Headlines

ರೈತರ ನಷ್ಟಕ್ಕೆ ಪರಿಹಾರ ಇದ್ದರೆ ಇದೊಂದೇ


ತಾವು ಮಾಡದ ತಪ್ಪಿಗೆ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ದ್ರಾಕ್ಷಿ ಬೆಳೆಗಾರರು ತಮ್ಮ ದ್ರಾಕ್ಷಿಯನ್ನು ತಿಪ್ಪೆಗೆ ಸುರಿದಿದ್ದಾರೆ. ಟೊಮೇಟೋ ಬೆಳೆದವರು ಕೊಯಿಲು ಮಾಡಲೇ ಇಲ್ಲ. ಇನ್ನು ಅನನಾಸು, ಕಲ್ಲಂಗಡಿ ಬಹುತೇಕ ಎಲ್ಲಾ ಬೆಳೆ ಬೆಳೆದವರೂ ತಲೆಗೆ ಕೈ ಇಟ್ಟು ಕುಳಿತಿದ್ದಾರೆ. ಯಾರಿಗೂ ವಿಮೆ ಇಲ್ಲ. ಇವರ ನಷ್ಟಕ್ಕೆ ಪರಿಹಾರ ಕೊಡುವುದು ಹೇಗೆ?

  • ಸರಕಾರ ಸಾಲ ಮನ್ನಾ ಮಾಡಬಹುದೇ? ಬೆಳೆ ನಷ್ಟ ಕೊಡಬಹುದೇ?
  • ಯಾವುದಕ್ಕೂ ಸರಕಾರದ ಖಜಾನೆಯಲ್ಲಿ ದುಡ್ಡು ಬೇಕಲ್ಲವೇ?
  • ಇನ್ನು ಒಂದೆರಡು ತಿಂಗಳಲ್ಲಿ ಎಲ್ಲಾ ಚಿತ್ರಣ ಗೊತ್ತಾಗುತ್ತದೆ.
  • ಸರಕಾರೀ ವ್ಯವಸ್ಥೆಯಲ್ಲಿ ನೌಕರರಿಗೆ ಸಂಬಳ ಕೊಡುವುದಕ್ಕೂ ಹಣ ಇರುವ ಸ್ಸಾಧ್ಯತೆ ಇಲ್ಲ. 
ಚಿತ್ರ ರೈತ ಮಿತ್ರ ಗ್ರೂಪ್
  • ಎಲ್ಲಾ ಸರಕಾರದ ಆದಾಯ ಮೂಲಗಳೂ ಬಂದ್ ಆಗಿವೆ.
  • ಯಾವ ಕರದಲ್ಲೂ ಆದಾಯ ಹೊಂದಿಸುವಂತಿಲ್ಲ.
  • ಅಬಕಾರೀ ಆದಾಯವೂ ಬಂದ್ ಆಗಿದೆ. 
  • ಸರಕಾರಕ್ಕೆ ಆದಾಯ ಸ್ವಲ್ಪವಾದರೂ ಬರಬೇಕಿದ್ದರೆ ಇನ್ನು ಕನಿಷ್ಟ 6 ತಿಂಗಳಾದರೂ ಬೇಕು.
  • ಹೀಗಿರುವಾಗ ರೈತರ ಸಾಂತ್ವನ ಹೇಗೆ. ಅವರ ಸ್ಥಿತಿ ಏನಾಗಬಹುದು ಎಂದು ಯೋಚಿಸಿದರೇ ಭಯವಾಗುತ್ತದೆ.
ಕೊಳ್ಳುವವರಿಲ್ಲದೆ ಟೊಮಾಟೋ ಕೊಯಿಲೇ ಮಾಡಿಲ್ಲ

ನಮ್ಮ ರೈತರ ಸ್ಥಿತಿ:

