ತೆಂಗಿನ ಮರಗಳಿಗೆ ಉಪ್ಪು ಹಾಕಿದರೆ ಏನು ಪ್ರಯೋಜನ.

by | Jan 24, 2021 | Manure (ಫೋಷಕಾಂಶ), Coconut (ತೆಂಗು) | 0 comments

ತೆಂಗಿನ ಮರದ ಬುಡಕ್ಕೆ ಉಪ್ಪು ಹಾಕುವ ಬಗ್ಗೆ ತಿಳಿದುಕೊಳ್ಳಲು ಕೂತೂಹಲವೇ? ಇಲ್ಲಿದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ.
ನಮ್ಮ ಹಿರಿಯರು ಅದರಲ್ಲೂ ಕರಾವಳಿ ಭಾಗದ ತೆಂಗು ಬೆಳೆಗಾರರು ತೆಂಗಿನ ಮರದ ಬುಡಕ್ಕೆ ವರ್ಷಕ್ಕೊಮ್ಮೆ 2 ಸೇರು ಉಪ್ಪು ಹಾಕುತ್ತಿದ್ದರು. ಇದಕ್ಕೆ ಇವರು ಕೊಡುತ್ತಿದ್ದ ಕಾರಣ ಉಪ್ಪು ಹಾಕಿದರೆ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ ಎಂದು. ಹಿಂದೆ ಈಗಿನಂತೆ ತೆಂಗಿಗೆ ನೀರು ಉಣಿಸುವ ಪದ್ದತಿ ಕಡಿಮೆ ಇತ್ತು. ಆಗ ಬೇಸಿಗೆಯಲ್ಲಿ ತೇವಾಂಶವನ್ನು ಇದು ಉಳಿಸಿ ತೆಂಗನ್ನು ರಕ್ಷಿಸುತ್ತದೆ ಎನ್ನುತ್ತಿದ್ದರು.

salt applied to coconut

  • ಇದಲ್ಲದೆ  ಉಪ್ಪಿನ ಬಳಕೆಯಲ್ಲಿ ಇನ್ನೂ ಕೆಲವು ಪ್ರಾಮುಖ್ಯವಾದ ಅಂಶಗಳು ಇವೆ.
  • ಸಮುದ್ರದ ಬದಿಯ ಕರಾವಳಿ ಗುಂಟ ಬೆಳೆಯುವ ತೆಂಗಿನಲ್ಲಿ ಇಳುವರಿ ಹೆಚ್ಚು ಬರುತ್ತದೆ.
  • ಕಾರಣ ಅಲ್ಲಿನ ಮಣ್ಣಿನಲ್ಲಿ ಉಪ್ಪಿನ ಅಂಶ ಇರುತ್ತದೆ.
  • ಗಾಳಿಯಲ್ಲೂ ಉಪ್ಪಿನ ಅಂಶ ಇರುತ್ತದೆ.
  • ಇದು ತೆಂಗಿನ ಇಳುವರಿ ಹೆಚ್ಚಳಕ್ಕೆ ನೆರವಾಗುತ್ತದೆ ಎನ್ನುವವರೂ ಇದ್ದಾರೆ.

ವಿಜ್ಞಾನ ಹೇಳುವುದೇನು?

  • ಉಪ್ಪು ಅಂದರೆ ಸೋಡಿಯಂ ಕ್ಲೋರೈಡ್. ಅದು ಸಮುದ್ರದ ನೀರಿನಲ್ಲೂ ಇರುತ್ತದೆ.
  • ಕೆಲವು ಮಣ್ಣಿನಲ್ಲೂ ಉಂಟಾಗುತ್ತದೆ.ಉಪ್ಪಿನಲ್ಲಿ ನಮ್ಮ ಹಿರಿಯರು ಹೇಳುವುದಕ್ಕೂ  ಕೆಲವು ವೈಜ್ಞಾನಿಕ ಅಧ್ಯನಗಳು  ಹೇಳುವುದಕ್ಕೂ ವ್ಯತ್ಯಾಸ ಕಂಡು ಬರುತ್ತದೆ.
  • ಉಪ್ಪು ಮಣ್ಣಿಗೆ ಅಗತ್ಯವಿಲ್ಲ ಎಂಬುದು ಕೆಲವರು ಹೇಳುವ ಸಂಗತಿ.
  • ಉಪ್ಪು ಎಂಬುದು ಕೆಲವು ಮಣ್ಣಿನ ಗಟ್ಟಿ ಕಲ್ಲುಗಳನ್ನು( ಜಂಬಿಟ್ಟಿಗೆ) ಸ್ವಲ್ಪ ಮಟ್ಟಿಗೆ ಕರಗಿಸಿ ಕೊಡುತ್ತದೆ.
  • ಅಂದರೆ ಉಪ್ಪಿಗೆ ಮಣ್ಣನ್ನು ಚದುರಿಸುವ ಗುಣ ಇದೆ.
  • ಹಾಗೆಂದು  ಇದು ಒಂದು ಪೋಷಕ ಅಲ್ಲ.
  • ಇದು ಸಸ್ಯ ಬೆಳೆವಣಿಗೆಗೆ ಪ್ರಯೋಜನ ಕೊಡುವುದಿಲ್ಲ ಎನ್ನುತ್ತಾರೆ.

