಶದಿಂದ ಬರುವವುಗಳಾಗಿರುತ್ತವೆ.

ಶಿಲಾ ಬಿರುಕುಗಳು ನೀರಿನ ಸೆಳೆಗಳು:

rain water seeped by this way to underground

  • ಅಂತರ್ಜಲ ಎಂಬುದು ಶಿಲೆಯ ಬಿರುಕುಗಳ ಎಡೆಯಿಂದ ಬರುವಂತದ್ದು.
  • ಬಿರುಕುಗಳೇ ಇಲ್ಲದ ಶಿಲೆ ಸಿಕ್ಕಿದಾಗ ಅದು ಆಳಕ್ಕೆ ಇಳಿಯಬೇಕಾಗುತ್ತದೆ.
  • ಶಿಲಾ ಬಿರುಕುಗಳಲ್ಲಿ ನೀರಿನ ಹರಿವು ಅಡ್ದಕ್ಕೆ ಮತ್ತು ನೇರಕ್ಕೆ ಸಹ ಇರುತ್ತದೆ.
  • ಮೂಲದ ಪ್ರಮಾಣ ಅಥವಾ ಅದರ ಒತ್ತಡ  ಹೆಚ್ಚು ಇದ್ದಾಗ ಅದು ಮೇಲಕ್ಕೆ ಏರಿಕೆಯಾಗುತ್ತದೆ ನೀರಿನ ಮೂಲದ  ಗುರುತ್ವ ಶಕ್ತಿಗನುಗುಣವಾಗಿ ನೀರಿನ ಒತ್ತಡ ಇರುತ್ತದೆ.
  • ಎತ್ತರದಲಿರುವ ಟಾಂಕಿಯಿಂದ ನೀರು ಅದರಷ್ಟೇ ಎತ್ತರಕ್ಕೆ ಚಿಮ್ಮುವಷ್ಟು ಒತ್ತಡ ಹೊಂದಿರುತ್ತದೆ.
  • ಒತ್ತಡ ಹೆಚ್ಚು ಇದ್ದಾಕ್ಷಣ ಅಧಿಕ ನೀರು ಎಂದಿಲ್ಲ.
  • ಹೆಚ್ಚಿನ ನೀರು ಕೊರೆದ ಅವಕಾಶದ ಒಳಗೆ ಸೇರಿದಾಗಲೇ ಅಧಿಕ ನೀರು.
  • ಕೆಲವು ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಬಂಡೆ ನೂರಾರು ಅಡಿ ತನಕ ಕೊರೆದ ಮೇಲೆ ಬಿರುಕುಗಳು ಸಿಗುತ್ತದೆ.
  • ಮತ್ತೆ ಕೆಲವು ಬೇಗ ಬಿರುಕು ಅಥವಾ ಬಂಡೆಯ ಬದಲಾವಣೆ ಆಗಿ ನೀರು ಸಿಗುತ್ತದೆ.
  • ಎಲ್ಲಾ ಬಿರುಕುಗಳಲ್ಲೂ ನೀರು ಇರುತ್ತವೆ ಎಂದಿಲ್ಲ. ಅದು ಖಾಲಿಯೂ ಇರಬಹುದು.
  • ಇದನ್ನು ಡ್ರೈ ಗ್ಯಾಪ್ ಎಂದು ಸಾಮಾನ್ಯವಾಗಿ ಹೇಳುತ್ತಾರೆ.
  • ಈ ಬಿರುಕುಗಳಲ್ಲಿ ನೀರು ಬಾರದೆ ಇದ್ದರೂ  ಬೇರೆ ಗ್ಯಾಪ್ ಗಳಲ್ಲಿ  ಬಂದ ನೀರು ಅದರ ಮೂಲಕ ಎಲ್ಲೆಲ್ಲಿಗೋ  ಹೋಗುತ್ತದೆ ಎಂದು ಹೇಳುವುದು ತಪ್ಪು.
  • ಆ ಅವಕಾಶದ ಒಳಗೆ ನೀರು ಸೇರಬಹುದು ಅಷ್ಟೇ.
  • ಕೊಳವೆ ಬಾವಿ ಕೊರೆಯುವಾಗ  ಬಂಡೆ ಬದಲಾವಣೆ ಆದಾಗ ಕೆಲವೊಮ್ಮೆ ಅದರಲ್ಲಿ ಕೆಲವು ಸಮಯದ ತನಕ ಕಶ್ಮಲ ಯುಕ್ತ ನೀರು ಬರಬಹುದು.
  • ಅದು ಸಣ್ಣ ಬಂಡೆ ಆಗಿದ್ದರೆ ಅದು ಕೊರೆಯುವ ಒತ್ತಡಕ್ಕೆ ಹುಡಿಯಾಗುತ್ತದೆ.
  • ಇದನ್ನು ಡ್ರಿಲ್ಲಿಂಗ್ ಮಾಡುವವರು ಬೋಲ್ಡ್ರಾಸ್ ( ಹುಡಿ ಕಲ್ಲು) ಬಂದಿದೆ ಎನ್ನುತ್ತಾರೆ.
  • ಇಂತಹ ಬಂಡೆ ಸಿಕ್ಕಿದ ನಂತರ ಕೊರೆಯಲು ಕಷ್ಟವಾಗುತ್ತದೆ.
  • ನಿಧಾನವಾಗಿ ಕೊರೆಯಬಹುದು. ಆದರೆ  ಎಲ್ಲಿ ಇಂತಹ ಹುಡಿ ಕಲ್ಲು ಸಿಕ್ಕಿದೆಯೋ ಅಲ್ಲಿ ತನಕ ಮಾತ್ರ ಪಂಪನ್ನು ಇಳಿಸಬಹುದು.
  • ಅದರ ನಂತರ ಇಳಿಸಲಿಕ್ಕೆ ಕಷ್ಟವಾಗುತ್ತದೆ. ಇಳಿದರೂ ಮೇಲೆ ಎತ್ತಬೇಕಾದ ಸಂಧರ್ಭದಲ್ಲಿ ಸಮಸ್ಯೆಯಾಗಬಹುದು.

