ಬೆಂಡೆ ಬೆಳೆಯಬೇಕೆಂದಿರುವಿರೇ? ಸ್ವಲ್ಪ ಓದಿ.

ಬೆಂಡೆ ಬೆಳೆಯಲ್ಲಿ ನಿಮ್ಮ ಕೈ ಮೀರಿ ಅಗುವ ನಷ್ಟ ಎಂದರೆ ಎಲೆ ಹಳದಿಯಾಗುವಿಕೆ. ಇದರಿಂದ ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತದೆ. ಇದಕ್ಕೆ ಕಾರಣ ಒಂದು ವೈರಸ್. ಈ ರೋಗ ಬಂದರೆ ಅದಕ್ಕೆ ಔಷಧಿ ಇಲ್ಲ.

 • ಯಾವ ಗಿಡಕ್ಕೆ  ಯಾವಾಗ ಬರುತ್ತದೆ ಎಂಬುದೂ ಹೇಳಲಿಕ್ಕೆ  ಸಾಧ್ಯವಿಲ್ಲ.
 • ಹೀಗಿರುವಾಗ ಬೆಂಡೆ ಬೆಳೆಸಬೇಕೆಂಬ ಆಸಕ್ತಿ ಇದ್ದರೆ ,
 • ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳನ್ನೇ ಬೆಳೆಸಿ.

 • ಆಗ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗದು.
 • ಈ ರೋಗಕ್ಕೆ ಔಷಧಿ ಇಲ್ಲದ ಕಾರಣ ರೈತರ ಆಯ್ಕೆಗೆ  ಇರುವುದು ನಿರೋಧಕ ಶಕ್ತಿ ಪಡೆದ ತಳಿಗಳು ಮಾತ್ರ.
ಅರ್ಕಾ ಅನಾಮಿಕಾ

ಯಾವುದು ನಿರೋಧಕ ತಳಿ:

 •  ವಿಜ್ಞಾನಿಗಳು ಈ ಘನ ಸಮಸ್ಯೆಯನ್ನ ಹೋಗಲಾಡಿಸಲು ನಿರಂತರ ಪ್ರಯತ್ನ ಮಾಡಿದ  ಫಲವಾಗಿ  ಕೆಲವು ನಿರೋಧಕ ಶಕ್ತಿ ಪಡೆದ ತಳಿಗಳನ್ನು ಅಭಿವೃದ್ದಿ ಪಡಿಸಿದ್ದಾರೆ.

ಅರ್ಕಾ ಅನಾಮಿಕಾ:

 • ಇದು ಬೆಂಗಳೂರಿನ ಹೇಸರಘಟ್ಟದ ತೋಟಗಾರಿಕಾ ಸಂಶೋಧಾನಾ ಸಂಸ್ಥೆಯಿಂದ ಬಿಡುಗಡೆಯಾದ ತಳಿ.
 • ಇದರ ಗಿಡ ಹಾಲು ಬೆಂಡೆ ತರಹನೇ ಎತ್ತರವಾಗಿ ಬೆಳೆಯುತ್ತದೆ.
 • ಬರೇ ಎತ್ತರ ಮಾತ್ರವಲ್ಲ, ಕವಲು ಗೆಲ್ಲುಗಳನ್ನೂ  ಬಿಡುತ್ತದೆ.
 • ಆ ಕಾರಣದಿಂದ ಇದರಲ್ಲಿ ಹೆಚ್ಚು ಇಳುವರಿ ದೊರೆಯುತ್ತದೆ.
 • ಕಾಯಿಗಳು ಹಸುರು ಬಣ್ಣದಿಂದ ಕೂಡಿದ್ದು, ಉದ್ದವಾಗಿ ಮೃದುವಾಗಿರುತ್ತದೆ.
 • ಹೆಚ್ಚು ದಿನ ( 3-5) ದಿನ ಸಂಗ್ರಹಿಸಿಟ್ಟರೂ ಬಾಡಿ ಹಾಳಾಗಲಾರದು.
 • ಅಡುಗೆಯಲ್ಲಿ ಬಳಸಿದಾಗ ಉತ್ತಮ ಸುವಾಸನೆ  ಇದೆ .
 • ನೋಡಲು ಬಿಳಿ ಅಷ್ಟಪಟ್ಟಿ ಬೆಂಡೆಗೆ ಸಮನಾಗಿಯೇ ಇದೆ. ನಂಜು ರೋಗ ಅಥವಾ ಯೆಲ್ಲೋ ಮೊಸೈಕ್ ರೋಗ, ಎಲೆ ಹಳದಿಯಾಗುವಿಕೆಯ ಸಮಸ್ಯೆ ಇಲ್ಲ.
 • ಒಂದು ಎಕ್ರೆಗೆ 8 ಟನ್ ಇಳುವರಿ ಕೊಡಬಲ್ಲುದು. 130 ದಿನಗಳ ಬೆಳೆ.
ಅರ್ಕಾ ಅಭಯ್

