ಸಸ್ಯಗಳ ಬೇರಿನಲ್ಲಿ ಹೀಗೆ ಗಂಟುಗಳು ಯಾಕೆ ಬೆಳೆಯುತ್ತವೆ? ಇದರ ಪ್ರಯೋಜನಗಳೇನು?
ಕೆಲವು ಸಸ್ಯಗಳ ಬೇರಿನ ಮೇಲೆ ಗಂಟು ಗಂಟು ರಚನೆ ಕಾಣಿಸುತ್ತದೆ. ಇದು ಏನು? ಯಾಕೆ ಆಗುತ್ತದೆ?ಇದರಿಂದ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ. ಕೆಲವು ನಿರ್ದಿಷ್ಟ ಸಸ್ಯಗಳಲ್ಲಿ ಮಾತ್ರ ಬೇರಿನ ಸನಿಹದಲ್ಲಿ ಗಂಟುಗಳನ್ನು ಕಾಣಬಹುದು. ಇವು ಪ್ರಕೃತಿಯ ಕೊಡುಗೆ. ದ್ವಿದಳ ಸಸ್ಯಗಳಲ್ಲಿ ಮಾತ್ರ ಇಂತಹ ಗಂಟು Root Nodules ರಚನೆಗಳನ್ನು ಕಾಣಬಹುದು. ಬೇರಿನಲ್ಲಿ ಬರುವ ಎಲ್ಲಾ ಗಂಟುಗಳೂ ಒಂದೇ ಅಲ್ಲ. ಕೆಲವು ಜಂತುಹುಳುಗಳ (root-knot nematode) ಕಾಟದಿಂದಲೂ ಆಗುತ್ತದೆ. ಜಂತು ಹುಳುಗಳಾಗಿದ್ದರೆ ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ. ಸಸ್ಯದ ಬೆಳವಣಿಗೆ…