ರೈತರಿಗೂ ಪ್ರಯೋಜನವಿದೆ- ಉದ್ಯೋಗ ಖಾತ್ರಿ ಯೋಜನೆ.

by | Aug 16, 2020 | Rural Development (ಗ್ರಾಮೀಣ ಅಭಿವೃದ್ದಿ) | 0 comments

ಉದ್ಯೋಗ ಖಾತ್ರಿ ಯೋಜನೆ  ಎಂಬ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಭರವಸೆಯನ್ನು   ನೀಡಲು ಈ ಯೊಜನೆಯು 2006 ರಲ್ಲಿ ಕರ್ನಾಟಕದಲ್ಲಿ ಆರಂಭಗೊಂಡಿದೆ. ಮೂಲತಹ ಕೃಷಿ ಕೂಲಿ ಕಾರ್ಮಿಕರಾಗಿದ್ದವರು, ವರ್ಷ ಪೂರ್ತಿ ರೈತರು ಜಮೀನಿನಲ್ಲಿ ಕೆಲಸ ಲಭ್ಯವಿಲ್ಲದಿದ್ದರೆ , ಪಂಚಾಯತು ವ್ಯವಸ್ಥೆಯು ಇವರಿಗೆ  ವರ್ಷದ ಎಲ್ಲಾ  ಎಲ್ಲಾ ಸಮಯದಲ್ಲಿ ಕೆಲಸ ಕೊಡುತ್ತದೆ.
Water conservation pits done by MANREGA

  • ಉದ್ಯೋಗ   ಇಲ್ಲದ ಸಮಯದಲ್ಲಿ  ಕೃಷಿ ಹೊಂಡ, ಕೆರೆ ಹೂಳೆತ್ತುವುದು, ಅರಣ್ಯೀಕರಣ  ಮುಂತಾದ ಕಾಮಗಾರಿಗಳಲ್ಲಿ  ತೊಡಗಿಸಿಕೊಂಡು ಜೀವನೋಪಾಯ ಮಾಡಿಕೊಳ್ಲಬಹುದು.
  • 2020-21 ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಉದ್ಯೋಗದ  ಗುರಿ ಹಾಗೂ ರೂ.6315.79 ಕೋಟಿ ಅನುದಾನ ನಿಗದಿಪಡಿಸಲಾಗಿದೆ.

ಎಷ್ಟು ದಿನ ಕೆಲಸ?

  • ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಾನ್ಯ ಪ್ರದೇಶಗಳಲ್ಲಿ 100 ದಿನಗಳ ಕೆಲಸ ಕಲ್ಪಿಸಲು ಅವಕಾಶವಿದೆ. ಬರಪೀಡಿತ ಪ್ರದೇಶಗಳಲ್ಲಿ 150 ದಿನಗಳ ಕೆಲಸ ಕಲ್ಪಿಸಲು ಅವಕಾಶವಿದೆ.

ಯಾವ ಯಾವ ಕೆಲಸ?

 Water harvest tank built by employment grantee scheme

ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿತವಾದ ನೀರು ಸಂಗ್ರಹ ಟ್ಯಾಂಕ್

  • ಉದ್ಯೋಗ ಖಾತ್ರಿ ಯೋಜನೆಯಡಿ ಬದು, ಕೃಷಿ ಹೊಂಡ, ಕೆರೆ ಹೂಳೆತ್ತುವ ಕಾರ್ಯ, ಅರಣ್ಯೀಕರಣ  ಮುಂತಾದ   ಸಾರ್ವಜನಿಕ ಕಾಮಗಾರಿಗಳನ್ನು ಕೈಗೊಳಲಾಗುತ್ತದೆ.
  • ಇದಲ್ಲದೆ ಅರಣ್ಯ ಸಂರಕ್ಷಣೆಯಂತಹ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ನೆಡಸಲಾಗುತ್ತಿದೆ.
  • ವ್ಯೆಯಕ್ತಿಕ ಕಾಮಗಾರಿಗಳನ್ನು ಕೈಗೊಳುವಾಗ ಜಮೀನಿನ ರೈತರೇ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಮುಂದೆ ಬಂದರೆ, ಅವರಿಗೂ ಸಹ ಜಾಬ್ ಕಾಡ್ ನೀಡಲಾಗುತ್ತದೆ.
  • ಇದರಿಂದ ಅವರ ಆದಾಯ ಕೂಡ ಹೆಚ್ಚಾಗುತ್ತದೆ.
  • ಉದ್ಯೋಗ ಖಾತ್ರಿ ಕಾಮಗಾರಿ ನೆಡೆಯುವ ಸ್ಥಳದಲ್ಲಿ 30 ಜನ ಕಾರ್ಮಿಕರಿಗೆ ಒಬ್ಬರಂತೆ ಕಾಯಕ ಬಂಧು ಎಂದು ನೇಮಿಸಲಾಗುತ್ತದೆ.
  • ಇವರು ಪ್ರತಿ ದಿನ ಕಾಮಗಾರಿ ಅಳತೆ ಮಾಡಿ ಕೆಲಸವನ್ನು ಕೂಲಿ ಕಾರ್ಮಿಕರಿಗೆ ನೀಡುವುದು ಹಾಗೂ ಕಾಮಗಾರಿ ಮುಗಿದ ನಂತರ ಪುನಃ ಅಳತೆ ಮಾಡುವುದು ಹಾಗೂ ಆ ಕೆಲಸದ ವಿವರವನ್ನು ಬರೆಯುವುದು.
Construction of bond for rain water harvest

