
ಗುಲಾಬಿ ಬೆಳೆದು, ಸಾಪ್ಟ್ ವೇರ್ ಉದ್ಯೋಗದ ಸಂಪಾದನೆ.
ಕೆಲವು ಬೆಳೆಗಳು ನಮಗೆ ಉತ್ತಮ ವರಮಾನ ತಂದು ಕೊಡುತ್ತವೆ. ಸೂಕ್ತ ಮಾರ್ಗದರ್ಶನ ಇಲ್ಲದೆ ನಾವು ಯಾವ್ಯಾವುದೋ ಬೆಳೆಗಳ ಹಿಂದೆ ಹೋಗುತ್ತೇವೆ. ಮಲೆನಾಡಿನಲ್ಲಿ ಏನು ಬೆಳೆ ಬೆಳೆಯಬಹುದು. ಅಡಿಕೆ, ತೆಂಗು, ತಪ್ಪಿದರೆ ಇನ್ನೇನಾದರೂ ವಾರ್ಷಿಕ ಬೆಳೆಗಳನ್ನು ಬೆಳೆಯಬಹುದು ಎಂಬುದು ಎಲ್ಲರ ತಿಳುವಳಿಕೆ. ಆದರೆ ಇಲ್ಲೊಬ್ಬರು ಇದಕ್ಕಿಂತೆಲ್ಲಾ ಭಿನ್ನವಾದ ಪುಷ್ಪ ಬೆಳೆಯನ್ನು ಬೆಳೆದು ಉತ್ತಮ ವರಮಾನ ಪಡೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ನಾಡಕಲಸಿ ಊರಿನಲ್ಲಿ ಶ್ರಿಯುತ ಹುಚ್ಚಪ್ಪ ಎಂಬವರೇ ಈ ಚಾಲೆಂಜಿಂಗ್ ಕೃಷಿಕ. ಇವರು ತಮ್ಮ ಇತರ ಬೆಳೆಗಳ…