ಬೆಳೆ ಬೇಕಾದರೆ ಕಳೆಗಳನ್ನು ಹತ್ತಿಕ್ಕಲೇ ಬೇಕು. ಕಳೆಗಳಿಂದ ಬೆಳೆ ಇಳುವರಿಯಲ್ಲಿ 33% ಕಡಿಮೆಯಾಗುತ್ತದೆ ಎಂಬುದಾಗಿ ಅಧ್ಯಯನ ಹೇಳುತ್ತದೆ.ಇನ್ನೂ ಮುಂದುವರಿದು ಕೆಲವು ತೊಂದರೆ ರಹಿತ ಕಳೆಗಳು ಇದ್ದರೆ ಮಣ್ಣು ಸಂರಕ್ಷಣೆ ಆಗುತ್ತದೆ ಎನ್ನುತ್ತಾರೆ. ಹೊಲದಲ್ಲಿ ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಕಳೆ ಬೇಕು. ಮಳೆಗಾಲದಲ್ಲಿ ಮಣ್ಣು ಸಂರಕ್ಷಣೆಗೆ ಬೇಕು. ಹಾನಿಮಾಡುವ ಕಳೆ ಬೇಡ.
ಬೆಳೆಗಳೊಂದಿಗೆ ಬದುಕುವ ಕೆಲವು ಸಸ್ಯಗಳು ಬೆಳೆಸಿದ ಬೆಳೆಗಿಂತ ವೇಗವಾಗಿ ಬೆಳೆಯುತ್ತಾ ಸ್ಪರ್ಧಿಸಿ ಬೆಳೆಯ ಇಳುವರಿಯನ್ನು ಕಡಿಮೆ ಮಾಡುತ್ತವೆ. ನಮ್ಮ ದೇಶದಲ್ಲಿ ಕಳೆಗಳಿಂದಾಗಿ ಒಟ್ಟು ಶೇಕಡ.33 ಭಾಗದಷ್ಟು ಇಳುವರಿ ಕಡಿಮೆಯಾಗುವುದು ಕಂಡು ಬಂದಿದೆ. ರೋಗಗಳಿಂದ ಶೇ.26ರಷ್ಟು, ಕೀಟಗಳಿಂದ ಶೇ.20ರಷ್ಟು ಇಲಿ ಮುಂತಾದ ದಂಶಕಳಿಂದ ಶೇಕಡ 6+15 ಶೇ.ದಷ್ಟು ನಷ್ಟ ಉಂಟು ಮಾಡುತ್ತವೆ ಎಂದು ಕಂಡುಬಂದಿದೆ. ಅದ್ದರಿಂದ ನಿರೀಕ್ಷಿತ ಫಸಲಿಗಾಗಿ ನಿಯಮಿತವಾಗಿ ಕಳೆಗಳನ್ನು ಹತೋಟಿ ಮಾಡುವುದು ಅತೀ ಅವಶ್ಯಕ.
ಕಳೆಗಳಿಂದಾಗುವ ತೊಂದರೆಗಳು:
- ಕಳೆಗಳು ಹೆಚ್ಚಾದರೆ ಬೆಳೆಯ ಗುಣಮಟ್ಟ ಕಡಿಮೆಯಾಗುತ್ತದೆ. ಬೆಳೆಗಳಿಗೆ ದೊರೆಯುವ ಶೇ.25 ರಿಂದ 60 ರಷ್ಟು ಪೋಷಕಾಂಶಗಳು ಕಡಿಮೆಯಾಗುತ್ತದೆ.
- ಅಸಮತೋಲನವೂ ಉಂಟಾಗುತ್ತದೆ.
- ಕಳೆಗಳು ಬೆಳೆಗಳಿಂದ ಶೇ.30 ರಿಂದ 65 ರಷ್ಟು ತೇವಾಂಶ ಕಸಿದುಕೊಳ್ಳುತ್ತವೆ.
- ನೆಲಕ್ಕೆ ಬೀಳಲೇ ಬೇಕಾದ ಶೇ.25ರಿಂದ 70ರಷ್ಟು ಸೂರ್ಯನ ಬೆಳಕೂ ಕಡಿಮೆಯಾಗುತ್ತದೆ.
- ಸಾಗುವಳಿಯ ಖರ್ಚನ್ನು ಶೇ.20 ರಿಂದ 30 ರಷ್ಟು ಹೆಚ್ಚಿಸುತ್ತದೆ.