ಅರ್ಕಾ ಅಭಯ್:

 • ಈ ತಳಿಗೂ ಹಳದಿ ಎಲೆ ರೋಗ ನಿರೋಧಕ ಶಕ್ತಿ ಇದೆ.
 • ಇದನ್ನು ಭಾರತೀಯ ತೋಟಗಾರಿಕಾ ಸಂಶೊಧನಾ  ಸಂಸ್ಥೆ ಬಿಡುಗಡೆ ಮಾಡಿದೆ.
 • ಗಿಡಗಳು ಎತ್ತರವಾಗಿ  ಬೆಳೆಯುತ್ತದೆ. ಇದಕ್ಕೂ ಕವಲು ಗೆಲ್ಲುಗಳು ಇವೆ.
 • ಆದ ಕಾರಣ ಇಳುವರಿ ಹೆಚ್ಚು ಬರುತ್ತದೆ.
 • ಕಾಯಿಗಳು ಕಡು ಹಸುರು ಬಣ್ಣದಲ್ಲಿರುತ್ತವೆ.
 • ಉದ್ದ ಕಾಯಿಗಳು. ಮೃದು ಗುಣ. ಹೆಚ್ಚು ಸಮಯ ಸಂಗ್ರಹಿಸಿಡಬಹುದು. 120 -125 ದಿನಗಳ ತಳಿ.

ಪೂಸಾ ಸವಾನಿ :

 • ಇದು ತಕ್ಕ ಮಟ್ಟಿಗೆ ನಿರೋಧಕ ಶಕ್ತಿ ಪಡೆದ ತಳಿಯಾಗಿದ್ದು,  ಭಾರತೀಯ  ಕೃಷಿ ಸಂಶೋಧನಾ ಸಂಸ್ಥೆ ದೆಹಲಿಯಿಂದ ಬಿಡುಗಡೆಯಾದ ತಳಿ.

ಹಾಲು ಬೆಂಡೆ:

ಹಾಲು ಬೆಂಡೆ
 • ಇದು  ಅಧಿಕ ಪ್ರಮಾಣದಲ್ಲಿ  ಹಳದಿ ಎಲೆ ರೋಗಕ್ಕೆ ತುತ್ತಾಗುವ ತಳಿ.
 • ಇದಕ್ಕೆ ಕರಾವಳಿಯಲ್ಲಿ ಅಧಿಕ ಬೇಡಿಕೆ.
 • ಬೆಲೆಯೂ ಅಧಿಕ. ಆ ಕಾರಣಕ್ಕೆ ಇದನ್ನು ಎಲ್ಲರೂ ಬೆಳೆಸಲು ಇಚ್ಚೆ ಪಡುತ್ತಾರೆ.
 • ಹಳದಿ ಎಲೆ ರೋಗ ಬಾರದಂತೆ ಕೀಟನಾಶಕ ಬಳಸುತ್ತಾರೆ.
ಹಾಲು ಬೆಂಡೆಗೆ ಈ ರೋಗ ಅತೀ ದೊಡ್ದ ತೊಂದರೆ

ಇಷ್ಟೆಲ್ಲಾ ಖರ್ಚು ಮಾಡಿ ಬಿಳಿ ಬೆಂಡೆ ಬೆಳೆಸುವ ಬದಲು  ರೋಗ ನಿರೋಧಕ ಶಕ್ತಿ ಉಳ್ಳ  ತಳಿ ಬೆಳೆಸುವುದು ಸೂಕ್ತ. ಬಣ್ಣದಲ್ಲಿ ಮಾತ್ರ ಭಿನ್ನತೆ ಕಾಣುವ ಇದಕ್ಕೆ  ರುಚಿಯಲ್ಲಿ ವ್ಯತ್ಯಾಸ ಇಲ್ಲ.

 

Leave a Reply

Your email address will not be published. Required fields are marked *

error: Content is protected !!