Advertisement 6

  • ಉಪ್ಪು ಹಾಕುವುದರಿಂದ ಬೇರುಗಳಿಗೆ ಉಸಿರು ಕಟ್ಟಿದ ವಾತಾವರಣ ಉಂಟಾಗುತ್ತದೆ.
  • ಬೇರಿನ ಬೆಳೆವಣಿಗೆಗೆ ಅಡ್ಡಿ ಉಂಟಾಗುತ್ತದೆ.
  • ನೀರಿನ ಹೀರುವಿಕೆಗೆ ಮತ್ತು ಇತರ ಅಗತ್ಯ ಖನಿಜಗಳಾದ ಪೊಟ್ಯಾಶಿಯಂ, ಕ್ಯಾಲ್ಸಿಯಂ , ನೈಟ್ರೇಟ್,  ಮುಂತಾದವುಗಳ ಹೀರುವಿಕೆಗೆ ಅಡ್ಡಿ ಉಂಟಾಗುತ್ತದೆ.
  • ಸಸ್ಯಗಳ ಅಂಗಾಂಶಗಳನ್ನು ಘಾಸಿ ಮಾಡುವ ಕಾರಣ  ಇದು ವಿಷಕಾರಿಯೆಂದೇ ಹೇಳಬಹುದು.
  • ದ್ಯುತಿ ಸಂಸ್ಲೇಷಣ ಕ್ರಿಯೆ ಸರಿಯಾಗಿ ನಡೆಯುವುದಿಲ್ಲ.
  • ಪ್ರೋಟೀನುಗಳು ಉತ್ಪತ್ತಿ ಯಾಗುವುದಿಲ್ಲ.
  • ಕ್ವಿಣ್ವಗಳು ಸ್ಥಬ್ಧವಾಗುತ್ತದೆ.
  • ಸೋಡಿಯಂ ಮತ್ತು ಕ್ಲೋರೈಡ್  ಮಣ್ಣಿನಲ್ಲಿ ಹೆಚ್ಚಾದಂತೆ ಪೋಷಕಾಂಶಗಳ ಅಸಮತೋಲನ ಉಂಟಾಗುತ್ತದೆ.
  • ಮಣ್ಣು ಕ್ಷಾರಿಯಾವಾಗುತ್ತದೆ. ಎನ್ನುತ್ತಾರೆ. ಇದರಲ್ಲಿ ಸ್ವಲ್ಪ ಸತ್ಯವಿದ್ದರೆ ಸ್ವಲ್ಪ ಮಿಥ್ಯೆ ಇದೆ.
  • Coconut yield by applying salt

ಉಪ್ಪು- ವಿದೇಶಗಳಲ್ಲಿ ಬಳಸುತ್ತಾರೆ:

ಫ್ಹಿಲಿಫಿನ್ಸ್ ನಲ್ಲಿ ತೆಂಗಿನ ಮರಗಳ ಬುಡಕ್ಕೆ ಉಪ್ಪು ಹಾಕುವುದರಿಂದ  ಇಳುವರಿಯಲ್ಲಿ 125% ಹೆಚ್ಚಳ ಕಂಡು ಬಂದಿದೆ ಎಂಬ ವರದಿ ಇದೆ. ಇದನ್ನು ಇತ್ತೀಚೆಗೆ ಇಂಡೋನೇಶಿಯಾದಲ್ಲೂ ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಮರದ ದಪ್ಪ ಹೆಚ್ಚಳವಾಗಿದೆಯಂತೆ. ಕಾಯಿಗಳ ಒಳಗಿನ ತಿರುಳು ದಪ್ಪವಾಗಿದೆ ಎಂಬ ವರದಿ ಇದೆ.  ಕೊಬ್ಬರಿ ತೂಕ ಹೆಚ್ಚಳವಾಗಿದೆ. ಇಳುವರಿಯೂ ಹೆಚ್ಚಳವಾಗಿದೆ. ಇದನ್ನು ವಿಭಜಿಸಿ ಎರಡು ಕಂತುಗಳಲ್ಲಿ ಕೊಟ್ಟರೆ ಒಳ್ಳೆಯದು. ಇದು ಪೋಷಕಾಂಶಗಳು ಇಳಿದು ಹೋಗುವುದನ್ನೂ ಸಹ ತಡೆಯಲು ಸಹಕಾರಿ ಎನ್ನುತ್ತಾರೆ. ಒಣ ಭೂಮಿಗೆ ಉಪ್ಪು ಹಾಕುವುದು ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ. ಮರವೊಂದಕ್ಕೆ ಇಲ್ಲಿ 1.5 ಕಿಲೋ ಉಪ್ಪು ಹಾಕುವ ಪ್ರತೀತಿ ಇದೆಯಂತೆ.