- ಬೆಳೆಗಳಿಗೆ ಬರುವ ರೋಗ ಮತ್ತು ಕೀಟಗಳಿಗೆ ಆಶ್ರಯ ಕೊಡುತ್ತವೆ
![small weed plant , but its root is bigger than plant](https://kannada.krushiabhivruddi.com/wp-content/uploads/2021/05/1620730460810-FILEminimizer-e1620731460669-576x1024.jpg)
ಕಳೆ ನಿಯಂತ್ರಣಕ್ಕೆ ಸೂಕ್ತ ಸಮಯ:
- ಬೆಳೆ ಇಲ್ಲದಾಗ ಕಳೆಗಳ ಬೆಳವಣಿಗೆ ನಿಧಾನ ಗತಿಯಲ್ಲಿರುತ್ತದೆ.
- ಬೆಳೆ ಪ್ರಾರಂಭಿಸಿದ ನಂತರ ವೇಗಗತಿಯಲ್ಲಿ ಬೆಳವಣಿಗೆ ಹೊಂದಿ ಹೊಲದ ಬೆಳೆಗಳೊಂದಿಗೆ ಪ್ರತಿ ಸ್ಪರ್ಧೆ ಮಾಡುತ್ತದೆ.
- ಸಾಧಾರಣವಾಗಿ 100 ರಿಂದ 120 ದಿನದ ಕಾಲಾವಧಿಯ ಬೆಳೆಗಳಲ್ಲಿ ಮೊದಲ 30 ರಿಂದ 50 ದಿವಸಗಳವರೆಗೆ ಕಳೆಗಳು ಪೈಪೋಟಿ ನಡೆಸದಂತೆ ನೋಡಿಕೊಳ್ಳುವುದು ಅಗತ್ಯ.
- ಹೆಚ್ಚಿನ ಕಾಲಾವಧಿಯ ಬೆಳೆಗಳಾದ ತೊಗರಿ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳಲ್ಲಿ ಮೊದಲ 60 ರಿಂದ 75 ದಿವಸಗಳವರೆಗೆ ಕಳೆ ನಿಯಂತ್ರಣ ಮಾಡುವುದು ಅಗತ್ಯ.
- ಕಬ್ಬು ಬೆಳೆಯಲ್ಲಿ ಕಬ್ಬು ತುಂಡುಗಳನ್ನು ನಾಟಿ ಮಾಡಿದ 100 ರಿಂದ 120 ದಿವಸಗಳವರೆಗೆ ಕಳೆಬಾರದಂತೆ ನೋಡಿಕೊಳ್ಳಬೇಕು.
- ಧೀರ್ಘಾವಧಿ ತೋಟಗಾರಿಕಾ ಬೆಳೆಗಳಲ್ಲಿ ಮೇಲ್ಮಣ್ಣು ಸಂರಕ್ಷಣೆಗೋಸ್ಕರ ಮಾತ್ರ ಕಳೆಗಳನ್ನು ಅಲ್ಪ ಸ್ವಲ್ಪ ಮಾತ್ರ ಬೆಳೆಯಲು ಅನುವು ಮಾಡಿಕೊಟ್ಟು ಹೆಚ್ಚಾದಂತೆ ಅದನ್ನು ಸವರಿ ನೆಲಕ್ಕೆ ಸೇರಿಸುತ್ತಾ ಇರಬೇಕು.
ಕಳೆಗಳು ಜಮೀನಿನಲ್ಲಿ ಪದೇ ಪದೇ ಏಕೆ ಹುಟ್ಟುತ್ತದೆ:
![Cuscuta weed](https://kannada.krushiabhivruddi.com/wp-content/uploads/2021/05/IVM-1-FILEminimizer-e1620731580394-1024x516.jpg)
- ಒಂದು ಪ್ರಚಲಿತ ನಾಣ್ಣುಡಿಯಂತೆ, ಭೂಮಿಯಲ್ಲಿ ಒಂದು ಸಾರಿ ಕಳೆಯ ಬೀಜಗಳು ಮೊಳೆಯಲು ಅವಕಾಶ ಮಾಡಿಕೊಟ್ಟರೆ ಅದನ್ನು ನಿಯಂತ್ರಣ ಮಾಡಲು ಸತತವಾಗಿ 7 ವರ್ಷಗಳ ಪರಿಶ್ರಮ ಬೇಕಾಗುತ್ತದೆ.
