ಭಾರೀ ಬೇಡಿಕೆಯ ಹೊಸತಳಿಯ ಅಡಿಕೆ – ಶತಮಂಗಳ.
ಇತ್ತೀಚೆಗೆ ಬಿಡುಗಡೆಯಾದ ಅಧಿಕ ಇಳುವರಿ ಕೊಡಬಲ್ಲ ಭಾರೀ ಭರವಸೆಯ ತಳಿ ಶತಮಂಗಳ ದ ಬೀಜ , ಸಸಿಗೆ ಭಾರೀ ಬೇಡಿಕೆ. ಈ ತಳಿಯನ್ನು CPCRI ವಿಟ್ಲ ಕೇಂದ್ರವು ಬಿಡುಗಡೆ ಮಾಡಿದ್ದು, ಈಗಿರುವ ಎಲ್ಲಾ ತಳಿಗಳಿಗಿಂತ ಅಧಿಕ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಬೆಳೆಯುವ ರೈತರು ಈ ತಳಿಗೆ ಮುಗಿ ಬೀಳುತ್ತಿದ್ದಾರೆ. ಪ್ರಾದೇಶಿಕ ತಳಿಗಳು: ಅಡಿಕೆಯಲ್ಲಿ ಮುಖ್ಯವಾಗಿ ಕೆಂಪಡಿಕೆಗೆ ಹೊಂದುವ ತಳಿ ಮತ್ತು ಚಾಲಿಗೆ ಹೊಂದುವ ತಳಿ ಎಂಬ ಎರಡು ಪ್ರಕಾರಗಳು. ಕೆಂಪಡಿಕೆಮಾಡುವ ಪ್ರದೇಶಗಳಲ್ಲಿ ಸ್ಥಳೀಯ ತಳಿಗಳೇ …