ಇರುವೆಗಳಿಂದ ಬೆಳೆಗೆ ತೊಂದರೆ ಇದೆಯೇ?

by | Nov 1, 2020 | Soil Science (ಮಣ್ಣು ವಿಜ್ಞಾನ) | 0 comments

ಇರುವೆಗಳು ನಮ್ಮ ಹೊಲದಲ್ಲಿ ಅಲ್ಲಲ್ಲಿ ನೆಲದ ಮಣ್ಣನ್ನು ತಿರುವಿ ಹಾಕುವ  ಕೆಲಸವನ್ನು ಮಾಡುತ್ತವೆ. ಕೆಲವೊಮ್ಮೆ  ಹಣ್ಣು ಹಂಪಲುಗಳ ಮೇಲೆಯೂ ವಾಸಿಸುತ್ತವೆ. ಎಲೆಯಲ್ಲಿ ಗೂಡುಕಟ್ಟಿ ಕುಳಿತಿರುತ್ತವೆ. ಇವುಗಳಿಂದ ರೈತನಿಗೆ ಯಾವ ಹಾನಿಯೂ ಇಲ್ಲ. ಇವು ಒಂದು ದೃಷ್ಟಿಯಲ್ಲಿ  ಮಣ್ಣನ್ನು ಸುಸ್ಥಿತಿಯಲ್ಲಿಡುವ ಜೀವಿಗಳು. ಯಾರ ಮಣ್ಣಿನಲ್ಲಿ ಇರುವೆಗಳು ಚಟುವಟಿಕೆಯಲ್ಲಿ ಇರುತ್ತವೆಯೋ ಆ ಮಣ್ಣು ಫಲವತ್ತಾದ ಮಣ್ಣಾಗಿರುತ್ತದೆ.

ಇರುವೆಗಳಲ್ಲಿ ಪ್ರಕಾರಗಳು:

ಮಣ್ಣು ಎಳೆಯುವ ಇರುವೆ- Soil turning ant

  • ನೆಲದಲ್ಲಿ ಹಲವಾರು ಬಗೆಯ ಇರುವೆಗಳು ವಾಸವಾಗಿರುತ್ತವೆ.
  • ಸಾಮಾನ್ಯವಾಗಿ ನೆಲದಲ್ಲಿ  ಹರಿದಾಡುವ ಇರುವೆಗಳು ಬೇರೆ ಕಡೆ ವಾಸಿಸುವುದು ಅಪರೂಪ.
  • ಕೆಲವು ಇರುವೆಗಳು ತರಗೆಲೆ ಮುಂತಾದವುಗಳ ಎಡೆಯಲ್ಲಿಯೇ ವಾಸವಾಗಿರುತ್ತವೆ.
  • ಪ್ರತ್ಯೇಕ ಗೂಡನ್ನು ನಿರ್ಮಿಸುವುದಿಲ್ಲ. ನೆಲದಲ್ಲಿ  ಕೆಲವು ಇರುವೆಗಳು ತಮ್ಮ ವಾಸಕ್ಕಾಗಿ ಗೂಡು ನಿರ್ಮಿಸುತ್ತವೆ.
  • ಅಲ್ಲಿ ಮೊಟ್ಟೆ ಇಡುತ್ತವೆ. ಗೂಡು ಕಟ್ಟುವುದಕ್ಕಾಗಿ  ಅವುಗಳು ಮಣ್ಣನ್ನು ತಿರುವಿ ಹಾಕಿ ಅಲ್ಲಿ ಅವಕಾಶವನ್ನು ನಿರ್ಮಿಸುತ್ತವೆ.
  • ತೇವಾಂಶ ಇಲ್ಲದ ಗಟ್ಟಿ ಮಣ್ಣಿನಲ್ಲಿ ಇವು ತಮ್ಮ ವಾಸ್ತವ್ಯವನ್ನು ನಿರ್ಮಿಸುವುದಿಲ್ಲ.
  • ನೆಲದ ಮೇಲೆ ಇರುವ ಕೆಲವು ಇರುವೆಗಳು ಕಚ್ಚುತ್ತವೆ. ಮತ್ತೆ ಕೆಲವು ಕಚ್ಚುವುದಿಲ್ಲ.
  • ಕೆಲವು ಇರುವೆಗಳ ಶರೀರದಲ್ಲಿ ಒಂದು ರೀತಿಯ ಆಮ್ಲ (Formic acid)ಇರುತ್ತವೆ.
  • ಅದರಿಂದ ಕಚ್ಚಿದಾಗ ಉರಿಯುವ ಅನುಭವ ಉಂಟಾಗುತ್ತದೆ.
  • ಇವುಗಳಲ್ಲಿ  ಕೆಲವು  ತಮ್ಮ ತಮ್ಮ ಶರೀರದ ಮೇಣದಿಂದ  ಗೂಡು ಕಟ್ಟಿದರೆ ಮತ್ತೆ ಕೆಲವು ಎಲೆಗಳನ್ನು ಪರಸ್ಪರ ಹೆಣೆದು ತಮ್ಮ ದೇಹದ ಮೇಣದಿಂದ ಒಟ್ಟು ಗೂಡಿಸಿ ಅದರ ಒಳಗೆ ಮೊಟ್ಟೆ ಮರಿಗಳನ್ನು ಮಾಡುತ್ತವೆ.
  • ಇವುಗಳು ತಮ್ಮ ತಂಟೆಗೆ ಬಾರದಿದ್ದರೆ ಯಾರಿಗೂ ತೊಂದರೆ  ಮಾಡುವುದಿಲ್ಲ.