- ಅಂದರೆ, ಹವಾಮಾನ ಪರಿಸ್ಥಿತಿಗೆ ಹೊಂದಿಕೊಂಡು ಕಳೆಗಳ ಬೀಜಗಳು ಪ್ರತಿ ವರ್ಷ ಮೊಳಕೆಯೊಡೆಯುವ ಶಕ್ತಿ ಶೇಕಡ 10 ರಿಂದ 20ರವೆರೆಗೆ ಇರುವುದು ಕಂಡುಬಂದಿದೆ.
- ಹೀಗಾಗಿ ಅವುಗಳು 6 ರಿಂದ 7 ವರ್ಷದವರೆಗೂ ಮೊಳಕೆಯೊಡೆದು ಅಂತಹ ಜಮೀನಿನಲ್ಲಿ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ.
- ಪ್ರತಿಕೂಲ ಹವಾಮಾನ ಇರುವಲ್ಲಿಯೂ, ಕಳೆಗಳು ತಮ್ಮಜೀವನ ಚಕ್ರವನ್ನು ಪೂರ್ಣಗೊಳಿಸಿ, ಬೀಜಗಳ ಪ್ರಸರಣೆ ಮಾಡುತ್ತವೆ.
- ಕೆಲವೊಂದು ಕಳೆಗಳು ಅಂದರೆ ಗರಿಕೆ, ತುಂಗೆ, ಕೆಲವು ಬಳ್ಳಿ ಸಸ್ಯಗಳು, ಹಳದಿ ಹೂವಿನ ಗಿಡ, ಹುಳಿಸೊಪ್ಪು ಒಮ್ಮೆ ಜಮೀನಿನಲ್ಲಿ ಹುಟ್ಟಿಕೊಂಡರೆ ಅವುಗಳು ಭೂಮಿಯ ಕೆಳಗೆ ಅವುಗಳ ಬೀಜ, ಕಾಂಡ ಅಥವಾ ಗಡ್ಡೆಗಳಿಂದ, ಕೆಲವು ಎಲೆಗಳಿಂದಲೂ ಸಂತಾನಾಭಿವೃದ್ಧಿಯಾಗುತ್ತಾ ಪ್ರಸಾರವಾಗುತ್ತಲೇ ಇರುತ್ತದೆ.
- ಹೀಗಾಗಿ ಈ ಕಳೆಗಳು ತುಂಡಾದರೂ ಸಹ ಮೊಳಕೆಯೊಡೆದು ಅವುಗಳ ಸಂಖ್ಯೆ ಹೆಚ್ಚಾಗುತ್ತದೆ.
- ಇಂಥಹ ಬಹುವಾರ್ಷಿಕ ಕಳೆಗಳ ನಿಯಂತ್ರಣ ಬಹಳ ಪ್ರಯಾಸಕರ.
![common creeper weed](https://kannada.krushiabhivruddi.com/wp-content/uploads/2021/05/IVM-2-2-FILEminimizer-1024x576.jpg)
ಕಳೆಗಳ ವೈಶ್ಶಿಷ್ಟ್ಯತೆಗಳು:
- ಕಳೆಗಳು ಹೆಚ್ಚು ಬೀಜೋತ್ಪಾದನಾ ಶಕ್ತಿ ಹೊಂದಿರುತ್ತವೆ.
- ಮೊಳಕೆಯೊಡೆಯುವ ಶಕ್ತಿ ಬಹಳ ದೀರ್ಘಕಾಲದವರೆಗೆ ಇರುತ್ತದೆ.
- ಬೀಜಗಳು ಸುಸ್ತಾವಸ್ಥೆಯಲ್ಲಿ ಬಹಳ ಕಾಲ ಇರುತ್ತವೆ.
- ಕಳೆಗಳು ಪದೇ ಪದೇ ಬರುತ್ತದೆ.
- ಪರೋಪಜೀವಿ ಕಳೆಗಳಾದ ಉರಿಮಲ್ಲಿಗೆ, ಕಸ್ಕುಟಾ (Cuscuta, Cuscuta reflexa Roxb ಮತ್ತು ಬಿಳಿಕಸ ಬೀಜಗಳು ಬಹಳ ವರ್ಷಗಳ ಕಾಲ ಮಣ್ಣಿನಲ್ಲಿ ಜೀವಂತವಿರುತ್ತದೆ.
