ಕೊಟ್ಟಿಗೆ ಗೊಬ್ಬರಕ್ಕೆ ಪರ್ಯಾಯ ಈ ಸೊಪ್ಪುಗಳು.
ಇಂದಿನ ಸಾರ್ವಕಾಲಿಕ ಸಮಸ್ಯೆಯಾದ ಕೆಲಸದವರ ಕೊರತೆ. ಈ ಕೊರತೆಯಿಂದಾಗಿಯೇ ನಾವು ರಾಸಾಯನಿಕ ಗೊಬ್ಬರ, ಕಳೆ ನಾಶಕ ಹೆಚ್ಚಾಗಿ ಬಳಕೆ ಮಾಡುತ್ತಿರುವುದು. ಅದನ್ನು ಕಡಿಮೆ ಮಾಡಲು ಹಸುರೆಲೆ ಗೊಬ್ಬರ ಗಿಡಗಳೂ ಸಹಕಾರಿ ಹೇಗೆ ಗೊತ್ತೇ? ಕೊಟ್ಟಿಗೆ ಗೊಬ್ಬರ ಬೇಕಾದರೆ ಹಸು ಸಾಕಬೇಕು. ಹಸು ಸಾಕಿದರೆ ಅದಕ್ಕೆ ಮೇವು ಬೆಳೆಸಬೇಕು. ಸಾಕಷ್ಟು ಪಶು ಆಹಾರ ಕೊಡಬೇಕು. ಅದೇ ರೀತಿ ದೈನಂದಿನ ಸಮಯದ ಅವಧಿಯಲ್ಲಿ ಅರ್ಧ ಪಾಲು ಸಮಯವನ್ನು ಅದಕ್ಕೇ ಮೀಸಲಿಡಬೇಕು. ಈ ಕಸುಬು ಕೆಲವರಿಗೆ ಮಾತ್ರ ಲಾಭವಾಗುತ್ತದೆ. ಈ ಕಾರಣಕ್ಕಾಗಿಯೇ…