ಕೃಷಿಕರು ಮುತ್ತು ಉತ್ಪಾದಿಸಿ ಆದಾಯಗಳಿಸಬಹುದು.
ನಿಮ್ಮ ಕೃಷಿ ಹೊಲದಲ್ಲಿ ನೀರಾವರಿಯ ಬಾವಿ ಇದೆಯೇ, ಅಥವಾ ನಿಮ್ಮ ಸುಪರ್ದಿಯಲ್ಲಿ ದೊಡ್ದ ಕೆರೆ ಇದೆಯೇ ಹಾಗಿದ್ದರೆ, ಅಲ್ಲಿ ಕೃಷಿಗೆ ಪೂರಕವಾಗಿ ಅತ್ಯಂತ ಲಾಭದಾಯಕವಾದ ವೃತ್ತಿ “ಮುತ್ತಿನ ಉತ್ಪಾದನೆ” ಮಾಡಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅವರ ಆಸ್ಥಾನದಲ್ಲಿ ಮಾತ್ರ ರಾಶಿ ರಾಶಿ ಮುತ್ತುಗಳಿತ್ತು. ಆಗ ಬೇರೆಯವರಿಗೆ ಅದನ್ನು ಹೊಂದುವ ಸಾಮರ್ಥ್ಯವೂ ಇರಲಿಲ್ಲ. ರಾಜಾಧಿಪಥ್ಯ ಕೊನೆಗೊಂಡ ನಂತರ, ಎಲ್ಲರೂ ಮುತ್ತು ಹೊಂದುವ ಸ್ಥಿತಿಗೆ ಬಂದರು. ಆಗ ಅದರ ಬೇಡಿಕೆ ಹೆಚ್ಚಾಯಿತು. ಬೆಲೆಯೂ ಹೆಚ್ಚಾಯಿತು. ಮುತ್ತು ಸಾಮಾನ್ಯ ಬೆಲೆಯ…