
ನಾವು ಬೆಳೆಯುವ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಗೊತ್ತೇ?
ನಾವೆಲ್ಲಾ ಅಡಿಕೆ ಬೆಳೆಗಾರರು. ಆದರೆ ನಮಗೆ ಇನ್ನೂ ಸ್ಪಷ್ಟವಾಗಿ ನಾವು ಬೆಳೆದ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಎಂದು ಗೊತ್ತೇ ಇಲ್ಲ.ನಾವು ಬೆಳೆಯುವ ಅಡಿಕೆ ಸಧ್ಯದ ಮಟ್ಟಿಗೆ ಬಳಕೆಯಾಗುವುದು ಈ ಎಲ್ಲಾ ರೂಪಗಳಲ್ಲಿ ಜಗಿದು ಉಗುಳುವುದಕ್ಕೆ ಮಾತ್ರ. ಅಡಿಕೆ ಎಂದರೆ ಅದು ಟ್ಯಾನಿನ್ (ಚೊಗರು) ಒಳಗೊಂಡ ಒಂದು ಬೀಜ ಎಂದು ವ್ಯಾಖ್ಯಾನಿಸಬಹುದು. ಅಡಿಕೆ ಕಾಯಿ ಬೆಳೆದು ಹಣ್ಣಾದ ಮೇಲೆ ಕೊಯಿಲು ಮಾಡಿ ನಿರ್ದಿಷ್ಟ ದಿನಗಳ ವರೆಗೆ ಸೂರ್ಯನ ಬೆಳಕಿನಲ್ಲಿ ಒಣಗಿಸಿ, ಸಿಪ್ಪೆ ಸುಲಿದಾಗ ದೊರೆಯುವುದು ಚಾಲಿ ಅಥವಾ ಸುಪಾರಿ…