ಇರುವೆಗಳಿಂದ ಮಣ್ಣು ತಿರುವಿ ಹಾಕಲ್ಪಟ್ಟದ್ದು –Soil turning by ants
ಇರುವೆಗಳ ಸಾಮ್ರಾಜ್ಯದಲ್ಲಿ ನೂರಾರು ವಿಧಗಳನ್ನು ಕಾಣಬಹುದು. ಹಾಗೆಯೆ ಇವುಗಳು  ಕುಟುಂಬ  ಜೀವನ ನಡೆಸುವವುಗಳು. ಇವುಗಳಲ್ಲಿ ಗಂಡು, ಕೆಲಸಗಾರರು ಹಾಗು ರಾಣಿ ಎಂದು ವರ್ಗೀಕರಣ ಇರುತ್ತದೆ.ರಾಣಿಯಿಂದ ಉತ್ಪತ್ತಿಯಾದ ರೆಕ್ಕೆಬಂದ ಗಂಡು ಹಾಗು ಹೆಣ್ಣು ಇರುವೆಗಳು ಬೇರೆ ಗೂಡಿನ ರಾಣಿ ಹಾಗು ಗಂಡಿನ ಜೊತೆ ಸೇರಿ ಸಂತಾನೋತ್ಪತ್ತಿಯ ಕ್ರಿಯೆಯಲ್ಲಿ ಭಾಗಿಯಾಗುತ್ತವೆ.

  • ರಾಣಿ ಮಿಲನದ ನಂತರ ಗಂಡು ಇರುವೆ ಸತ್ತು ಹೋಗುತ್ತದೆ. ರಾಣಿ ತನ್ನ ರೆಕ್ಕೆಯನ್ನು ಉದುರಿಸಿ ಹೊಸ ಗೂಡನ್ನು ಕಟ್ಟುತ್ತದೆ.
  • ಇಲ್ಲಿ ಕೆಲಸಗಾರ ಇರುವೆಗಳು ಗೂಡು ಕಟ್ಟುವ, ಆಹಾರ ಸಂಗ್ರಹಿಸುವ ಹಾಗು ರಾಣಿ ಮತ್ತು ಅದರ ಸಂತಾನದ ಪೋಷಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.

