ಸಣ್ಣ ಯೋಚನೆ- ದೊಡ್ದ ಫಲಿತಾಂಶ.
ನಾವು ಎಲೆಲ್ಲೋ ಪ್ರಯಾಣ ಮಾಡಬೇಕಾದರೆ ಹಲವಾರು ತೀರಾ ಸರಳವಾದ ವಿಚಾರಗಳನ್ನು ಗಮನಿಸುತ್ತೇವೆ. ಸರಳ ವಿಷಯಗಳಾದರೂ ನಮಗೆ ಅದು ಹೊಳೆದಿರುವುದಿಲ್ಲ. ಸಣ್ಣ ಯೋಚನೆಯಲ್ಲೇ ದೊಡ್ಡ ಉಪಕಾರ ಇರುತ್ತದೆ. ಅದಕ್ಕೇ ಹೇಳುವುದು ಊರು ಸುತ್ತುವುದರಿಂದ ಜ್ಞಾನರ್ಜನೆ ಆಗುತ್ತದೆ.. ನಮ್ಮಲ್ಲಿ ಅಡಿಕೆ ಮರಗಳು ಸಾಯುತ್ತವೆ. ತೆಂಗಿನ ಮರಗಳು ಸಾಯುತ್ತವೆ. ಸತ್ತ ಮರದಲ್ಲಿ ಕರಿಮೆಣಸು, ವೀಳ್ಯದೆಲೆ ಮುಂತಾದ ಬೆಳೆ ಇರುತ್ತದೆ. ಆಧಾರ ಮರ ಸತ್ತ ತರುವಾಯ ಅದು ಉತ್ತಮವಾಗಿ ಬೆಳೆಯುತ್ತದೆ. ಹೆಚ್ಚು ಫಸಲನ್ನೂ ಕೊಡುತ್ತಿರುತ್ತದೆ. ನಂತರ ಅದಕ್ಕೆ ರೋಗ ಸಹ ಬರುವುದು ನಿಧಾನ. …