ಈ ಗಡ್ಡೆಗೆ ಬಹಳ ಬೇಡಿಕೆ ಮತ್ತು ಉತ್ತಮ ಬೆಲೆ.
ಗಡ್ಡೆ ಗೆಣಸಿನ ಬೆಳೆಗಳಲ್ಲಿ ಅಧಿಕ ಬೆಲೆಯ ಬೆಳೆ ಎಂದರೆ ಸಾಂಬ್ರಾಣಿ. ಚೈನೀಸ್ ಪೊಟ್ಯಾಟೋ ಎಂಬ ಈ ತರಕಾರಿ ನಮ್ಮಲ್ಲಿ ಬಹಳ ಪುರಾತನ ಕಾಲದಿಂದಲೂ ಬೆಳೆಯಲ್ಪಡುತ್ತಿತ್ತು. ಈಗ ಇದನ್ನು ಕೆಲವೇ ಕೆಲವು ಜನ ಮಾತ್ರ ಬೆಳೆಯುತ್ತಿದ್ದು, ಸರಾಸರಿ ಕಿಲೋ 60 ರೂ ತನಕ ಬೆಲೆ ಇದೆ. ಅಪರೂಪದ ತರಕಾರಿಯಾದ ಕಾರಣ ಬಾರೀ ಬೇಡಿಕೆಯೂ ಇದೆ. ತರಕಾರಿ ಅಂಗಡಿಗೆ ಬರುವುದೇ ಕಡಿಮೆ. ಬಂದರೆ ಕ್ಷಣದಲ್ಲಿ ಖಾಲಿ. ಆಲೂಗಡ್ಡೆಯ ತರಹವೇ ಇರುವ ಈ ಗಡ್ಡೆ ಅದರ ತಮ್ಮ ಎಂದರೂ ತಪ್ಪಾಗದು. ಆಲೂಗಡ್ಡೆಗೂ ಇದಕ್ಕೂ…