ದೇಸೀಹಸು- ಪೌಷ್ಟಿಕ ಹಾಲಿನ ಖನಿ

Local cow hallikar- ಕರ್ನಾಟಕದ ಸ್ಥಳಿಯ ತಳಿ ಹಳ್ಲಿ ಕಾರ್

ನಾವು ಹಾಲು ಕರೆಯುವಾಗ ಅದಕ್ಕೆ ಒಂದು ಸುವಾಸನೆ ಇರಬೇಕು. ಹಾಲು ಹಿಂಡಲು ಹೋಗುವಾಗ ವಾಸನೆ  ಉಂಟೇ  ಆ ಹಾಲೂ ವಾಸನೆಯದ್ದು. ಸ್ಥಳೀಯ ಹಸುವಿನ ಹಾಲು  ಹಿಂಡುವಾಗ ಒಂದು ಪರಿಮಳ ಇದೆ. ಯಾವ ಅಡ್ಡ ವಾಸನೆಯೂ  ಇಲ್ಲ. ಇದರ ರುಚಿ ಬಲ್ಲವನೇ ಬಲ್ಲ.

ಮಕ್ಕಳಿಂದ ಹಿಡಿದು ವೃದ್ದಾಪ್ಯದಲ್ಲಿಯು ಅತ್ಯವಶ್ಯಕವಾಗಿ ಬಳಸುವ ಹಾಗು ಬಳಸಲೇಬೇಕಾದ ಆಹಾರ ಎಂದರೆ ಹಾಲು ಹಾಗು ಹಾಲಿನಿಂದ ತಯಾರಿಸಿದ ಇತರೆ ಪದಾರ್ಥಗಳು. ಹಾಲು ಒಂದು ಪರಿಪೂರ್ಣ  ಆಹಾರವಾಗಿದ್ದು ಅದರಲ್ಲಿರುವ ಪೋಷಕಾಂಶಗಳು ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಹಾಲು ಸೇವಿಸುವಾಗ ಹಾಲಿನ ಗುಣಮಟ್ಟ, ಹಾಲು ಉತ್ಪಾದಿಸಲು ಬಳಸಿದ ಹಸುವಿನ ತಳಿಗಳ ಬಗ್ಗೆ ತಿಳಿದುಕೊಂಡರೆ ಆರೋಗ್ಯ ದೃಷ್ಟಿಯಿಂದ ಉತ್ತಮ.

ಹಾಲಿನಲ್ಲೂ ಹೀಗೆಲ್ಲಾ ಇದೆಯಾ?

Milking of local cow - ದೇಸಿ ತಳಿಯ ದನದ ಹಾಲು ಹಿಂಡುವಿಕೆ

 • ಹಸುವಿನ ಹಾಲಿನಲ್ಲಿ  ಎರೆಡು ಬಗೆ : A1  ಮತ್ತು   A2  .
 • A1  ಅಂದರೆ  ವಿದೇಶಿ ಹಸು ತಳಿಗಳಾದ ಎಚ್ . ಎಫ್ , ಜರ್ಸಿ ಇತ್ಯಾದಿಗಳಿಂದ ಪಡೆದ ಹಾಲು.
 • ಅದೇ ರೀತಿ ನಮ್ಮ ದೇಶಿ ಹಸುವಿನ ತಳಿಗಳಾದ ಗಿರ್, ಮಲೆನಾಡು ಗಿಡ್ಡ ಇತ್ಯಾದಿಗಳಿಂದ ಉತ್ಪಾದಿಸಿದ ಹಾಲಿಗೆ A2 ಎಂದು ಹೆಸರಿಸಲಾಗಿದೆ.
 • ಕೇವಲ ಅಧಿಕ ಉತ್ಪಾದನೆಗೆ ಮೊರೆಹೊಕ್ಕು  ನಮ್ಮ ದೇಶದಲ್ಲಿ ವಿದೇಶಿ ತಳಿಗಳ ಸಾಕಾಣಿಕೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತಿದೆ.
 • ಆದರೆ ಅವುಗಳಿಂದ ದೊರೆತ ಹಾಲು ಹಾಗು ಹಾಲಿನ ಪದಾರ್ಥಗಳಲ್ಲಿ  ಪೊಷಕಾಂಶಗಳ ಕೊರತೆ ಜೊತೆಗೆ ಕೆಸೊಮೊಫಿನ್ ಎಂಬ ರಾಸಾಯನಿಕ ಅಂಶ ಹೊಂದಿದ್ದು ,
 • ಇದನ್ನು ಸೇವಿಸುವುದರಿಂದ ಮಾರಕ ರೋಗಗಳಾದ ಮದುಮೇಹ, ರಕ್ತದೊತ್ತಡ, ಅಸ್ತಮಾ, ಕ್ಯಾನ್ಸರ್ ಹಾಗು ಜೀರ್ಣ ಕ್ರಿಯೆಗೆ ಸಂಭಂದಪಟ್ಟ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.

ಬೆಳ್ಳಗಿರುವುದೆಲ್ಲ ಹಾಲಲ್ಲ  ಇದು ಸತ್ಯ:

 • ವಿದೇಶಗಳಲ್ಲಿ ತಳಿಗಳನ್ನು ಹೆಚ್ಚಾಗಿ ಮಾಂಸಕ್ಕಾಗಿ ಸಾಕಿ ಅವುಗಳ ಮಾಂಸವನ್ನು  ಪ್ರಪಂಚದ್ಯಾಂತ  ರಫ್ತುಮಾಡಿ,   ದೇಶಿ ಹಸುವಿನ  ತಳಿಗಳಿಂದ ಉತ್ಪಾದಿಸಿದ ಹಾಲಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ .
 • ಆದರೆ ದೇಶಿ ಹಸುವಿನ ಮೂಲ ತಳಿಗಳನ್ನು  ಹೊಂದಿರುವ ನಮ್ಮ  ಭಾರತ ಇವುಗಳ ಮಹತ್ವವನ್ನು ಅರಿಯದಿರುವುದು ದುರಂತವೆ ನಿಜ.   

ದೇಶಿ ಹಸುವಿನ ವೈಷಿಷ್ಟತೆ:    

 Gir cow India's local breed - ಭಾರತದ ದೇಸಿ ತಳಿ ಗಿರ್

 • ನಮ್ಮೆಲ್ಲರ ಚಿರ ಪರಿಚಿತ ಗೀರ್ ಹಸುವಿನ ಶರೀರದ ಮೇಲೆ ಕುಂಭವಿದೆ.
 • ಇದು ಸೂರ್ಯನ ಕಿರಣಗಳನ್ನು  ಹಾಗು ಸುತ್ತಲಿನ ವಾತಾವರಣದಲ್ಲಿರುವ ಔಷಧಾತ್ಮಕ ಗುಣಗಳನ್ನು ಗೃಹಿಸುತ್ತದೆ.
 • ಹಾಗಾಗಿ ದೇಶಿಹಸುವಿನಿಂದ ಉತ್ಪಾದಿಸಿದ ಹಾಲು, ತುಪ್ಪ, ಮೊಸರು ಹಾಗು ಗೊಮುತ್ರವು ದೇಹದ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು  ಹಾಗೂ ರೋಗನಿರೋಧಕ ಅಂಶವು ಹೆರಳವಾಗಿದೆ ಎಂದು ಸಂಶೊದನೆಗಳಿಂದ ದೃಡಿಕರಿಸಲಾಗಿದೆ
 • ಆದರೆ ವಿದೇಶಿ ಹಸುವಿನ ತಳಿಗಳುÀ (ಎಚ್. ಎಫ್ , ಜರ್ಸಿ ಇತ್ಯಾದಿ ವಿಷೇಶತೆ ಹೊಂದಿರುವುದಿಲ್ಲ.
 • ಆದ ಕಾರಣ ಅವುಗಳಿಂದ ಉತ್ಪಾದಿಸಿದ ಹಾಲು , ತುಪ್ಪ ಹಾಗು ಗೊಮುತ್ರಗಳಲ್ಲಿ ಯಾವುದೆ ಔಷದಾತ್ಮಕ ಗುಣಗಳು ಇರುವುದಿಲ್ಲ.
 • ಬದಲಾಗಿ ಅವುಗಳನ್ನು ಸೇವಿಸುವುದರಿಂದ ಮಾರಣಾಂತಿಕ ರೋಗಗಳಿಗೆ ನಮ್ಮ ಜನರು ತುತ್ತಾಗುತಿದ್ದಾರೆ.
 • A1 ಹಾಲಿನಿಂದ ದುಷ್ಪರಿಣಾಮಗಳಿಗೆ  ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚು ಹೆಚ್ಚು ಬಾಧಿತರಾಗುತ್ತಿದ್ದಾರೆ.

A2  ಹಾಲಿನಲ್ಲಿರುವ   ಚಿಕಿತ್ಸಾತ್ಮಕ ಗುಣಗಳು;

 • ಅಧಿಕ ಪ್ರಮಾಣದ ಪ್ರೊಟಿನ್ , ಕೊಬ್ಬು , ಶರ್ಕರಪಿಷ್ಟ, ಲ್ಯಾಕ್ಟೊಸ್, ವಿಟಾಮಿನ್ ಮತ್ತು ಖನಿಜಾಂಶಗಳನ್ನು  ಹೊಂದಿರುವುದರಿಂದ ಹಾಲು ಒಂದು ಪರಿಪೂರ್ಣ ಆಹಾರ ಎಂದು ಪರಿಗಣಿಸಲಾಗಿದೆ.
 • ಹಾಲಿನಲ್ಲಿರುವ ಕೇಸಿನ್ ಎಂಬ ಪ್ರೊಟಿನ್ ನಮ್ಮ ದೇಹದಲ್ಲಿ ಉತ್ಪಾದನೆ ಆಗದ ಎಲ್ಲ ಅಮೈನೊ ಆಮ್ಲವನ್ನು ಹೊಂದಿದೆ. ಆದ್ದರಿಂದ ದಿನದಲ್ಲಿ 300 ಮಿ.ಲಿ ಕನಿಷ್ಟ ಹಾಲು ಸೇವಿಸುವುದರಿಂದ, ದಿನದ  ಪ್ರೊಟಿನ್ ಬೇಡಿಕೆಯನ್ನು ಪೂರೈಸಬಹುದು.
 • ದೇಶಿ ಹಸುವಿನ ಹಾಲನ್ನು ನಿತ್ಯ ಉಪಯೊಗಿಸುವುದರಿಂದ ಗುಣಮಟ್ಟವಾದ ಕ್ಯಾಲ್ಸಿಯಂ ದೇಹಕ್ಕೆ ದೊರಕುವುದು. ಇದರಿಂದ ಕ್ಯಾಲ್ಸಿಯಂ ಕೊರತೆಯಿಂದಾಗುವ ಅಡ್ಡಪರಿಣಾಮಗಳಾದ ಸ್ನಾಯುಗಳ ಸೆಳೆತ, ಮೂಳೆ ಸವಿಯುವಿಕೆ ಹಾಗು ಅರ್ಥರೈಟಿಸ್ ಮುಂತಾದವುಗಳನ್ನು ತಡೆಗಟ್ಟಬಹುದು.
 • ಹಸುವಿನ ಹಾಲಿನಲ್ಲಿರುವ ವಿಟಮಿನ್ ಹಾಗು ಖನಿಜಾಂಶಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇಶಿ ಹಸುವಿನ ಹಾಲಿನಲ್ಲಿ ಲ್ಯಾಕ್ಟೊಫೆರಿನ್ (Lactoferrin) ಎಂಬ ಅಂಶವು ಹೆರಳವಾಗಿದ್ದು  ಸೂಕ್ಷ್ಮ ಜೀವಾಣುಗಳಿಂದಾಗುವ ಅಡ್ಡಪರಿಣಾಮಗಳನ್ನು    ಕಡಿಮೆ ಮಾಡುತ್ತದೆ.
 • ಒಮೆಗಾ ಫ್ಯಾಟಿ ಆಸಿಡ್ (Omega Fatty Acids) ಹಾಗು ಸೆರೆಡ್ರೊಸೈಡ್ಸ್ (ceredrosides) ಅಂಶವು ಮಕ್ಕಳ ಬುಧ್ದಿ ಬೆಳವಣಿಗೆಯಲ್ಲಿ ಅತಿ ಅವಶ್ಯಕ.
 • ದೇಶಿ ಹಸುವಿನ ಹಾಲಿನಲ್ಲಿ  ಅಂಶವಿರುವುದರಿಂದ ಮೆದುಳಿಗೆ ಸಂಭಂದಿಸಿದ ಬೆಳವಣಿಗೆಯಲ್ಲಿ  ಹೆಚ್ಚು ಪ್ರಯೊಜನಕಾರಿ ಆಗಿದೆ.
 • ಬಾಹ್ಯ ವಾತಾವರಣದಿಂದ ಹೊರಹೊಮ್ಮುವ ಅಹಿತಕರವಾದ ಹಾನಿಕಾರಕ ಕ್ಷಕಿರಣಗಳಿಂದ ದೇಹವನ್ನು ರಕ್ಷಿಸುವ ಸಾಮರ್ಥ್ಯ ಕೂಡ ದೇಶಿ ಹಸುವಿನ ಹಾಲು ಹಾಗು ಉತ್ಪನ್ನಗಳಲ್ಲಿ ನಾವು ಕಾಣಬಹುದು.
 • ಹಾಲಿನಲ್ಲಿರುವ ಗುಣಮಟ್ಟ ಪ್ರೊಟಿನ್ ಅಂಶವು  ನಮ್ಮ  ದೇಹದಲ್ಲಿರುವ ಕೆಂಪು ರಕ್ತಕಣಗಳ ಸಂಖ್ಯೆ  ಹಾಗು ಅವುಗಳ ಗುಣಮಟ್ಟವನ್ನು  ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
 • ರಕ್ತಹೀನತೆ (Anaemia) ಮತ್ತು ಪೋಷಕಾಂಶಗಳ ಕೊರತೆಯಿಂದ (Nutrient Deficiency) ಮುಕ್ತರಾಗಲು ದಿನನಿತ್ಯ A2 ಹಾಲನ್ನು ಸೇವಿಸುವುದು ಸೂಕ್ತ ಪರಿಹಾರವಾಗಿದೆ
 • ಇದರಲ್ಲಿರುವ (Hydroxyapatite) ಎಂಬ ಖನಿಜಾಂಶದಿಂದ ಮೂಲಗಳ ಜೋಡಣೆ  ಹೆಚ್ಚು ಉತ್ತಮವಾಗಿ ರೂಪಗೊಳ್ಳುತ್ತದೆ.
 • A2 ಹಾಲಿನಲ್ಲಿರುವ ವಿಟಮಿನ್ A ವಿಟಮಿನ್ ಹಾಗು  ಜಿಂಕ್ (Zinkಖನಿಜಾಂಶವು  ಉತ್ಕರ್ಷಣಾ  ನಿರೋದಕ ಚಟುವಟಿಕೆಯಲ್ಲಿ (Antioxidant Properties) ಕಾರ್ಯ ನಿರ್ವಹಿಸುತ್ತವೆ
 • ಇದರಿಂದ ಹೃದಯ ಸಂಭಂದಿತ ಕಾಯಿಲೆ ಹಾಗು ಕ್ಯಾನ್ಸರ್  ನಂತಹ ಮಾರಣಾಂತಿಕ ರೋಗಗಳನ್ನು ತಡೆಗಟ್ಟಬಹುದು.
 • ಇಂದಿನ ದಿನಗಳಲ್ಲಿ ಒತ್ತಡ ಹಾಗು ಬದಲಾದ ಜೀವನ ಶೈಲಿಯಿಂದ ನಾವು  ಆಹಾರದ  ವಿಷಯದಲ್ಲಿ ಕಾಳಜಿ ವಹಿಸದ ಕಾರಣ  ದೇಹದ ತೂಕ ಹೆಚ್ಚಿಸಿ ಬೊಜ್ಜು ಎಂಬ ತೊಂದರೆ ಗೊಳಗಾಗುತ್ತಿದ್ದೇವೆ.
 • A2 ಹಾಲಿನಲ್ಲಿರುವ  (Short Chain Fatty Acids) ಅನಗತ್ಯವಿರುವ ಕೊಬ್ಬಿನಾಂಶವನ್ನು ಕರಗಿಸಿ, ಬೊಜ್ಜಿನಿಂದಾಗುವ ಅಡ್ಡಪರಿಣಾಮಗಳಾದ ಮದುಮೇಹ ಹಾಗು ಹೃದಯ ಸಂಬಂದಿಸಿದ ಕಾಯಿಲೆಗಳನ್ನು ತಡೆಗಟ್ಟುತ್ತದೆ.
 • ನಮ್ಮ ದೇಹದಲ್ಲಿ ಕೊಟ್ಯಾಂತರ ಸಂಖ್ಯೆ ಯಲ್ಲಿ ಸೂಕ್ಷ್ಮ ಜೀವಾಣು ಗಳು ವಾಸಿಸುತ್ತವೆ
 • ಅವುಗಳನ್ನು ಪೂರಕ ಹಾಗು ಮಾರಕವಾಗಿ  ವಿಂಗಡಿಸಲಾಗುತ್ತದೆ
 • ಆರೋಗ್ಯಕ್ಕೆ ಪೂರಕವಾದ ಸೂಕ್ಷ್ಮ ಜೀವಾಣುಗಳು(Probiotics) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
 • ಸೂಕ್ಷ್ಮ ಜೀವಾಣು ಗಳ ಸಂಖ್ಯೆ ಯನ್ನು  ಹೆಚ್ಚಿಸಲು ದೇಶಿ ಹಸುವಿನ ಹಾಲು , ತುಪ್ಪ, ಮೊಸರು ಹಾಗು ಇತರೆ ಹಾಲಿನ ಉತ್ಪನ್ನಗಳು ಅತ್ಯಂತ ಸಹಾಯಕವಾಗಿವೆ.