Rock gaps at  underground

ಬೋರ್ ವೆಲ್ ನೀರು ಹೆಚ್ಚು ಸಮಯ ಬರುವುದು ಹೇಗೆ:

  • ಕೊಳವೆ ಬಾವಿ ಕೊರೆದಾದ ಭಾರೀ ನೀರು ಬಂದರೂ ಸಹ ಅದು ಬರಿದಾಗಲು ಹೆಚ್ಚು ಸಮಯ ಬೇಕಾಗಿಲ್ಲ.
  • ಕೆಲವು ಹತ್ತಾರು ವರ್ಷ  ಬರಬಹುದು. ಮತ್ತೆ ಕೆಲವು ಒಂದೆರಡು ವರ್ಷಗಳಲ್ಲಿ ಬರಿದಾಗಬಹುದು.
  • ಅದೃಷ್ಟ ಪರೀಕ್ಷೆಯಂತೆ ನೀರು ಸಹ. ಇದನ್ನು ಹೆಚ್ಚು ಸಮಯ ಉಳಿಯುವಂತೆ ಮಾಡಲು ಸಾಮೂಹಿಕವಾಗಿ ನೀರಿನ ಮಿತ ಬಳಕೆ ಮಾಡುವುದು ಒಂದೇ ಪರಿಹಾರ.
  • ಹನಿನೀರಾವರಿ, ಮಿತ ನೀರಾವರಿ, ಭೂ ಹೊದಿಕೆ ಮಾಡುವ ಮೂಲಕ ನೀರಿನ ಬಳಕೆಯನ್ನು ಕಡಿಮೆಮಾಡಿ  ನೀರು ಉಳಿತಾಯ ಮಾಡಬಹುದು.

ಬೋರ್ ವೆಲ್ ಎಂಬುದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದೂ ಸಹ. ಬೋರ್ ವೆಲ್ ನಲ್ಲಿ ನೀರು ಸಿಕ್ಕಾಗ ನಾವು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಹ್ಯಾಂಡಲ್ ಮಾಡಿದಂತೆ ಮಾಡುತ್ತೇವೆ.  ಕೆಲವರು ನಮ್ಮ ನಂತರದ ತಲೆಮಾರಿಗೆ  ಭೂಮಿಯನ್ನು ಸುಸ್ಥಿತಿಯಲ್ಲಿ ಇಡಬೇಕು ಎಂಬ ಕಳಕಳಿಯನ್ನು  ವ್ಯಕ್ತಪಡಿಸ್ಸುತ್ತಾರೆ. ಅದು ಸರಿ. ಒಂದು ವೇಳೆ ಭೂಮಿಯಲ್ಲಿ ಜಲದ ಕೊರೆತೆ ಉಂಟಾದರೆ ನಾವು ನಮ್ಮ ತಲೆಮಾರಿಗೆ ಭೂಮಿಯನ್ನು  ಸುಸ್ಥಿತಿಯಲ್ಲಿ ಹಸ್ತಾಂತರಿಸಿದಂತೆಯೇ ಸರಿ.

error: Content is protected !!