ಭತ್ತದ ಗದ್ದೆಗಳಲ್ಲಿ ಪೈರು ಬೆಳೆಯುತ್ತಿದೆ. ಈ ಸಮಯದಲ್ಲಿ ಗರಿಗಳು ಬಿಳಿಯಾಗಿ ಕಾಣುವ ಸಮಸ್ಯೆ ಹಾಗೆಯೇ ಹರಿದು ಹೋದ ಗರಿಗಳು,ಎಲ್ಲಾ ಕಡೆ ಇರುತ್ತದೆ. ದೂರದಿಂದ ನೋಡುವಾಗ ಗರಿಯಲ್ಲಿ ಹರಿತ್ತು ಇಲ್ಲದೆ ಬಿಳಿಯಾಗಿ ಕಾಣಿಸುತ್ತದೆ. ಸಮೀಪ ಹೋಗಿ ನೊಡಿದಾಗ ಗರಿಯ ಹಸುರು ಭಾಗವನ್ನು ತಿಂದು ಬರೇ ಪತ್ರ ನಾಳಗಳು ಮಾತ್ರ ಉಳಿದುಕೊಂಡಿರುತ್ತವೆ. ಇದಕ್ಕೆ ಸ್ಕಿಪ್ಪರ್ ಮತ್ತು ಗ್ರೀನ್ ಹಾರ್ನ್ ಕ್ಯಾಟರ್ ಪಿಲ್ಲರ್ ಎಂಬ ಹುಳು ಕಾರಣವಾಗಿರುತ್ತದೆ.Skipper & Green horned catterpiller) ಇದರ ಹೆಸರು philopidus mathyyas & melanitis leda ismene –Lepidoptera ವರ್ಗಕ್ಕೆ ಸೇರಿದವು.
- ಈ ಸಮಯದಲ್ಲಿ ಭತ್ತದ ಪೈರಿನ ಗರಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ.
- ಎಲೆಗಳ ಅಲಗುಗಳು ಸ್ವಲ್ಪ ಒಳಭಾಗಕ್ಕೆ ಮಡಚಿದಂತೆ ಕಾಣಬಹುದು.
- ಇನ್ನೂ ಸ್ವಲ್ಪ ಗಮನವಿಟ್ಟು ನೊಡಿದರೆ ಎಲೆಯ ಕೆಳ ಭಾಗದಲ್ಲಿ ಹಸುರು ಬಣ್ಣದ ಸಣ್ಣ ಹುಳಗಳು ಇರುವುದೂ ಕಾಣಸಿಗಬಹುದು.
- ಈ ಹುಳಗಳಿಗೆ ಹಳದಿ ರೋಮ ಇರುತ್ತವೆ.
- ಹಾಗೆಯೇ ಗರಿಯ ಕೆಳ ಭಾಗದಲ್ಲಿ ಸುಮಾರು 1 ಇಂಚು ಉದ್ದದ ಹಳದಿ ಬಣ್ಣದ ನಿರ್ಜೀವ ವಸ್ತುವಿನ ತರಹದ್ದು ನೇತಾಡುತ್ತಿರುವುದು ಕಂಡು ಬರುತ್ತದೆ.ಇದು ಆ ಹುಳುವಿನ ಪ್ಯೂಪೆ
- ಇದು ಗರಿ ತಿನ್ನುವ ಹುಳದ ಇರುವಿಕೆಯ ಕುರುಹು.
ಏನಿದು ಹಳದಿ ರೋಮದ ಹುಳು:
- ಹಸುರು ಕೊಡಿನ ಹುಳು ಎಂದರೆ ಈ ಹುಳುವಿಗೆ ಕಪ್ಪು ಕೊಡಿನ ತರಹದ ಶಿರಭಾಗ ಇರುತ್ತದೆ.