 ಉಪ್ಪು ಹಾಕಿ ಪ್ರಯೋಜನ ಕಂಡವರು ನಮ್ಮಲ್ಲಿಯು ಇದ್ದಾರೆ:

  • 1 ಕಿಲೋ ಸಮುದ್ರದ ಉಪ್ಪನ್ನು ಪ್ರತೀ ತೆಂಗಿನ ಮರಕ್ಕೆ ಸುತ್ತಲಿನ 2 ಮೀಟರ್ ಭಾಗಕ್ಕೆ ಪ್ರತೀ ವರ್ಷವೂ ಹಾಕುವ  ಕೆಲವು ತೋಟಗಳಲ್ಲಿ ಮರದಲ್ಲಿ ಪ್ರತೀ ತಿಂಗಳೂ ಒಂದೊಂದು ಗೊನೆ ಕಾಯಿ ಬಿಡುವುದನ್ನು ಕಂಡಿದ್ದೇವೆ. (ನಾನೂ ಫಾರಂ ಗೋವಾ)
  • ಜಂಬಿಟ್ಟಿಗೆ ಮಣ್ಣು ಇರುವ ಜಾಗದಲ್ಲಿ ತೆಂಗಿನ ಸಸಿಗೆ ಉಪ್ಪು ಹಾಇದಲ್ಲಿ ಕಲ್ಲು ಕರಗಿ ಸಸ್ಯಗಳಿಗೆ ಉಪಕಾರವಾಗುವುದನ್ನು ಕಂಡಿದ್ದೇವೆ.( ಕಾಸರಗೋಡಿನ ಕೆಲವು ತೆಂಗು ಬೆಳೆಗಾರರಲ್ಲಿ).
  • ಕೆಲವು ಅಧ್ಯಯನಕಾರರು ಕಂಡಂತೆ ಸಮುದ್ರದ ಉಪ್ಪಿನಲ್ಲಿ ಬರೇ ಸೋಡಿಯಂ ಕ್ಲೋರೈಡ್ ಮಾತ್ರವಲ್ಲದೆ ಹಲವಾರು ಇತರ ಪೋಷಕಾಂಶಗಳು ಇವೆಯಂತೆ.
  • ಇದನ್ನು ಉಚಿತ ಗೊಬ್ಬರದ ಉಗ್ರಾಣ ಎಂಬುದಾಗ ಕರೆಯಲಾಗುತ್ತದೆ.
  • ಇದರಲ್ಲಿ ಒಟ್ಟು 94 ಬಗೆಯ ಪೋಷಕಗಳಿದ್ದು, ಕೆಲವು ಅತ್ಯಲ್ಪ ಪ್ರಮಾಣದಲ್ಲಿಯೂ ಕೆಲವು ಹೇರಳವಾಗಿಯೂ ಇದೆ ಎನ್ನುತ್ತಾರೆ. http://designerecosystems.com/2014/08/24/sea-water-and-sea-salt-as-organic-fertilizer-that-makes-healthy-plants-grow-fast
  • ಬೆಳೆಗಳಿಗೆ ಬೇಕಾಗುವ ಅಗತ್ಯ ಪೋಷಕಾಂಶಗಳೆಲ್ಲವೂ ಇದರಲ್ಲಿ ಇದೆ ಎಂದು ಹೇಳುತ್ತಾರೆ.
  • 2004 ರಲ್ಲಿ ಸುನಾಮಿ ಬಂದ ಸಮಯದಲ್ಲಿ ಹಲವಾರು ಹೊಲಗಳಿಗೆ ಸಾಅಗರದ ನೀರು ನುಗ್ಗಿದ ಪರಿಣಾಮ ನಂತರದ 2 ವರ್ಷಗಳಲ್ಲಿ ಬಂಪರ್ ಇಳುವರಿ ಬಂದ ವರದಿ ಇದೆ.

ನಾವು ಬೆಳೆಗಳಿಗೆ ಬಹಳಷ್ಟು ಪೋಶಕಾಂಶಗಳನ್ನು ಕೊಡುತ್ತೇವೆ. ವಾತಾವರಣ, ಮಣ್ಣು ಎಲ್ಲರದರಲ್ಲೂ ಖನಿಜ ಪೋಷಕಾಂಶಗಳು ಇರುತ್ತವೆ. ಇನು ನೀರಿನ ಮೂಲಕ ಕೆಳಕ್ಕೆ ಇಳಿಯುತ್ತದೆ. ಕೊಚ್ಚಿ ಹೋಗುತ್ತದೆ. ಅದೆಲ್ಲದರ ಕೊನೇ ಪಾಯಿಂಟ್ ಎಂದರೆ ಸಾಗರ. ಸಾಗರದ ನೀರಿನಲ್ಲಿ ಇವೆಲ್ಲವೂ ಸೇರಿರುತ್ತದೆ. ಆದ ಕಾರಣ ಇದು ಒಂದು ಸಂಪೂರ್ಣ ಪೋಷಕಾಂಶಗಳ ಆಗರ ಎನ್ನುತ್ತಾರೆ.

  • ಸಸ್ಯ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಹೂವಾಗುತ್ತದೆ.
  • ಫಲ ಹೆಚ್ಚಾಗುತ್ತದೆ.

ಎಲ್ಲಿ ಉಪ್ಪು ಬಳಸಬಹುದು:

  • ತುಂಬಾ ಫಲವತ್ತೆತೆ ಕಡಿಮೆ ಇರುವ, ರಸಸಾರ ಕಡಿಮೆ ಇರುವ,  ಮರಳು ಮತ್ತು ಕಲ್ಲುಗಳು  ಹೆಚ್ಚು ಇರುವ , ರಂಜಕ, ಪೊಟ್ಯಾಶಿಯಂ, ಮ್ಯಾಂಗನೀಸ್, ಮೆಗ್ನೀಶಿಯಂ, ಕಬ್ಬಿಣ, ಬೊರಾನ್,  ಸತು ಅಂಶ ಕಡಿಮೆ ಇರುವಲ್ಲಿ ಉಪ್ಪನ್ನು ನಿಯಮಿತವಾಗಿ ಬಳಕೆ  ಮಾಡಿದರೆ ಫಲಿತಾಂಶ ಉತ್ತಮವಾಗಿರುತ್ತದೆ.

ಎಷ್ಟು ಉಪ್ಪು ಹಾಕಬೇಕು:

  • ನಮ್ಮಲ್ಲಿ ಕೆಲವರು ಹೇಳುವಂತೆ ಸೇರು ಸೇರು ಉಪ್ಪು ಹಾಕಬೇಕಾಗಿಲ್ಲ.
  • 10 ಚದರ ಮೀಟರು ಜಾಗಕ್ಕೆ 35 ಗ್ರಾಂ ನಷ್ಟು  ಸಮ್ಮುದ್ರದ ನೀರನ್ನೇ ಹಾಕುವುದಿದ್ದರೆ ಒಂದು ಚದರ ಮೀಟರ್ ಜಾಗಕ್ಕೆ 1 ಲೀ. ನಷ್ಟು ನೀರನ್ನು ಹಾಕಬೇಕು.
  • ಹೆಚ್ಚು ಹಾಕಬಾರದು.
  • ಒಂದು ವೇಳೆ ನೀವು ಸಿಂಪರಣೆ ಮಾಡುವುದಕ್ಕೆ ಬಳಸುವುದೇ ಆದರೆ ಒಂದು 1 ಲೀ. ಸಮುದ್ರದ ಉಪ್ಪು ನೀರಿಗೆ 20 ಲೀ. ಪ್ರಮಾಣದಲ್ಲಿ ಮಳೆ ನೀರನ್ನು ಮಿಶ್ರಣ  ಮಾಡಿ ಸಿಂಪರಣೆ ಮಾಡಬೇಕು.
  • ಇದನ್ನು ವರ್ಷಕ್ಕೆ ಎರಡು ಸಾರಿ ಬಳಕೆ ಮಾಡಬಹುದು.

ಇದು ಉಷ್ಣ ವಲಯದ ಅಧಿಕ ಮಳೆಯಾಗುವ ಭಾಗಗಳಿಗೆ ಮಾತ್ರ ಸೂಕ್ತ.ರೈತರೇ ಉಪ್ಪು ಬಳಕೆ ಬಗ್ಗೆ ನಮ್ಮ ಹಿರಿಯರು ಹೇಳುವುದರಲ್ಲಿ ಅರ್ಥ ಇಲ್ಲದಿಲ್ಲ. ಇದನ್ನು ಪುಷ್ಟೀಕರಿಸುವ ಕೆಲವು ದೃಷ್ಟಾಂತಗಳನ್ನೂ ನಾವೆಲ್ಲಾ ನೋಡಿದ್ದೇವೆ. ಹಾಗೆಂದು ತೀರಾ ಕ್ಷಾರೀಯ ಮಣ್ಣಿಗೆ ಉಪ್ಪಿನ ಬಳಕೆ ಯೋಗ್ಯವಲ್ಲ ಎನ್ನಿಸುತ್ತದೆ.

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!