ಬಾಳೆ ಯಾವಾಗ ನೆಟ್ಟರೆ ಹೆಚ್ಚು ಲಾಭವಾಗುತ್ತದೆ?
ಬಾಳೆ ಕಾಯಿಗೆ ಬೇಡಿಕೆ ಇರುವ ತಿಂಗಳುಗಳಿಗೆ 9-10 ತಿಂಗಳ ಮುಂಚೆ ನಾಟಿ ಮಾಡುವುದರಿಂದ ಬೆಳೆದವರಿಗೆ ಉತ್ತಮ ಬೆಲೆ ಸಿಕ್ಕಿ ಲಾಭವಾಗುತ್ತದೆ. ಸಾಮಾನ್ಯವಾಗಿ ಹಬ್ಬದ ದಿನಗಳು ಪ್ರಾರಂಭವಾಗುವ ನಾಗರ ಪಂಚಮಿ, ಕೃಷ್ಣಾಷ್ಟಮಿ,ಚೌತಿ ಹಬ್ಬ ನವರಾತ್ರೆ, ಮತ್ತು ದೀಪಾವಳಿಗೆ ಕಠಾವಿಗೆ ಸಿಗುವಂತೆ ಒಂದು ತಿಂಗಳ ಮಧ್ಯಂತರದಲ್ಲಿ ಬಾಳೆ ಸಸಿ ನೆಟ್ಟು ಬೆಳೆಸಿದರೆ ಎಲ್ಲಾ ಹಬ್ಬದ ಸಮಯದಲ್ಲೂ ಕಠಾವಿಗೆ ಸಿಗುತ್ತದೆ. ಹೆಚ್ಚಿನವರು ಬಾಳೆ ನಾಟಿ ಮಾಡಲು ಆಯ್ಕೆ ಮಾಡುವುದು ಮಳೆಗಾಲ ಪ್ರಾರಂಭದ ದಿನಗಳನ್ನು. ಎಲ್ಲರೂ ಇದೇ ಸಮಯದಲ್ಲಿ ನಾಟಿ ಮಾಡಿದರೆ…