ಹೊಲದಲ್ಲಿ ಕಳೆ ಬೇಕು ? ಬೇಡ? ಈ ಸಂದೇಹಕ್ಕೆ ಉತ್ತರ.
ಬೆಳೆ ಬೇಕಾದರೆ ಕಳೆಗಳನ್ನು ಹತ್ತಿಕ್ಕಲೇ ಬೇಕು. ಕಳೆಗಳಿಂದ ಬೆಳೆ ಇಳುವರಿಯಲ್ಲಿ 33% ಕಡಿಮೆಯಾಗುತ್ತದೆ ಎಂಬುದಾಗಿ ಅಧ್ಯಯನ ಹೇಳುತ್ತದೆ.ಇನ್ನೂ ಮುಂದುವರಿದು ಕೆಲವು ತೊಂದರೆ ರಹಿತ ಕಳೆಗಳು ಇದ್ದರೆ ಮಣ್ಣು ಸಂರಕ್ಷಣೆ ಆಗುತ್ತದೆ ಎನ್ನುತ್ತಾರೆ. ಹೊಲದಲ್ಲಿ ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಕಳೆ ಬೇಕು. ಮಳೆಗಾಲದಲ್ಲಿ ಮಣ್ಣು ಸಂರಕ್ಷಣೆಗೆ ಬೇಕು. ಹಾನಿಮಾಡುವ ಕಳೆ ಬೇಡ. ಬೆಳೆಗಳೊಂದಿಗೆ ಬದುಕುವ ಕೆಲವು ಸಸ್ಯಗಳು ಬೆಳೆಸಿದ ಬೆಳೆಗಿಂತ ವೇಗವಾಗಿ ಬೆಳೆಯುತ್ತಾ ಸ್ಪರ್ಧಿಸಿ ಬೆಳೆಯ ಇಳುವರಿಯನ್ನು ಕಡಿಮೆ ಮಾಡುತ್ತವೆ. ನಮ್ಮ ದೇಶದಲ್ಲಿ ಕಳೆಗಳಿಂದಾಗಿ ಒಟ್ಟು ಶೇಕಡ.33…