ದೇಸೀಹಸು- ಪೌಷ್ಟಿಕ ಹಾಲಿನ ಖನಿ
ನಾವು ಹಾಲು ಕರೆಯುವಾಗ ಅದಕ್ಕೆ ಒಂದು ಸುವಾಸನೆ ಇರಬೇಕು. ಹಾಲು ಹಿಂಡಲು ಹೋಗುವಾಗ ವಾಸನೆ ಉಂಟೇ ಆ ಹಾಲೂ ವಾಸನೆಯದ್ದು. ಸ್ಥಳೀಯ ಹಸುವಿನ ಹಾಲು ಹಿಂಡುವಾಗ ಒಂದು ಪರಿಮಳ ಇದೆ. ಯಾವ ಅಡ್ಡ ವಾಸನೆಯೂ ಇಲ್ಲ. ಇದರ ರುಚಿ ಬಲ್ಲವನೇ ಬಲ್ಲ. ಮಕ್ಕಳಿಂದ ಹಿಡಿದು ವೃದ್ದಾಪ್ಯದಲ್ಲಿಯು ಅತ್ಯವಶ್ಯಕವಾಗಿ ಬಳಸುವ ಹಾಗು ಬಳಸಲೇಬೇಕಾದ ಆಹಾರ ಎಂದರೆ “ಹಾಲು ಹಾಗು ಹಾಲಿನಿಂದ ತಯಾರಿಸಿದ ಇತರೆ ಪದಾರ್ಥಗಳು”. ಹಾಲು ಒಂದು ಪರಿಪೂರ್ಣ ಆಹಾರವಾಗಿದ್ದು ಅದರಲ್ಲಿರುವ ಪೋಷಕಾಂಶಗಳು ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ…