
ಸರ್ಕಾರೀ ಸಂಬಳ ಪಡೆದಂತೆ -ರೇಶ್ಮೆ ಕೃಷಿ.
ರೇಶ್ಮೆ ವ್ಯವಸಾಯ ಮನೆ ಮಂದಿ ಸೇರಿ ತಮ್ಮ ಸಂಪಾದನೆಯನ್ನು ತಾವೇ ಗಳಿಸುವ ವೃತ್ತಿ. ಇದನ್ನು ಮಾಡಲು ದೈಹಿಕ ಶ್ರಮ ಬೇಕಾಗಿಲ್ಲ. ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಬರೇ ಇಷ್ಟೇ ಅಲ್ಲ. ರೇಶ್ಮೆ ವ್ಯವಸಾಯ ಹೆಚ್ಚು ಇರುವ ಕಡೆ ಇದಕ್ಕೆ ಪೂರಕವಾಗಿ ಸ್ವ ಉದ್ಯೋಗ ಮಾಡಿ ಆದಾಯಗಳಿಸಲೂ ಅನುಕೂಲ ಇದೆ. ನಮ್ಮ ರಾಜ್ಯದ ರಾಮನಗರ, ಕನಕಪುರ, ಕೋಲಾರ, ಶಿಡ್ಲಘಟ್ಟ, ಹಾಗೆಯೇ ಚಿತ್ರದುರ್ಗ ಕಡೆ, ಅಲ್ಲದೆ ಉತ್ತರದಲ್ಲಿ ರಾಮದುರ್ಗ, ಬೆಳಗಾವಿ ಸುತ್ತಮುತ್ತ ಹಲವಾರು ರೈತರು…