ಸಾವಯವ ಇಂಗಾಲ- ಇದು ಇದ್ದರೆ ಮಣ್ಣಿಗೆ ಬೇರೆ ಹೆಚ್ಚೇನೂ ಬೇಡ.
ಮಣ್ಣು ವಿಜ್ಞಾನಿಗಳು ಮಣ್ಣು ನೋಡಿ ಮೊದಲು ಹೇಳುವುದು ಈ ಮಣ್ಣಿನಲ್ಲಿ ಸಾವಯವ ಇಂಗಾಲ ಎಷ್ಟು ಇದೆ ಎಂಬುದನ್ನು. ಇದನ್ನು ಅನುಸರಿಸಿ ನಂತರದ ಸಲಹೆಗಳು. ಮಣ್ಣು ಯಾವ ಪೋಷಕಾಂಶ ಹಾಕಿದರೂ ಅದು ಸಸ್ಯ ಸ್ವೀಕರಿಸಬೇಕಾದರೆ ಆದರಲ್ಲಿ ಇಂಗಾಲದ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು. ಈಗ ನಮ್ಮ ಸುತ್ತಮುತ್ತ ಮಾರಾಟವಾಗುತ್ತಿರುವ ವಿವಿಧ ಹೆಸರಿನ ಜೈವಿಕ ಗೊಬ್ಬರಗಳೂ ಕೆಲಸ ಮಾಡಿ ನಮಗೆ ತೃಪ್ತಿಕರ ಫಲಿತಾಂಶ ಕೊಡಬೇಕಿದ್ದರೆ ಮಣ್ಣಿನಲ್ಲಿ ಕಾರ್ಬನ್ ( ಇಂಗಾಲ) ಅಂಶ ಹೇರಳವಾಗಿ ಇರಬೇಕು. ಹೀಗಿರುವಾಗ ನಾವು ಗೊಬ್ಬರ ಹಾಕುವುದಕ್ಕಿಂತ…