ಇರುವೆಗಳಿಂದ ಬೆಳೆಗೆ ತೊಂದರೆ ಇದೆಯೇ?
ಇರುವೆಗಳು ನಮ್ಮ ಹೊಲದಲ್ಲಿ ಅಲ್ಲಲ್ಲಿ ನೆಲದ ಮಣ್ಣನ್ನು ತಿರುವಿ ಹಾಕುವ ಕೆಲಸವನ್ನು ಮಾಡುತ್ತವೆ. ಕೆಲವೊಮ್ಮೆ ಹಣ್ಣು ಹಂಪಲುಗಳ ಮೇಲೆಯೂ ವಾಸಿಸುತ್ತವೆ. ಎಲೆಯಲ್ಲಿ ಗೂಡುಕಟ್ಟಿ ಕುಳಿತಿರುತ್ತವೆ. ಇವುಗಳಿಂದ ರೈತನಿಗೆ ಯಾವ ಹಾನಿಯೂ ಇಲ್ಲ. ಇವು ಒಂದು ದೃಷ್ಟಿಯಲ್ಲಿ ಮಣ್ಣನ್ನು ಸುಸ್ಥಿತಿಯಲ್ಲಿಡುವ ಜೀವಿಗಳು. ಯಾರ ಮಣ್ಣಿನಲ್ಲಿ ಇರುವೆಗಳು ಚಟುವಟಿಕೆಯಲ್ಲಿ ಇರುತ್ತವೆಯೋ ಆ ಮಣ್ಣು ಫಲವತ್ತಾದ ಮಣ್ಣಾಗಿರುತ್ತದೆ. ಇರುವೆಗಳಲ್ಲಿ ಪ್ರಕಾರಗಳು: ನೆಲದಲ್ಲಿ ಹಲವಾರು ಬಗೆಯ ಇರುವೆಗಳು ವಾಸವಾಗಿರುತ್ತವೆ. ಸಾಮಾನ್ಯವಾಗಿ ನೆಲದಲ್ಲಿ ಹರಿದಾಡುವ ಇರುವೆಗಳು ಬೇರೆ ಕಡೆ ವಾಸಿಸುವುದು ಅಪರೂಪ. ಕೆಲವು ಇರುವೆಗಳು…