ತೆಂಗಿನ ಮರಕ್ಕೆ ಈಗ ಹಾಕಿದ ಗೊಬ್ಬರದಿಂದ ಇಳುವರಿ ಸಿಗುವುದು ಯಾವಾಗ?

by | Apr 27, 2020 | Horticulture Crops (ತೋಟದ ಬೆಳೆಗಳು), Coconut (ತೆಂಗು) | 0 comments

ಹೆಚ್ಚಿನ ರೈತರು ಹೇಳುವುದುಂಟು, ಈ ವರ್ಷ ನಾವು  ತೆಂಗಿನ ಮರಕ್ಕೆ ಸಾಕಷ್ಟು ಗೊಬ್ಬರ ಕೊಟ್ಟಿದ್ದೇವೆ. ಮುಂದಿನ ವರ್ಷ  ಫಸಲು ಹೆಚ್ಚಬಹುದು ಎಂದು.  ಆದರೆ ವಾಸ್ತವಿಕತೆ ಬೇರೆಯೇ ಇದೆ. ಈ ವರ್ಷ ಹಾಕಿದ ಗೊಬ್ಬರದ ಫಲದಲ್ಲಿ ಮುಂದಿನ ವರ್ಷ ಇಳುವರಿಯಲ್ಲಿ  ದೊರೆಯುವುದಿಲ್ಲ. ಅದು ದೊರೆಯುವುದು ಮುಂದಿನ 32 ತಿಂಗಳ ನಂತರ.

 • ತೆಂಗಿನ ಮರದ ಕಾಂಡದಲ್ಲಿ ಹುಟ್ಟುವ  ಅದರ ಹೂ ಗೊಂಚಲು ಮೊನ್ನೆ ಮೊನ್ನೆಮೂಡಿದ್ದು ಎಂದು ತಿಳಿಯದಿರಿ.
 • ಇದರೆ ಹುಟ್ಟು,(Innitiation)  ಸುಮಾರು ಮೂರು ವರ್ಷಗಳ ಹಿಂದೆಯೇ ಆಗಿರುತ್ತದೆ.
 • ಆಗಲೇ ಅದರಲ್ಲಿ ಎಷ್ಟು ಕಾಯಿ ಹಿಡಿಯಬಹುದು ಎಂಬುದು ಆಗಿನ ವಾತಾವರಣ , ಆರೈಕೆಗನುಗುಣವಾಗಿ ಬಹುತೇಕ ನಿರ್ಧಾರ ಆಗಿರುತ್ತದೆ.

ಪೋಷಕಾಂಶ ಹೇಗೆ ಬಳಕೆಯಾಗುತ್ತದೆ:

 • ನಾವು ಕೊಡುವ ಪೋಷಕಗಳು ತಕ್ಷಣಕ್ಕೆ ಫಸಲಿಗೆ ಲಭ್ಯವಾಗುವುದಿಲ್ಲ. ಅದು ಮೊದಲಾಗಿ ದೊರೆಯುವುದು ಎಲೆಗಳಿಗೆ.
 • ಗೊಬ್ಬರ ಕೊಟ್ಟ ಕೆಲವು ಸಮಯದ ನಂತರ ಎಲೆಗಳು ಸ್ವಲ್ಪ ಹಸುರಾಗುತ್ತವೆ. ಅದೂ  ತುದಿ ಭಾಗದ ಎಲೆಗಳು.
 • ನಂತರ ಬರುವ ಎಲೆಗಳ ಉದ್ದ ಹೆಚ್ಚಾಗುತ್ತದೆ,(ಸುಮಾರು 6 ಮೀ). ಮತ್ತು ಕಡ್ಡಿಗಳೂ( 200ಕ್ಕೂ ಹೆಚ್ಚು ಕಡ್ಡಿ ಮತ್ತು  ಅದರ ಉದ್ದ 1.5 ಮೀ)  ಉದ್ದವಾಗುತ್ತವೆ.
 • ನಂತರ ಮರದ ಗರಿ ಲಕ್ಷಣಗಳು ಬದಲಾಗುತ್ತದೆ. ಮರ ಶಿರ ಭಾಗ ಛತ್ರಿಯೋಪಾದಿಯಲ್ಲಿ ಕಾಣಿಸುತ್ತದೆ.
 • ಅಗತ್ಯವಿದ್ದಷ್ಟು ಪೊಷಕಾಂಶಗಳು ದೊರೆತಾಗ ಮಾತ್ರ ಮರದಲ್ಲಿ 30-40 ಹಸಿರು ಗರಿಗಳು ಇರುತ್ತವೆ.
 • ಕೆಳಭಾಗದ ಗರಿಗಳು ಬೇಗ ಒಣಗಿ ಉದುರುವುದಿಲ್ಲ.
 • ಕಾಂಡದ ಲಕ್ಷಣ ಬದಲಾಗುತ್ತದೆ. ಅದು ಸ್ವಲ್ಪ ದಪ್ಪವಾಗುತ್ತದೆ.
 • ಇದೆಲ್ಲಾ ಆದ ನಂತರ ಅದು ಹೂ ಗೊಂಚಲಿಗೆ ಹೋಗುವುದು.
ಉತ್ತಮ ಇಳುವರಿ ಕೊಡುವ ಮರದ ಶಿರ ಭಾಗದ ಲಕ್ಷಣ – nature of high yielding coconut plant

ಉತ್ತಮ ಇಳುವರಿ ಕೊಡುವ ಮರದ ಶಿರ ಭಾಗದ ಲಕ್ಷಣ

ತೆಂಗಿನ ಮರದ ಹೂ ಗೊಂಚಲು:

 •  ಉತ್ತಮ  ಆರೈಕೆಯ ತೆಂಗಿನ ಮರದಲ್ಲಿ ಸುಮಾರು ಸುಮಾರು 5 ವರ್ಷಗಳ ತರುವಾಯ ಹೂ ಗೊಂಚಲು ಮೂಡುತ್ತದೆ.
 • ವರ್ಷಕ್ಕೆ 12-15 ಹೂ ಗೊಂಚಲು ಬಿಡುವುದು ಆರೋಗ್ಯವಂತ ಮರದ ಲಕ್ಷಣ.
 • ಹೂ ಗೊಂಚಲು ಮರದ ಗರಿ ಸಂದಿನಲ್ಲಿ ಕಂಡ ನಂತರ ಅದು ಬಿಡಿಸಿಕೊಳ್ಳಲು ಸುಮಾರು70- 90 ದಿನಗಳು ಬೇಕು.
 • ಹವಾಮಾನ ಮತ್ತು ಪೋಷಕಾಂಶಗಳು ಅನುಕೂಲ ಇದ್ದರೆ  ಪ್ರತೀಯೊಂದು ಎಲೆ ಕಂಕುಳಲ್ಲೂ ಒಂದೊಂದು ಹೂ ಗೊಂಚಲು ಇರುತ್ತದೆ.
 • ಕೆಲವು ಅನನುಕೂಲ ಪರಿಸ್ಥಿತಿಯಲ್ಲಿ ಹೂ ಗೊಂಚಲು ಹೊರಗೆ ಗೋಚರಿಸದೇ ಇರಬಹುದು. ಆದರೆ ಅದರ ಸಣ್ಣ ಮೊಳೆಗೆ ನಂತರ ಗರಿ ಉದುರಿ ಬೀಳುವಾಗ ಇದ್ದೇ ಇರುತ್ತದೆ.
 • ಆರೋಗ್ಯವಂತ ಹೂ ಗೊಂಚಲು ಸುಮಾರು 1-1.5 ಮೀಟರು ಉದ್ದ ಇರುತ್ತದೆ. ಸುಮಾರು 14-16 ಸೆಂ. ಮೀ. ಸುತ್ತಳತೆ ಇರುತ್ತದೆ.
 • ಅದು ಒಳ ಭಾಗದಲ್ಲಿ ತುದಿಯಿಂದ ತೆರೆದುಕೊಳ್ಳುತ್ತದೆ.

ಪ್ರತೀ ಎಲೆ ಕಂಕುಳಲ್ಲೂ ಹೂ ಗೊಂಚಲು ಇರಬೇಕು – every leaf execel should be a inflorescence

ಫಸಲು ಹೆಚ್ಚಾಗುವುದು ಯಾವಾಗ:

 • ನಿರಂತರ ವರ್ಷದುದ್ದಕ್ಕೂ ಏಕ ಪ್ರಕಾರ ನೀರು , ಪೋಷಕಾಂಶ ಮತ್ತು ಏಕ ರೀತಿಯ ಹವಾಮಾನ ಇದ್ದರೆ  ಪ್ರತೀ ಗೊನೆಯಲ್ಲೂ ಒಂದೇ ರೀತಿ ಕಾಯಿಗಳು ಆಗುತ್ತವೆ
 • ಈಗ ಕೊಟ್ಟ ಗೊಬ್ಬರ ಮುಂದಿನ 32 ತಿಂಗಳ ನಂತರ ಬರುವ ಹೂ ಗೊಂಚಲಿನಲ್ಲಿ ತನ್ನ ಫಲಿತಾಂಶವನ್ನು  ತೋರಿಸುತ್ತದೆ.
 • ಪ್ರತೀ ತಿಂಗಳೂ ಪೋಷಕಾಂಶವನ್ನು ಒದಗಿಸುತ್ತಾ ಇದ್ದರೆ  ಸಾಮಾನ್ಯವಾಗಿ ಏಕ  ಪ್ರಕಾರದ ಹೂ ಗೊಂಚಲು ಬರುತ್ತಿರುತ್ತದೆ.

ಇದೆಲ್ಲಾ ಅಂಶಗಳಿಂದ ರೈತರು ತಿಳಿಯಬೇಕಾದುದು, ತೆಂಗಿನ ಮರಕ್ಕೆ ಈಗ ಹಾಕಿದ ಗೊಬ್ಬರ, ನೀರು ಇದೇ ವರ್ಷ ಇಳುವರಿಯಲ್ಲಿ ಗೊತ್ತಾಗುವುದಿಲ್ಲ. ಅದು ಗೊತ್ತಾಗುವುದು ಸುಮಾರು 3 ವರ್ಷದ ನಂತರ. ಇಳುವರಿ ಚೆನ್ನಾಗಿ ಬರಬಹುದಾದ ಲಕ್ಷಣವನ್ನು ಮರದ ಬೆಳೆವಣಿಗೆಯ ಲಕ್ಷಣ ಮುಂಚಿತವಾಗಿ ತೋರಿಸುತ್ತದೆ. ಮನೆ ಬಾಗಿಲಲ್ಲಿ ಇರುವ ಹೆಚ್ಚು ಆರೈಕೆ  ಮಾಡುವ ಮರದಲ್ಲಿ ಏಕ ಪ್ರಕಾರ ಇಳುವರಿ ಇರುತ್ತದೆ.

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!