ಅಡಿಕೆ- ಮಿಡಿ ಉದುರುವುದು- ಸ್ಪ್ರಿಂಕ್ಲರ್ ನೀರಾವರಿ.
ಅಡಿಕೆ ತೋಟಗಳಿಗೆ ಸ್ಪ್ರಿಂಕ್ಲರ್ ನೀರಾವರಿ ಮಾಡುವುದಿದ್ದರೆ , ಅದು ಸಣ್ಣ ಮರಗಳು ಆಗಿದ್ದಲ್ಲಿ ಮಿಡಿ ಉದುರುವುದು ಜಾಸ್ತಿಯಾಗುತ್ತದೆ. ಅಡಿಕೆ ಹೂಗೊಂಚಲಿಗೆ ನೀರು ತಾಗಿದಾಗ ಅದೂ ರಾತ್ರೆ, ಬೆಳಗ್ಗೆ ಪರಾಗಸ್ಪರ್ಶಕ್ಕೆ ಅನನುಕೂಲವಾಗುತ್ತದೆ. ಅಡಿಕೆ ಬೆಳೆಯುವವರು ತಮ್ಮ ಅಡಿಕೆ ಸಸಿಗಳಿಗೆ ನೀರಿನ ಕೊರತೆ ಆಗದಿರಲಿ ಎಂದು ಸ್ಪ್ರಿಂಕ್ಲರ್ ನೀರಾವರಿ ಮಾಡುವುದು ಹೆಚ್ಚು. ಇದರಿಂದ ನೆಲವೆಲ್ಲಾ ಒದ್ದೆಯಾಗಿರುತ್ತದೆ. ಎಲ್ಲಾ ಬೇರುಗಳಿಗೂ ನೀರು , ಗೊಬ್ಬರ ಲಭ್ಯವಾಗಿ ಸಸಿ ಚೆನ್ನಾಗಿ ಬೆಳೆಯುತ್ತದೆ ಎಂಬುದು ಇವರ ಸಮಜಾಯಿಸಿ. ಸ್ಪ್ರಿಂಕ್ಲರ್ ನೀರಿನಲ್ಲಿ ನೆಲ ಒದ್ದೆಯಾಗಿ ಮೇಲ್ಪದರದಲ್ಲಿ…