ಕೀಟ- ರೋಗನಾಶಕ – ಪೋಷಕಾಂಶಗಳನ್ನು ಹೇಗೆ ಸಿಂಪರಣೆ ಮಾಡಬೇಕು.
ಬಹಳಷ್ಟು ಜನ ರೈತರು ಕೀಟ- ರೋಗ ನಿಯಂತ್ರಣಕ್ಕೆ ಹಾಗೆಯೇ ಪೋಷಕಾಂಶಗಳನ್ನು ಬೆಳೆಗಳಿಗೆ ಸಿಂಪರಣೆ ಮಾಡುವಾಗ ಸರಿಯಾದ ವಿಧಾನದಲ್ಲಿ ಮಾಡದೆ ಅದರ ಸರಿಯಾದ ಫಲಿತಾಂಶ ಪಡೆಯುತ್ತಿಲ್ಲ. ಬೆಳೆಗಳಿಗೆ ಕೀಟ, ರೋಗನಾಶಕಗಳನ್ನು , ಪೋಷಕಗಳನ್ನು ಹಾಗೆಯೇ ಇನ್ನಿತರ ಕೆಲವು ಉದ್ದೇಶಗಳಿಗೆ ಸಿಂಪರಣೆ ಮಾಡಲಾಗುತ್ತದೆ. ಹೆಚ್ಚಿನ ಸಿಂಪರಣೆಗಳು ಎಲೆಗೆ ಸಿಂಪಡಿಸುವುದಾಗಿದ್ದು, ಇದನ್ನು ಪತ್ರ ಸಿಂಚನ (Folie spray ) ಎಂದು ಕರೆಯಲಾಗುತ್ತದೆ. ಯಾವುದೇ ಸಿಂಪರಣೆ ಇರಲಿ, ಅದರಲ್ಲಿ ನಮಗೆ ನಿರೀಕ್ಷಿತ ಫಲಿತಾಂಶ ಬೇಕೆಂದಾದಲ್ಲಿ ಸರಿಯಾದ ವಿಧಾನದಲ್ಲಿ ಸಿಂಪರಣೆ ಮಾಡಿದರೆ ಮಾತ್ರ ಪಡೆಯಲು…