ಅಡಿಕೆ ಮಾರುಕಟ್ಟೆ ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.
ಅಡಿಕೆ ಅಥವಾ ಇನ್ಯಾವುದೇ ಮಾರುಕಟ್ಟೆ ಯಾವಾಗ ತೇಜಿಯಾಗುತ್ತದೆ, ಯಾವಾಗ ಮಂದಿಯಾಗುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಾಗಲಾರದು. ಮಾರುಕಟ್ಟೆ ವ್ಯವಹಾರದಲ್ಲಿರುವವರ ಲೆಕ್ಕಾಚಾರಗಳೇ ಬೇರೆ, ಕೃಷಿಕರ ಊಹನೆಯೇ ಬೇರೆ. ಇವಕ್ಕೆರಡಕ್ಕೂ ಹೊಂದಾಣಿಕೆ ಆಗುವುದು ತುಂಬಾ ಕಷ್ಟ. ಈ ವರ್ಷ ನಮ್ಮ ರಾಜ್ಯದಲ್ಲಿ ಚುನಾವಣೆ ಇದ್ದರೂ ಸಹ ದರ ಎರುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಇದರ ಸೂಚನೆ ದೊರೆತಿದೆ. ಕಳೆದ ಒಂದು ವಾರದಿಂದ ಕೆಂಪಡಿಕೆ ಮಾರುಕಟ್ಟೆ ಮಲಗಿದ್ದುದು ಎದ್ದು ನಿಂತಿದೆ. ಈ ಹಿಂದೆ ಎರಡು ತಿಂಗಳುಗಳ ಕಾಲ ಮಾರುಕಟ್ಟೆಯಲ್ಲಿ ಖರೀದಿದಾರರ…