ಈ ಹಣ್ಣು ತಿಂದರೆ ಆರೋಗ್ಯ ನಿಮ್ಮ ಹತೋಟಿಯಲ್ಲಿರುತ್ತದೆ.
ಪ್ಯಾಶನ್ ಪ್ರುಟ್ Passiflora ಎಂಬ ಹಣ್ಣನ್ನು ಬಹಳ ಹಿಂದಿನಿಂದಲೂ ತಜ್ಞರು ಬಹಳ ಆರೋಗ್ಯಕರ ಹಣ್ಣು ಎಂದು ಹೇಳುತ್ತಾ ಬಂದಿದ್ದಾರೆ. ಇದನ್ನು ಮೈನರ್ ಪ್ರೂಟ್ ವಿಭಾಗದಲ್ಲಿ ಸೇರಿಸಿ ಅದರ ಆರೋಗ್ಯ ಗುಣ, ಬೆಳೆ ಕ್ರಮ, ಮೌಲ್ಯ ವರ್ಧನೆ ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆದಿದೆ. ಬೆಂಗಳೂರಿನ ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಇಲ್ಲಿ ಅರ್ಕಾ ಕಾವೇರಿ ಎಂಬ ನೇರಳೆ ಬಣ್ಣದ ಹಣ್ಣಿನ ತಳಿಯನ್ನೂ ಅಭಿವೃದಿ ಮಾಡಲಾಗಿದೆ. ಈ ಹಣ್ಣು ಬೆಳೆಸಲು ಯಾವುದೇ ಕಷ್ಟವಿಲ್ಲ….