ತೆಂಗಿನ ಮರಗಳಿಗೆ ಉಪ್ಪು ಹಾಕಿದರೆ ಏನು ಪ್ರಯೋಜನ.
ತೆಂಗಿನ ಮರದ ಬುಡಕ್ಕೆ ಉಪ್ಪು ಹಾಕುವ ಬಗ್ಗೆ ತಿಳಿದುಕೊಳ್ಳಲು ಕೂತೂಹಲವೇ? ಇಲ್ಲಿದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ. ನಮ್ಮ ಹಿರಿಯರು ಅದರಲ್ಲೂ ಕರಾವಳಿ ಭಾಗದ ತೆಂಗು ಬೆಳೆಗಾರರು ತೆಂಗಿನ ಮರದ ಬುಡಕ್ಕೆ ವರ್ಷಕ್ಕೊಮ್ಮೆ 2 ಸೇರು ಉಪ್ಪು ಹಾಕುತ್ತಿದ್ದರು. ಇದಕ್ಕೆ ಇವರು ಕೊಡುತ್ತಿದ್ದ ಕಾರಣ ಉಪ್ಪು ಹಾಕಿದರೆ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ ಎಂದು. ಹಿಂದೆ ಈಗಿನಂತೆ ತೆಂಗಿಗೆ ನೀರು ಉಣಿಸುವ ಪದ್ದತಿ ಕಡಿಮೆ ಇತ್ತು. ಆಗ ಬೇಸಿಗೆಯಲ್ಲಿ ತೇವಾಂಶವನ್ನು ಇದು ಉಳಿಸಿ ತೆಂಗನ್ನು ರಕ್ಷಿಸುತ್ತದೆ ಎನ್ನುತ್ತಿದ್ದರು. ಇದಲ್ಲದೆ …