  • ನಮ್ಮ ದೇಶದ ರೈತ ಕೈಯಲ್ಲಿ ಮೂಲಧನ ಇಲ್ಲದೆ  ಕೃಷಿ ಮಾಡುವವ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ.
  • ಬೆಳೆ ಬೆಳೆಸಬೇಕಾದರೆ ಅದಕ್ಕೇ ಮುಂಗಡ ಸಾಲ ಪಡೆದಿರುತ್ತಾರೆ.
  • ಸಾಂಸ್ಥಿಕ ಹಣಕಾಸು ಸಂಸ್ಥೆಗಳಲ್ಲದೆ  ಖಾಸಗಿ ಲೇವಾದೇವಿದಾರರಿಂದಲೂ ಹಣ ಪಡೆದಿರುತ್ತಾರೆ.
  • ಬರೇ ಸಾಲ ಮಾತ್ರವಲ್ಲ, ಬೆಳೆ ಪೋಷಣೆ ಮತ್ತು ಬೆಳೆ ಸಂರಕ್ಷಣೆಗೆ ಬೇಕಾಗುವ  ಸಾಮಾಗ್ರಿಗಳನ್ನೂ ಸಹ ಸಾಲ ರೂಪದಲ್ಲಿ ಖರೀದಿಸುವ ಸ್ಥಿತಿ ರೈತರದ್ದು.
ಕಲ್ಲಂಗಡಿ ಕೊಯಿಲು ಮಾಡಿಲ್ಲ

ಇವೆಲ್ಲಾ ಸದ್ಯವೇ  ರೈತನ ಮೈ ಮೇಲೆ ಬರಲಿದೆ. ರೈತ ಇದನ್ನು ಹೇಗೆ ಸಹಿಸಿಕೊಂಡಾನು ಎಂದು ಗ್ರಹಿಸಿದರೇ ಮೈ ಜುಂ ಎನ್ನುತ್ತದೆ. ಉದುರಿ ಸಾಮಾಗ್ರಿ ಕೊಟ್ಟವರು ರೈತರನ್ನು ಪೀಡಿಸಲಿದ್ದಾರೆ. ಅವರಿಗೂ ಅವರ ಸರಬರಾಜುದರಾರು ದುಂಬಾಲು ಬೀಳುತ್ತಾರೆ.

ಕಲ್ಲಂಗಡಿ ಕೊಯಿಲು ಮಾಡಿ ವಾರವಾದರೂ ಕೊಳ್ಳುವವರಿಲ್ಲ
  • ಇದೆಲ್ಲವೂ ರೈತನ ಮೇಲೆ ಒತ್ತಡ ಬಿದ್ದು, ಒಂದೋ ರೈತ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ಜಮೀನು ಮಾರುವ ಸ್ಥಿತಿ  ಉಂಟಾದರೂ ಅಚ್ಚರಿ ಇಲ್ಲ. 

ರೈತರ ನಷ್ಟಕ್ಕೇನು ಪರಿಹಾರ?

ಹೂವು ಕೊಯ್ದು ಗಿರಾಕಿ ಇಲ್ಲದೆ ಇಡಲಾಗಿದೆ
  •  ರೈತರು ಬೆಳೆದ ಯಾವುದೇ  ಬೆಳೆ ನಿಷೇಧಿತ ಅಲ್ಲ.
  • ಇವೆಲ್ಲಾ ಕೃಷಿ, ತೋಟಗಾರಿಕಾ ಬೆಳೆಗಳು. ಇವುಗಳ ಅಭಿವೃದ್ದಿಗೆ  ಬಗ್ಗೆ ಮತ್ತು ರೈತರ ಕಲ್ಯಾಣಕಾಗಿಯೇ ತೋಟಗಾರಿಕಾ ಇಲಾಖೆ , ಕೃಷಿ ಇಲಾಖೆ ಎಂಬ ಎರಡು ಇಲಾಖೆಗಳನ್ನು ಸರಕಾರ ಸ್ಥಾಪಿಸಿದೆ.
  • ಇವರು ಯಾರೂ ಇಂಥಹ ಸಂದರ್ಭದಲ್ಲಿ ರೈತರ ಸಂಭವನೀಯ ನಷ್ಟಕ್ಕೆ ಪರಿಹಾರವನ್ನು ಸೂಚಿಸಲೇ ಇಲ್ಲ.
  • ಅವರೆಲ್ಲಾ ಜಾಣ ಮೌನವನ್ನೇ ತೋರಿದ್ದಾರೆ.
  • ಬೆಳೆದ ಬೆಳೆಯನ್ನು ಆಪತ್ಕಾಲದಲ್ಲಿ ದಾಸ್ತಾನು ಮಾಡುವರೇ ಇವರಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ.
  • ಮೌಲ್ಯ ವರ್ಧನೆ ಮಾಡಿ ಅದನ್ನು ಮುಂದಕ್ಕೆ ಕಾಪಿಡುವ ವ್ಯವಸ್ಥೆಗಳಿಲ್ಲ.
  • ಎಲ್ಲರೂ ಸಲಹೆ ಕೊಡುವವರೇ ಆಗಿದ್ದಾರೆ.
  • ಸಲಹೆ ಕೊಡುವುದೂ ಹೆಸರು ಹೇಳಬಾರದ ವೃತ್ತಿ ಮಾಡುವುದೂ ಒಂದೇ ಅಂತೆ. ಇದರಲ್ಲಿ ಕಳೆದು ಕೊಳ್ಳಲು ಏನೂ ಇಲ್ಲ. ಹಾಗಾಗಿದೆ ನಮ್ಮ ಸ್ಥಿತಿ.
ಮೆಣಸಿನ ಕಾಯಿ ಕೊಳ್ಳುವವರಿಲ್ಲ (ಚಿತ್ರ: ರೈತ ಮಿತ್ರ)