ಇರುವೆಗಳಿಂದ ಉಪಕಾರಗಳು:

  • ಬಹುತೇಕ ಇರುವೆಗಳು ಪರಭಕ್ಷಕಗಳು (predators).  ಇವು ಮಣ್ಣು ಜನ್ಯ ಜೀವಿಗಳನ್ನು ಮತ್ತು ಸಸ್ಯ ಕೀಟಗಳನ್ನು ತಿನ್ನುತ್ತವೆ.
  • ನೆಲದಲ್ಲಿ ಹರಿದಾಡುವ ಇರುವೆಗಳು ನೆಲದಲ್ಲಿ ಇರುವ ಕೀಟಗಳು, ದುಂಬಿಗಳನ್ನು ಭಕ್ಷಿಸುತ್ತವೆ.
  • ಹಿಟ್ಟು  ತಿಗಣೆ ಎಂಬ ಒಂದು ಕೀಟ ಅನುಕೂಲ  ಸಮಯದಲ್ಲಿ ಸಸ್ಯಗಳ ಎಳೆ ಭಾಗದಲ್ಲಿ ವಾಸಿಸಿ ರಸ ಹೀರುತ್ತವೆ.
  • ಅನನುಕೂಲ ಸ್ಥಿತಿಯಲ್ಲಿ ಅವು ಬೇರು ವಲಯದೆಡೆಗೆ ವಾಸ್ತವ್ಯ ಬದಲಿಸುತ್ತವೆ.
  • ಅಲ್ಲಿಗೆ ಇರುವೆಗಳು ಧಾಳಿ ಮಾಡಿ ಅದನ್ನು ಭಕ್ಷಿಸುತ್ತವೆ.

ನೆಲದ ಮೇಲೆ ಇರುವ ಇರುವೆಗಳೂ ಸಹ ಕೀಟ ಭಕ್ಷಕಗಳಾಗಿರುತ್ತವೆ. ಎಲ್ಲಿ ಇರುವೆಗಳು ಇರುತ್ತವೆಯೋ ಅಲ್ಲಿ  ಯಾವುದೋ ಕೀಟ ಇದೆ ಎಂದೇ ಅರ್ಥ. ಅದನ್ನು ತಿನ್ನಲು ಇರುವೆಗಳು ಬರುತ್ತವೆ ಹೊರತು ಇರುವೆಗಳು ಭಕ್ಷಕಗಳಲ್ಲ. ಉಪದ್ರವಕಾರಿಗಳೂ ಅಲ್ಲ.
ಕೀಟ ಭಕ್ಷಕ ಇರುವೆಗಳು -Pest eating ants

  • ಇರುವೆಗಳು ವಾಸ್ತವ್ಯ ಇರುವ ಮಣ್ಣು ಫಲವತ್ತಾಗಿದೆ ಎಂದೇ ಅರ್ಥ.
  • ಸಾವಯವ ವಸ್ತುಗಳು ಹೇರಳವಾಗಿರುವ ಮಣ್ಣಿನಲ್ಲಿ ಇರುವೆಗಳ ವಾಸ್ತವ್ಯ ಹೆಚ್ಚು.
  • ಇವು ಮಣ್ಣನ್ನು ತಿರುವಿ ಹಾಕುವಾಗ ಮಣ್ಣಿನಲ್ಲಿ ಗಾಳಿಯಾಡುವಿಕೆ ಹೆಚ್ಚುತ್ತದೆ.
  • ನೀರಿನ ಇಳಿಯುವಿಕೆಗೂ ಅನುಕೂಲವಾಗುತ್ತದೆ. ಇವು ಒಂದು ರೀತಿಯಲ್ಲಿ ಸಾವಯವ ವಸ್ತುಗಳನ್ನು ಹುಡಿ ಮಾಡಿಕೊಡುವ (decomposers) ಜೀವಿಗಳು.
  • ಬಡಗಿ ಇರುವೆಗಳು ಮರವನ್ನು ಬೇಗ ಕರಗುವಂತೆ break down  ಮಾಡುತ್ತವೆ.

