ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗಕ್ಕೆ ಸರಳ ಔಷಧಿ.
ತೆಂಗಿನ ಮರದ ಕಾಂಡದಲ್ಲಿ ಕೆಂಪಗಿನ ರಸ ಸೋರುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಿಂದೆ ಇದು ಬಯಲು ಸೀಮೆಯಲ್ಲಿ ಹೆಚ್ಚಾಗಿತ್ತು. ಈಗ ಕರಾವಳಿಯಲ್ಲೂ ಕಂಡುಬರುತ್ತಿದೆ. ಬಹುತೇಕ ಹೆಚ್ಚಿನವರ ತೆಂಗಿನ ತೋಟದಲ್ಲಿ ಈ ಸಮಸ್ಯೆ ಇದ್ದು, ಬಹಳಷ್ಟು ಜನ ಇದನ್ನು ಗಮನಿಸಿಯೇ ಇರುವುದಿಲ್ಲ. ಮರದ ಶಿರ ಭಾಗ ನಿತ್ರಾಣವಾಗಿ ಗರಿಗಳು ಕಾಂಡಕ್ಕೆ ಜೋತು ಬಿದ್ದು, ಕೆಲವು ಸಮಯದ ನಂತರ ಸತ್ತು ಹೋಗುತ್ತದೆ. ಬೆಳೆಗಾರರು ಏನೋ ಆಗಿ ಸತ್ತು ಹೋಗಿದೆ ಎಂದು ಸುಮ್ಮನಿರುತ್ತಾರೆ. ತೆಂಗಿನ ಮರದ ಕಾಂಡದಲ್ಲಿ ರಸ ಸೋರುವುದು ಒಂದು…