ಕೃಷಿ ಲಾಭದಾಯಕವಾಗಲು ಬೇಕಾಗುವುದೇ ಉತ್ತಮ ಮಣ್ಣು – ಹೇಗೆ?
ಕೃಷಿ ಮಾಡುವ ನಾವೆಲ್ಲಾ ಮಣ್ಣಿನ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು. ಮಣ್ಣು ಮೊದಲು. ಕೃಷಿ ಅನಂತರ.ಮಣ್ಣಿನಲ್ಲಿ ಫಲವತ್ತತೆ ಇದ್ದರೆ ಮಾತ್ರ ಅದರಲ್ಲಿ ಕೃಷಿ ಮಾಡಿ. ಫಲವತ್ತತೆ ಇಲ್ಲದಲ್ಲಿ ಕೃಷಿ ಯಾವಾಗಲೂ ಲಾಭದಾಯಕವಾಗುವುದಿಲ್ಲ. ಇತ್ತೀಚೆಗೆ ಈಶ ಫೌಂಡೇಶನ್ ನ ಸಧ್ಗುರುಗಳು ತಮ್ಮ ವೀಡಿಯೊದಲ್ಲಿ ಕ್ಯಾಲಿಫೋರ್ನಿಯಾ ದೇಶವು ಅಕ್ಕಿಯನ್ನು ಥೈಲ್ಯಾಂಡ್ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಯಾಕೆ ಭಾರತದಿಂದ ಮಾಡುವುದಿಲ್ಲ ಎಂಬ ಬಗ್ಗೆ ಕೇಳಿದಾಗ ಭಾರತದ ಅಕ್ಕಿಯಲ್ಲಿ ಯಾವ ಪೋಷಕಾಂಶಗಳೂ ಇಲ್ಲ ಎನ್ನುತ್ತಾರೆ ಎಂದಿದ್ದಾರೆ. ಅದೇ ರೀತಿ ವಿಯೆಟ್ ನಾಂ ದೇಶ…