- ಬೆಳೆಗಳಿಗಿಂತ ಕಳೆ ಬೇರುಗಳು ಹೆಚ್ಚು ಆಳವಾಗಿ ಬಿಡುವುದರಿಂದ, ಕಡಿಮೆ ತೇವಾಂಶ (resistant to less moisture)ಇದ್ದಾಗಲೂ ಅವು ಬದುಕಿ ಉಳಿಯುತ್ತದೆ.
- ಹೀಗಾಗಿ ಬೆಳೆಗಳು ಬೇಗ ಬಾಡುತ್ತದೆ. ಒಂದು ಬೆಳೆಯಲ್ಲಿ ಸಾಧಾರಣವಾಗಿ 20 ರಿಂದ 30 ಜಾತಿ ಕಳೆಗಳು ಬರುತ್ತವೆ.
- ಇವುಗಳಲ್ಲಿ ಕೆಲವು ಮಧ್ಯದ ಹಾಗೂ ಕೊನೆಯ ಹಂತದಲ್ಲಿ ಕಂಡುಬರುತ್ತದೆ.
- ಈ ವಿಶೇಷ ಗುಣಗಳಿಂದ ಕಳೆಗಳು ಬೆಳೆ ಇದ್ದಾಗೆಲ್ಲಾ ಬರುತ್ತಲೇ ಇರುತ್ತದೆ.
- ಒಂದೇ ಸಾರಿ ನಿಯಂತ್ರಣೆ ಮಾಡಲು ಸಾಧ್ಯವಿಲ್ಲ.
![creeper weed](https://kannada.krushiabhivruddi.com/wp-content/uploads/2021/05/IVM-2-4-FILEminimizer-e1620731147448-1024x527.jpg)
ಕಳೆಗಳನ್ನು ಕೆಲವರು ಉತ್ತಮ ಎನ್ನುತ್ತಾರೆ. ಅವು ಬೆಳೆಗಳ ಜೊತೆಗೆ ಸರ್ಧೆ ಮಾಡಿದರೆ ಅದು ಯಾವಾಗಲೂ ತೊಂದರೆದಾಯಕ. ಕೆಲವು ಬಹುವಾರ್ಷಿಕ ಬೆಳೆಗಳು, ಮತ್ತು ತೋಟಗಾರಿಕಾ ಬೆಳೆಗಳ ಎಡೆಯಲ್ಲಿ ಮಣ್ಣು ಸಂರಕ್ಷಣೆಗೆ ಹಿತ ಮಿತವಾದ ಹೊದಿಕೆಗೆ ಮಾತ್ರ ಕಳೆ ಬೇಕು. ಅದು ಮಿತಿ ಮೀರಬಾರದು. ಅಲ್ಪಾವಧಿ ಬೆಳೆಗಳ ಜೊತೆಗೆ ಕಳೆಗಳಿಉ ಇರಲೇ ಬಾರದು. ಇದನ್ನು ಪ್ರತಿಯೊಬ್ಬ ರೈತನೂ ಅರಿತು ನಿರ್ವಹಣಾ ಕ್ರಮಗಳನ್ನು ಪಾಲಿಸಬೇಕು.
ಲೇಖಕರು – 1. ಡಾ. ಯುಸುಫ್ ಅಲಿ ನಿಂಬರಗಿ, ವಿಜ್ಞಾನಿ (ಬೇಸಾಯಶಾಸ್ತ್ರ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, 2. ಡಾ. ಶ್ರೀನಿವಾಸ ಬಿ. ವಿ, ವಿಜ್ಞಾನಿ (ಮಣ್ಣು ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, 3. ಡಾ. ಜಹೀರ್ ಅಹೆಮದ್, ವಿಜ್ಞಾನಿ (ಸಸ್ಯರೋಗ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, 4. ಡಾ. ರಾಜು ಜಿ. ತೆಗ್ಗಳ್ಳಿ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, 5. ನಿಸರ್ಗ ಹೆಚ್. ಎಸ್, ಕೃಷಿ ವಿಶ್ವವಿದ್ಯಾಲಯ, ರಾಯಚೂರು, 6. ಚೈತ್ರಾ ಜಿ ಎಮ್
Nice infirmation
Thankyou
Thank you
Thank you
Very good information about weeds and their impact yield of main crops.
Please suggests measures to control weeds without affecting main crops and soil.
safest weed control is possible by laying anti weed mat. It is costly. but durable for 5 years above.