ಹಲವಾರು  ಚಿಕಿತ್ಸಾತ್ಮಕ ಗುಣಗಳನ್ನು ಹೊಂದಿರುವ ದೇಶಿ ಹಸುವಿನ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು  ಆಯುವೆ9 ಚಿಕಿತ್ಸಾತ್ಮಕ ಕ್ರಮಗಳಲ್ಲಿ ಬಳಸಲಾಗುತ್ತಿದೆ. ಕೇವಲ ಹಾಲು, ಮೊಸರು , ತುಪ್ಪ  ಗಳಿಗೆ ಸಿಮಿತವಾಗದೆ ಅನೇಕ ಮೌಲ್ಯವರ್ಧಿತ ಉತ್ಪನ್ನಗಳನ್ನು ಹೊರತರಲು ಹಾಗು ಜಾಗೃತೆ ಮೂಡಿಸುವಲ್ಲಿ  ಅನೇಕ ಹೈನು ಸಂಶೊದನಾ ಕೇಂದ್ರಗಳು  ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.
ಲೇಖಕರು : ಸಂಧ್ಯಾ ಎಸ್. ರ್‍ಯಾವನಕಿ ,  ಪಲ್ಲವಿ ಬದಾಮಿ, ಪೂಜಾ ಎಸ್. ಪಿ.,ವೀಣಾ ಬುಶೆಟ್ಟಿ  ಹಾಗು  ಪ್ರೀತಮ್ ಎಸ್. ಎಮ್,                                                       ಕೃಷಿ ವಿಶ್ವವಿದ್ಯಾಲಯ  ಧಾರವಾಡ,  ಕೃಷಿ ವಿಶ್ವವಿದ್ಯಾಲಯ ಬೆಂಗಳೂರು
end of the article:—————————————————————
search words: Indigenous cow# Cow milk# A1 milk# A2 milk# healthy milk# Antioxidants#  nutrient rich milk# Ghir cow#Sahivala cow# Local cow#

Leave a Reply

Your email address will not be published. Required fields are marked *

error: Content is protected !!