ಸಾಗುವಾನು ಮರದ ಬುಡದ ಮಣ್ನು -soil of teak tree base

ಸಾಗುವಾನಿ ಮರದ ಬುಡದ ಮಣ್ಣು ಬಂಗಾರ.

ನಿಮ್ಮಲ್ಲಿ ಸಾಗುವಾನಿ ಮರ ಇದೆಯೇ , ಅದರ ಬುಡದಲ್ಲಿ ಬಿದ್ದ ತರಗೆಲೆಯ ಅಡಿಯ ಮಣ್ಣನ್ನು ಒಮ್ಮೆ ಗಮನ ಇಟ್ಟು ನೋಡಿ. ಇದು ಫಲವತ್ತಾದ ರಸಸಾರ ತಟಸ್ಥ ಇರುವ ಮೆಕ್ಕಲು ಮಣ್ಣಾಗಿರುತ್ತದೆ. ಸಾಗುವಾನಿ ಮರದ ಎಲೆಗಳು ಮಣ್ಣನ್ನು ಫಲವತ್ತಾಗಿಸುತ್ತದೆ, ಹಾಗೆಯೇ ಮಣ್ಣಿನ pH  ಅನ್ನು ಸರಿಮಾಡಿಕೊಡುತ್ತದೆ. ಸಾಗುವಾನಿ ಮರದ ಬುಡದಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ಇರುತ್ತವೆ ಎಂಬುದಾಗಿ ಕೇರಳದ ಅರಣ್ಯ ಸಂಶೊಧಾನ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ. ಇದರ ಎಲೆಯ ಗಾತ್ರ, ಅದರ ತೂಕ, ಅದು ಕರಗುವ ವೇಗ…

Read more
ಸಾಗುವಾನಿ ಮರಗಳಲ್ಲಿ ಅತ್ಯಧಿಕ ಎಲೆಗಳು

ಸಾಗುವಾನಿ ಬೆಳೆದರೆ ಮಣ್ಣು ಫಲವತ್ತಾಗುತ್ತದೆ.

ಜೀವಾಣುಗಳಿಂದ ಸಮೃದ್ಧವಾದ ಮಣ್ಣು  ಇರುವುದು ಮಾನವನ ಹಸ್ತಕ್ಷೇಪ ಇಲ್ಲದ ಕಾಡಿನ ಮಣ್ಣು ಮತ್ತು ಸಾಗುವಾನು ಮರದ ಬುಡದ ಮಣ್ಣಿನಲ್ಲಿ. ಯಾಕೆಂದರೆ ಸಾಗುವಾನಿ ಮರದ ಎಲೆಗಳ ರಚನೆಯೇ ಹಾಗೆ. ಸಾಗುವಾನಿ ಮರದ ಬುಡದಲ್ಲಿ  ಬೇಸಿಗೆಯಲ್ಲಿ ನಡೆದುಕೊಂದು ಹೋದರೆ  ಚಕ್ಕುಲಿ  ಹುಡಿಯಾದ ಸದ್ದು ಕೇಳಿಸುತ್ತದೆ. ಮಳೆಗಾಲದಲ್ಲಿ ನಡೆದುಕೊಂಡು ಹೋದರೆ  ಜಾರಿ ಬೀಳಬಹುದು ಅಷ್ಟು ಪ್ರಮಾಣದ ಮೆಕ್ಕಲು ಮಣ್ಣು ಬುಡದಲ್ಲಿ ಸಂಗ್ರಹವಾಗಿರುತ್ತದೆ. ಇದು ಸಾಗುವಾನಿ ಮರದ ವೈಶಿಷ್ಟ್ಯ. ಸಾಗುವಾನಿ ಅಥವಾ ತೇಗದ ಮರ ಎಲ್ಲಾ ಪ್ರದೇಶಗಳಲ್ಲೂ ಬೆಳೆಯುವ ಮರಮಟ್ಟು. ಕೃಷಿ ಅರಣ್ಯವೂ…

Read more
error: Content is protected !!