
ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ ಕಡಿಮೆ -ಮಾರುಕಟ್ಟೆಗೆ ಮಾಲು ಇಲ್ಲ.
ಕೆಂಪು ರಾಶಿ ಅಡಿಕೆ ಮಾರುಕಟ್ಟೆ ಹೇಗಾದರೂ ಒಮ್ಮೆ 55,000 ತಲುಪಿತು. ಆದರೆ ಶುಕ್ರವಾರದ ಮಾರುಕಟ್ಟೆ, ಭಾನುವಾರದ ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಹಾಗೂ ಇಂದು 12-09-2022 ಸಾಗರ, ಶಿವಮೊಗ್ಗದಲ್ಲಿನ ವ್ಯವಹಾರ ನೋಡುವಾಗ ಸ್ವಲ್ಪ ಸ್ವಲ್ಪ ಹಿಂದೆ ಬರುವ ಲಕ್ಷಣ ಕಾಣಿಸುತ್ತಿದೆ. ನಿಖರವಾಗಿ ಹಿಂದೆ ಬಂತು ಎಂಬಂತಿಲ್ಲ. ಇನ್ನೂ ಒಂದೆರಡು ದಿನಗಳ ಮಾರುಕಟ್ಟೆ ಸ್ಥಿತಿ ನೋಡಿ ಅಂದಾಜು ಮಾಡಬಹುದಷ್ಟೇ. ಚಾಲಿ ಮಾರುಕಟ್ಟೆಯಲ್ಲಿ ಖಾಸಗಿಯವರು ಸ್ವಲ್ಪ ಮುಂದೆ ಬಂದಿದ್ದಾರೆ. ಅಡಿಕೆ ಬರುತ್ತಿಲ್ಲ ಎಂಬ ಕಾರಣಕ್ಕೆ ದರ ಏರಿಸಲಾಗಿದೆ ಎನ್ನುತ್ತಾರೆ. ಚಾಲಿ ದರ ಏರಿಕೆ-…