ಪರಭಕ್ಷಕ ಇರುವೆಗಳು- ants acts as predators
ಇರುವೆಗಳ ಆಹಾರ- ಸಾವಯವ ವಸ್ತುಗಳು, ಕೀಟಗಳು ಹಾಗು ಸತ್ತ ಪ್ರಾಣಿಗಳು.  ಕೆಲವು ಇರುವೆಗಳು ಪರಾಗಸ್ಪರ್ಶಕ್ಕೆ ನೆರವಾಗುವ ಜೀವಿಗಳೂ ಸಹ. ಇರುವೆಗಳನ್ನೇ ತಿಂದು ಬದುಕುವ ಪಕ್ಷಿಗಳು,  ಕೆಲವು ಕೀಟಗಳು ಇರುತ್ತವೆ.

ಇರುವೆಗಳಿಂದ ಹಾನಿ:

  • ಇರುವೆಗಳು ತಮ್ಮ ಆಹಾರಕ್ಕಾಗಿ ಕೆಲವು ಕೀಟಗಳನ್ನು ಆಶ್ರಯಿಸುತ್ತವೆ.
  • ಆ ಕೀಟಗಳನ್ನು ತಿನ್ನುವಾಗ ಅದರ ಕಾಲುಗಳ ಮೂಲಕ ಅದರ ಮೊಟ್ಟೆ ಇತ್ಯಾದಿಗಳನ್ನು ಅದು ಪ್ರಸಾರ  (Vectors)ಮಾಡುತ್ತದೆ
  • ಇದರಿಂದ ಕೀಟ ಪ್ರಸಾರವಾಗುತ್ತದೆ. ಕೆಲವೊಮ್ಮೆ ಇದು ಕೃಷಿ ಕೆಲಸಕ್ಕೆ ಕಿರಿ ಕಿರಿಯನ್ನು ಉಂಟು ಮಾಡುತ್ತದೆ.

ನಿಯಂತ್ರಣ:

  • ಹೆಚ್ಚಿನ ಇರುವೆಗಳು ಸಿಹಿಯನ್ನು ಬಯಸುತ್ತವೆ. ಕೆಲವು ಎಣ್ಣೆ ಇತ್ಯಾದಿಗಳನ್ನು ಬಯಸುತ್ತವೆ.
  • ಹೆಚ್ಚಿನ ತೊಂದರೆ ಇರುವಲ್ಲಿ ಸಿಹಿ ಬೆಲ್ಲವನ್ನು ಒಂದೆಡೆ ಹಾಕಿ ಅಲ್ಲಿಗೆ ಇರುವೆಗಳನ್ನು ಆಕರ್ಷಿಸಿ  ನಮ್ಮ ಕೆಲಸ ಮುಗಿಸಬಹುದು.
  • ತೋಟದಲ್ಲಿ ಅಲ್ಲಲ್ಲಿ ಬೇರಿನ ಬುಡದಲ್ಲಿ  ಇರುವೆಗಳ ಉಪಟಳ ಇದ್ದಲ್ಲಿ ಅಂತಹ ಹಾನಿ ಇಲ್ಲವಾದರೂ ಅದಕ್ಕೆ ನೀರು ಹಾಕಿದರೆ ಅದರ ತೊಂದರೆ ಕಡಿಮೆಯಾಗುತ್ತದೆ.

ಇರುವೆಗಳಿಗಾಗಿ ಯಾವುದೇ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಡಿ. ಇವು ಪರಿಸರದ ಸಮತೋಲನಕ್ಕೆ ಅಗತ್ಯವಾಗಿ ಬೇಕಾಗುವ ಜೀವಿಗಳು. ನಮ್ಮ ಕೆಲಸಕ್ಕೆ ಅಡ್ಡಿಯಾಗದಂತೆ ಅದನ್ನು ತಾತ್ಕಾಲಿಕವಾಗಿ ದೂರಮಾಡುವ ವಿಧಾನ ಎಲ್ಲದಕ್ಕಿಂತ ಒಳ್ಳೆಯದು. 
end of the article:————————————————————————
search words: predators# Ants# Ants and crop# Ants benefits# de -composers # soil micro organisms# soil diggers #

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!