ಮೈಕ್ರೋ ನ್ಯೂಟ್ರಿಯೆಂಟ್ ಬಳಸಿದರೆ ಅಚ್ಚರಿಯ ಇಳುವರಿ.
ಭಾರತ ದೇಶದ ಬಹುತೇಕ ಮಣ್ಣಿನಲ್ಲಿ ಸೂಕ್ಷ್ಮಪೋಷಕಾಂಶಗಳ ಕೊರತೆ ಇದೆ. ಒಟ್ಟು ಕೃಷಿ ಭೂಮಿಯಲ್ಲಿ 49% ಸತುವಿನ ಕೊರತೆಯನ್ನೂ , 12% ಕಬ್ಬಿಣದ ಕೊರತೆಯನ್ನೂ , 5% ಮ್ಯಾಂಗನೀಸ್, ಮತ್ತು 3% ದಷ್ಟು ತಾಮ್ರದ ಕೊರತೆಯನ್ನು 33% ಬೋರಾನ್ ಮತ್ತು 11% ಮಾಲಿಬ್ಡಿನಂ ಕೊರತೆಯನ್ನು ಹೊಂದಿದೆ ಎಂಬುದಾಗಿ ಅಧ್ಯಯನ ಹೇಳುತ್ತದೆ. ನಿಮ್ಮ ಯಾವುದೇ ಬೆಳೆಗೆ 1 ಲೀ. ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಮೈಕ್ರೋ ನ್ಯೂಟ್ರಿಯೆಂಟ್ ಮಿಶ್ರಣ ಮಾಡಿ ಸಿಂಪರಣೆ ಮಾಡಿ.ಆಗ ತಿಳಿಯುತ್ತದೆ ಅದರ ಮಹಿಮೆ ಏನು ಎಂಬುದು….