![ಇದು ಅಡಿಕೆಯ ಭಾರೀ ಹೆಸರುವಾಸಿ ತಳಿ. ಅಡಿಕೆ](https://kannada.krushiabhivruddi.com/wp-content/uploads/2020/11/DSC05613-FILEminimizer-e1622222838761.jpg?v=1622220103)
ಇದು ಅಡಿಕೆಯ ಭಾರೀ ಹೆಸರುವಾಸಿ ತಳಿ.
ಅಡಿಕೆ ಬೆಳೆಸುವವರು ಪ್ರಥಮತಹ ಆಯ್ಕೆ ಮಾಡಬೇಕಾದ ತಳಿ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ. ಇದು ಮನೆ ಕಟ್ಟುವುದಕ್ಕೆ ಪಂಚಾಂಗ ಹಾಕಿದಂತೆ. ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ. ಯಾವಾಗಲೂ ತಳಿ ಆಯ್ಕೆ ಮಾಡುವಾಗ ತಳಿ ಮಿಶ್ರಣ ಆಗದಂತ ಜಾಗದಿಂದ, ಸೂಕ್ತ ವಿಧಾನದಿಂದ ಬೀಜವನ್ನು ಆಯ್ಕೆ ಮಾಡಿ ಅವರವರೇ ಸಸಿ ತಯಾರಿಸಿಕೊಂಡರೆ ಬಹಳ ಉತ್ತಮ. ಕರ್ನಾಟಕದಲ್ಲಿ…