ತೋಟಕ್ಕೆ ಮಣ್ಣು – Fresh soil

ತೋಟಕ್ಕೆ ಹೇಗೆ ಮಣ್ಣು ಹಾಕಬೇಕು- ಯಾವ ಮಣ್ಣು ಸೂಕ್ತ ?

ಅಡಿಕೆ ತೋಟಕ್ಕೆ ಮಣ್ಣು ಹಾಕುವುದು ನಾವೆಲ್ಲಾ ಮಾಡುವ ಒಂದು ಪ್ರಮುಖ ಬೇಸಾಯ ಕ್ರಮ. ಮಣ್ಣು ಹಾಕುವ ಪದ್ದತಿ ಒಳ್ಳೆಯದು. ಅದರೆ ಹಾಕುವಾಗ ಹೇಗೆ ಹಾಕಬೇಕು, ಎಂತಹ ಮಣ್ಣು ಹಾಕಬೇಕು, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದು ಪ್ರಾಮುಖ್ಯ ಸಂಗತಿ. ತೀರಾ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಹಾಕಬಾರದು. ಫಲವತ್ತಾಗಿರದ ಮಣ್ಣು ಬೇಡ. ಸಾವಯವ ವಸ್ತುಗಳು ಸೇರಿ ಬಣ್ಣ ಬದಲಾದ ಮಣ್ಣನ್ನು ಹಾಕಿದರೆ ಅದರ ಪ್ರಯೋಜನ ಹೆಚ್ಚು. ತೋಟ- ಹೊಲಕ್ಕೆ ಹೊಸ ಮಣ್ಣು ಹಾಕುವ ಉದ್ದೇಶ ಮಣ್ಣು ಹೆಚ್ಚು ಸಡಿಲವಾಗಿ ಮೇಲು…

Read more
ಜಂಬಿಟ್ಟಿಗೆ ಮಣ್ಣು

ಈ ಮಣ್ಣು ಬೆಳೆಯ ಗುಣಮಟ್ಟ ಹೆಚ್ಚಿಸುತ್ತದೆ. ಯಾಕೆ?

ಮಣ್ಣಿನ ಗುಣ ಎಂಬುದು ನಮಗೆಲ್ಲಾ ಗೊತ್ತಿರುವ ಸಂಗತಿ. ಮಣ್ಣಿನ ಗುಣ ಚೆನ್ನಾಗಿದ್ದರೆ ಕೃಷಿ ಲಾಭದಾಯಕವಾಗುತ್ತದೆ. ನಾವು ಬೆಳೆಯುವ ಬೆಳೆಯ ಫಸಲಿಗೆ ಗುಣಮಟ್ಟ ಬರುತ್ತದೆ.  ಮಣ್ಣು ಎಂಬುದು ಶಿಲಾ ಶಿಥಿಲತೆಯಿಂದ ಆದ ವಸ್ತು. ಶಿಲೆಯಲ್ಲಿರುವ ಖನಿಜಗಳು,  ಸಸ್ಯ , ಪ್ರಾಣಿಗಳ ಕಳಿಯುವಿಕೆಯಿಂದಾದ ಸಾವಯವ ವಸ್ತುಗಳು ಸೇರಿ, ಅದು ಬೇರೆ ಬೇರೆ ರೂಪಾಂತರ ಹೊಂದಿವೆ. ಒಂದೊಂದು ಕಡೆಯ ಮಣ್ಣು ಒಂದೊಂದು ರೀತಿಯಲ್ಲಿ ಇರುತ್ತವೆ. ಇದಕ್ಕೆಲ್ಲಾ ಕಾರಣ ಅಲ್ಲಿ ಆದ ಶಿಲೆ ಮತ್ತು ಅದರ ರೂಪಾಂತರ. ಕರಾವಳಿಯ ಮಣ್ಣು, ಮಲೆನಾಡಿನ ಮಣ್ಣು,…

Read more
error: Content is protected !!