ಅಡಿಕೆ ತೋಟದಲ್ಲಿ ಇರಲೇಬೇಕಾದ ಮೂಲಭೂತ ಅವಶ್ಯಕತೆಗಳು.
ಅಡಿಕೆ ತೋಟಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ಪ್ರಮಾಣ ನೋಡಿದರೆ ಬಹುಷಃ ಜನ ಅನ್ನಕ್ಕಿಂತ ಹೆಚ್ಚು ಅಡಿಕೆ ತಿನ್ನುತ್ತಾರೆಯೋ ಅನ್ನಿಸುತ್ತದೆ. ಆದರೆ ಅಡಿಕೆ ತೋಟ ಹೆಚ್ಚಾದಷ್ಟು ಉತ್ಪಾದನೆ ಹೆಚ್ಚಾಗುವುದಿಲ್ಲ. ಕಾರಣ ಬಹುತೇಕ ಅಡಿಕೆ ತೋಟ ಮಾಡುವವರು ಮೂಲಭೂತ ಅವಶ್ಯಕತೆಯನ್ನು ಮಾಡಿಕೊಳ್ಳದೆ ತೋಟ ಮಾಡಿರುತ್ತಾರೆ. ಇದು ಬರೇ ಸಾವಿರಾರು ಮರಗಳ ತೋಟ ಅಷ್ಟೇ. ಅಡಿಕೆ ಮರಗಳು ಆರೋಗ್ಯವಾಗಿರಬೇಕಾದರೆ ಅದನ್ನು ಬೆಳೆಸಿದ ಜಾಗ ಸರಿ ಇರಬೇಕು. ಆಗ ಮಾತ್ರ ನಿರ್ದಿಷ್ಟ ವರ್ಷಕ್ಕೆ ಫಲಕೊಟ್ಟು ಇಳುವರಿ ಏಕಪ್ರಕಾರ ನೀಡುತ್ತಾ ಇರುತ್ತದೆ. ಮರಗಳ ಆರೋಗ್ಯ…