ನೀರನ್ನು ನಿಂತು ಚಲಿಸುವಂತೆ ಮಾಡಲು ಬಂಡುಗಳ ನಿರ್ಮಾಣ

 ಕೆಲಸ ಮಾಡಲು ಇರಬೇಕಾದ ಅರ್ಹತೆಗಳು;

  •  18 ವರ್ಷ ಮೇಲ್ಟಟ್ಟವರಾಗಿರಬೇಕು.
  •   ಕಾಮಗಾರಿ ನೆಡೆಯುವ ಪ್ರದೇಶದವರಾಗಿರಬೇಕು.
  •  100 ದಿನಗಳ ಕಾಲ ಕೆಲಸ ನಿರ್ವಹಿಸಲು ತಯಾರಿರಬೇಕು.
  •   ಕನಿಷ್ಟ ಅವರಿಗೆ ಕೊಟ್ಟ ಜಾಬ್ ಕಾರ್ಡ್ ನಂಬರ್ ಗೊತ್ತಿರಬೇಕು.

ಎಷ್ಟು ಹಣ ಸಿಗುತ್ತದೆ?

  • ದಿನಕ್ಕೆ ರೂ. 275 (2020ರ ಅನ್ವಯ) ರಂತೆ 100 ದಿನಗಳ ಕಾಲ ಕೆಲಸ ಮಾಡಿದಾದ ಒಬ್ಬ ವಾರ್ಷಿಕ 27,500 ರೂ. ವಾರ್ಷಿಕ ಸಂಪಾದನೆ ಮಾಡಬಹುದು.
  • ಬರ ಪೀಡಿತ ಪ್ರದೇಶಗಳ ಜನ ವಾರ್ಷಿಕ 41,250 ರೂ. ಸಂಪಾದನೆ ಮಾಡಬಹುದು.
  • ಕೃಷಿ ಹೊಲದಲ್ಲಿ ಉದ್ಯೋಗ ಖಾತ್ರಿ ಯೋಜನೆಯಂತೆ ಕೆಲಸ ಮಾಡಲು ಹೊಸತಾಗಿ ಬೆಳೆ ಮಾಡುವುದಕ್ಕೆ, ಪುನಶ್ಚೇತನಕ ಕೆಲಸಕ್ಕೆ ಅವಕಾಶ ಇದೆ.
  • ಈ ಬಗ್ಗೆ ಹೊಲದ ಮಾಲಿಕನು ಉದ್ಯೋಗ ಚೀಟಿಯನ್ನು ಮಾಡಿಸಿಕೊಳ್ಳಬೇಕು.
  • ತಾವು ಕೆಲಸ ಮಾಡಿಸುವ ಕೆಲ್ಸದ ವಿವರವನ್ನು ಸ್ಥಳೀಯ ಪಂಚಾಯತು ವ್ಯವಸ್ಥೆಗೆ ತಿಳಿಸಿ ಅವರ ಅನುಮತಿಯ ಮೇರೆಗೆ ಕಾಮಗಾರಿಯನ್ನು ಮಾಡಿಸಿ, ಅದಕ್ಕೆ ಸರಕಾರ ನಿಗದಿಪಡಿಸಿದ ಮೊತ್ತವು ಹೊಲದ ಮಾಲಿಕನಿಗೆ ಸಂದಾಯವಾಗುವ ವ್ಯವಸ್ಥೆ ಇದೆ.
  • ಅಡಿಕೆ , ತೆಂಗು, ಅರಣ್ಯ ಬೆಳೆ, ಹೊಲಕ್ಕೆ ಮಣ್ಣು ಹಾಕಿಸುವುದು, ಪುನರ್ ನಾಟಿ ಮುಂತಾದ ಕಾಮಾಗಾರಿಗಳಿಗೆ ಅವಕಾಶ ಇದೆ.

ಲೇಖಕರು :  ಮಾನಸ ಎಲ್. ಪಿ ಕೃ. ವಿ. ವಿ ಧಾರವಾಡ.ಮುನಿಯಪ್ಪ ಕೃ. ವಿ. ವಿ ರಾಯಚೂರು.ಶೃತಿ ಎಸ್. ಎಮ್ ಕೃ. ವಿ. ವಿ ಧಾರವಾಡ.ಪೂಜಾ ಎಸ್.ಪಿ ಕೃ. ವಿ. ವಿ ಬೆಂಗಳೂರು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!