- ಗರಿ ತಿನ್ನುತ್ತಿರುವಾಗ ಹಸುರು ಬಣ್ಣದಲ್ಲಿರುತ್ತದೆ. ಗರಿಯ ಮೇಲೆಲ್ಲಾ ಹಸುರು ಹರಿತ್ತನ್ನು ತಿನ್ನುತ್ತಾ ಚಲಿಸುತ್ತಿರುತ್ತದೆ. ಬೆಳೆದಂತೆ ಬಿಳಿಯಾಗುತ್ತದೆ.
- ಈ ಹುಳ ಎಲ್ಲಿಂದ ಬಂತು ಎನ್ನುತ್ತೀರಾ? ಮತ್ತೆಲ್ಲಿಂದಲೋ ಅಲ್ಲ.
- ಭತ್ತದ ಸಸ್ಯದಲ್ಲಿ ಗರಿಗಳು ಹೆಚ್ಚಾಗತೊಡಗಿದಂತೆ ಆಲ್ಲಿಗೆ ಒಂದು ಪತಂಗ ಬಂದು ಬಂದು ಗರಿಯ ಅಡಿ ಭಾಗದಲ್ಲಿ ಮೊಟ್ಟೆ ಇಡುತ್ತದೆ.
- ಮೊಟ್ಟೆಗಳು ಬಿಳಿಯಾಗಿ ಎಲೆ ತುದಿ ಭಾಗದಲ್ಲಿ ಇಟ್ಟು ಹೋಗುತ್ತದೆ.
- ಮೊಟ್ಟೆಗಳು ಮರಿಯಾಗಿ ಅಲ್ಲೇ ಎಲೆಗಳನ್ನು ತಿನ್ನುತ್ತಾ ಬೆಳೆಯುತ್ತವೆ. ಇದು ಪೈರು ತೆಂಡೆ ಒಡೆಯುವ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಂಖ್ಯೆ ಹೆಚ್ಚಾದರೆ ಪರಿಗೆ ತುಂಬಾ ಹಾನಿಯಾಗುತ್ತದೆ.
ನಿಯಂತ್ರಣ ಕ್ರಮ:
- ಇದರ ನಿಯಂತ್ರಣಕ್ಕೆ ಕೀಟ ನಾಶಕದ ಸಿಂಪರಣೆ ಮಾಡಬಹುದು.
- ಕ್ವಿನಾಲ್ ಫೋಸ್ ಕೀಟನಾಶಕವನ್ನು ಸಿಂಪಡಿಸಬಹುದು.
- ಕೀಟನಾಶಕವನ್ನು ಅನಿವಾರ್ಯವಾಗಿದ್ದರೆ ಮಾತ್ರ ಬಳಕೆ ಮಾಡಬೇಕು.
- ಸಾಮಾನ್ಯವಾಗಿ ಅಧಿಕ ಮಳೆ ಇದ್ದಾಗ ಇದರ ಹಾವಳಿ ಹೆಚ್ಚು.
- ಈ ಸಮಯಕ್ಕೆ ಸರಿಯಾಗಿ ಭತ್ತದ ಗದ್ದೆಗಳಿಗೆ ಪರಭಕ್ಷಕ ಕೀಟಗಳ ಪ್ರವೇಶವಾಗುತ್ತವೆ.
- ಒಂದು ಜಾತಿಯ ಜೇಡ ಹಾಗೆಯೇ ಡ್ರಾಗನ್ ಪ್ಲೈ ಇವುಗಳು ಇದನ್ನು ತಿನ್ನುವ ಪರಭಕ್ಷಕಗಳಾಗಿರುತ್ತವೆ.
- ಇವುಗಳು ಗದ್ದೆಗೆ ಹೆಚ್ಚಿನ ಪ್ರಮಾಣದಲ್ಲಿ ಅಕರ್ಷಿತವಾಗಲು ಕೀಟನಾಶಕ ಸಿಂಪರಣೆ ಮಾಡದಿರುವುದೇ ಉತ್ತಮ.
- ಬೇವು ಮೂಲದ ಕೀಟನಾಶಕವೂ ಈ ಕೀಟಗಳ ನಿಯಂತ್ರಣದಲ್ಲಿ ಕೆಲಸ ಮಾಡುತ್ತವೆ.
- ಭತ್ತದ ಪೈರಿನ ಮೇಲೆ ಬೂದಿಯನ್ನು ಚಿಮುಕಿಸುವುದರಿಂದ ಈ ಕೀಟದ ಹತೋಟಿಯಾಗುತ್ತದೆ
- ಮಳೆ ಹೆಚ್ಚು ಬರುವ ಆಶಾಢ ಮಾಸದಲ್ಲಿ ಹೊಲದಲ್ಲಿ ಪಾಪಸು ಕಳ್ಳಿಯ ಕೋಲನ್ನು ಎಕರೆಗೆ 4-5 ಸಂಖ್ಯೆಯಲ್ಲಿ ಊರುವುದರಿಂದ ಪಕ್ಷಿಗಳ ಆಕರ್ಷಣೆಯಾಗಿ ಇವು ಹುಳವನ್ನು ಹುಡುಕಿ ತಿಂದು ನಾಶ ಮಾಡುತ್ತವೆ.
- ಬೇರೆ ಬೇರೆ ಪರಭಕ್ಷಕಗಳು ಇರುವ ಕಾರಣ ಈ ಸಮಯದಲ್ಲಿ ಕೀಟನಾಶಕವನ್ನು ಬಳಕೆ ಮಾಡುವುದು ಅಷ್ಟುಸೂಕ್ತವಲ್ಲ.
- ಹಗ್ಗವನ್ನು ಹೊಲದ ಎರಡೂ ಬದುಗಳಲ್ಲಿ ಇಬ್ಬರು ಹಿಡಿದು ಪೈರಿನ ಮೇಲೆ ಎಳೆಯುವುದರಿಂದ ಹುಳಗಳು ಉದುರಿ ನೀರಿಗೆ ಬೀಳುತ್ತವೆ.
- ಇದನ್ನು ಅಲ್ಲಿರುವ ಕಪ್ಪೆ ಇತ್ಯಾದಿ ತಿನ್ನುತ್ತದೆ.
ಬತ್ತ ಬೆಳೆಯುವ ರೈತರು ಈ ಸಮಯದಲ್ಲಿ ಗರಿಗಳಿಗೆ ಹೆಚ್ಚು ಹಾನಿಯಾಗದಂತೆ ಜಾಗರೂಕತೆ ಬಹಿಸಬೇಕು. ಗರಿಗಳಿಗೆ ಹೆಚ್ಚು ಹಾನಿಯಾದರೆ ತೆಂಡೆ ಒಡೆಯುವಿಕೆ ಕಡಿಮೆಯಾಗಿ ತೆನೆ ಪ್ರಮಾಣ ಕಡಿಮೆಯಾಗುತ್ತದೆ.
end of the article:——————————
search words: paddy# paddy pest # paddy pest control# paddy leaf eating caterpillar# paddy crop# green horned catterpillar# Yellow harry caterpiller# skipper# Dragon fly#
ಓದುಗರಿಗೆ ಪ್ರಶ್ನೆ;
1. 10X 6X 4 ಮೀ. ಉದ್ದ, ಅಗಲ, ಆಳದ ಹೊಂಡದಲ್ಲಿ ಎಷ್ಟು ಸಾಕಬಹುದು ಮೀನುಗಳನ್ನು ಸಾಕಬಹುದು.
2. ಬೂದಿಯೊಂದಿಗೆ —————– ಮಿಶ್ರಣ ಮಾಡಿದಾಗ ಅದು ರೋಗ , ಕೀಟಗಳನ್ನು ದೂರ ಮಾಡುತ್ತದೆ.
ಉತ್ತರವನ್ನು 9663724066 ಗೆ ಕಳುಹಿಸಿ.