ಸರ್ಕಾರೀ ಗೊಬ್ಬರಗಳನ್ನು ಬಳಸಿ- 75% ದಷ್ಟು ಗೊಬ್ಬರದ ಖರ್ಚು ಉಳಿಸಿ.
ಭಾರತ ಸರಕಾರ ರೈತರಿಗೆ ಸಹಾಯಧನದ ಮೂಲಕ ಒದಗಿಸುವ ಸರ್ಕಾರೀ ಗೊಬ್ಬರವನ್ನೇ ಬಳಸಿದರೆ ರೈತರ ಗೊಬ್ಬರದ ಖರ್ಚು 75% ಕ್ಕೂ ಹೆಚ್ಚು ಉಳಿತಾಯವಾಗುತ್ತದೆ. ಇತ್ತೀಚೆಗೆ ಅಡಿಕೆ ತೋಟಕ್ಕೂ ಸಾಲ್ಯುಬಲ್ ಗೊಬ್ಬರಗಳನ್ನು ಕೊಟ್ಟು ಬೆಳೆಸುವ ಕ್ರೇಜಿ ಪ್ರಾರಂಭವಾಗಿದೆ. ಇದಕ್ಕಾಗಿ ಸಾಕಷ್ಟು ಖರ್ಚುಗಳನ್ನೂ ಮಾಡಿ ದುಬಾರಿ ಬೆಲೆಯ ಸಾಲ್ಯುಬಲ್ ಗೊಬ್ಬರಗಳನ್ನು ಖರೀದಿಸಿ ತಂದು ಬಳಸಲಾರಂಭಿಸಿದ್ದಾರೆ. ಅಡಿಕೆಗೆ ಬೆಲೆ ಬಂದಿದೆ ಎಂದೋ ಕೈಯಲ್ಲಿ ದುಡ್ಡು ತುಳುಕುವ ಕಾರಣದಿಂದಲೋ ಜನ ಹೊಸ ಹೊಸತಕ್ಕೆ ಬೇಗ ಮರುಳಾಗುತ್ತಿದ್ದಾರೆ.ಧೀರ್ಘಾವಧಿ ಬೆಳೆಗಳಿಗೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಗೊಬ್ಬರ ಕೊಡಬೇಕಾದ ಅಗತ್ಯ…