
ಗೊಬ್ಬರ ನಂತರ ಕೊಡಿ- ಉಚಿತವಾಗಿ ಸಿಗುವ ಇದನ್ನು ಮೊದಲು ಒದಗಿಸಿ.
ನಾವು ಬೆಳೆ ಬೆಳೆಸುವಾಗ ಯಾವ ಗೊಬ್ಬರ ಕೊಡಬೇಕು, ಎಷ್ಟು ಕೊಡಬೇಕು. ಮತ್ತೆ ಏನೇನು ಕೊಡಬೇಕು ಎಂದು ಕೇಳುತ್ತೇವೆ. ಅದೆಲ್ಲಾ ನಂತರ. ಮೊದಲು ಉಚಿತವಾಗಿ ಸಿಗುವ ಬಿಸಿಲು ಪೂರ್ಣವಾಗಿ ಸಿಗುವಂತೆ ಮಾಡಿ. ದಾರಿ ಬದಿಯ ತೆಂಗಿನ ಮರದಲ್ಲಿ ಫಸಲು ಯಾಕೆ ಹೆಚ್ಚು, ತೋಟದೊಳಗಿನ ಅಡಿಕೆ ಮರಳು ಉದ್ದುದ್ದ ಬೆಳೆಯುವುದೇಕೆ? ಬೆಳಗ್ಗಿನಿಂದ ಸಂಜೆ ತನಕ ಬಿಸಿಲು ಪಡೆಯುವ ದೊಡ್ಡ ಮರಗಳಲ್ಲಿ ಫಸಲು ಹೆಚ್ಚು ಏಕೆ? ಎತ್ತರ ಬೆಳೆದ ಮರದಲ್ಲಿ ಫಸಲು ಹೆಚ್ಚು ಯಾಕೆ? ಇದಕ್ಕೆಲ್ಲಾ ಪ್ರಮುಖ ಕಾರಣ ಸೂರ್ಯನ ಬೆಳಕಿನ ಲಭ್ಯತೆ….