ಇದು ಆರೋಗ್ಯ ರಕ್ಷಕ ಹಣ್ಣು ಗೊತ್ತೇ?
ದಾರೆ ಹುಳಿ ಎಂದು ಸಾಮಾನ್ಯ ಆಡು ಭಾಷೆಯಲ್ಲಿ ಕರೆಯಲ್ಪಡುವ ಈ ಹಣ್ಣು ಹುಳಿ ಮತ್ತು ಸಿಹಿ ರುಚಿಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಇದನ್ನು ಹಳ್ಳಿಗಳಲ್ಲಿ ಬೆಳೆಸಿ ಅದನ್ನು ಹುಳಿಯ ಬದಲಿಗೆ ಉಪಯೋಗ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ ಹಣ್ಣು. ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.ನಾವು ಸಣ್ಣವರಿದ್ದಾಗ ಲಿಂಬೆ ಹುಳಿ ಶರಬತ್ತಿನ ಬದಲು ಇದನ್ನು ಹಿಚುಕಿ ಬೆಲ್ಲ ಹಾಕಿ ಕುಡಿಯುತ್ತಿದ್ದ ನೆನಪು ಈಗಲೂ ಇದೆ. ಸಸ್ಯ ಮೂಲ: ಕನ್ನಡದಲ್ಲಿ ಇದನ್ನು ಕರಿಮಾದಲ, ದಾರೆ ಹುಳಿ, ಕಮ್ರ ದ್ರಾಕ್ಷಿ, ಕೊಮರಿಕೆ ಆಂಗ್ಲ…