ಇಲ್ಲಿ ಇರುವುದು ಎರಡೇ ಆಯ್ಕೆಗಳು:

  • ಮಾನ್ಯ ಮುಖ್ಯ ಮಂತ್ರಿಗಳು ಕೃಷಿ ಭೂಮಿಯನ್ನು ಯಾರೂ ಸಹ  ಖರೀದಿ ಮಾಡಲು  ಅನುಕೂಲವಾಗುವಂತೆ ಮುಕ್ತ ಅವಕಾಶವನ್ನು ಕಲ್ಪಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
  • ಸದ್ಯವೇ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು  ನಿರ್ಧರಿಸಿದ್ದಾರೆ.
  • ಆ ಪ್ರಕಾರ ಎಲ್ಲವೂ  ಗ್ರಹಿಸಿದಂತೇ ಆದರೆ  ಕೃಷಿಕರ ಭೂಮಿಯನ್ನು ಉತ್ತಮ ಬೆಲೆಗೆ ಕಾರ್ಪೋರೇಟ್ ಗಳು ಕೊಳ್ಳುವಂತಾದರೆ,
  •  ರೈತರ ನಷ್ಟವನ್ನು  ಹಾಗಾದರೂ ಹೊಂದಿಸಿಕೊಳ್ಳುವಂತಾಗಬಹುದು.
  • ಬಹುಷಃ ಈ ವ್ಯವಸ್ಥೆಯಲ್ಲಿ ರೈತರಿಗೆ ನ್ಯಾಯ ಸಿಗುವುದು ಕಷ್ಟ ಸಾಧ್ಯ.
  • ಎರಡನೇ ಆಯ್ಕೆ ಎಂದರೆ ಈಗ ಚಾಲ್ತಿಯಲ್ಲಿರುವ ಕೃಷಿ ಮತ್ತು ತೋಟಗಾರಿಕಾ ಇಲಾಖೆಯನ್ನು  ಬಂದ್ ಮಾಡುವುದು.
ಬೆಳೆದ ಪ್ರಾಯಶ್ಚಿತ್ತಕ್ಕೆ ಈ ಕೆಲಸ. ಕೊಳ್ಳುವವರು ಯಾರೋ ಗೊತ್ತಿಲ್ಲ.
  • ಇದರಲ್ಲಿ ಕೋಟ್ಯಾಂತರ ರೂಪಾಯಿಗಳ  ಖರ್ಚು ಸರಕಾರಕ್ಕೆ ಉಳಿತಾಯ ಆಗುತ್ತದೆ. 
  • ಅದನ್ನು ರೈತರ  ನಷ್ಟ ಪರಿಹಾರಕ್ಕೆ ಕೊಡಬಹುದು. ಹೇಗೂ ಇನ್ನು ಆರ್ಥಿಕತೆ ಹಿಡೆ ಬರುವುದಂತೂ ಖಂಡಿತಾ.
  • ಆದಾಯ ಮೂಲಗಳಿಲ್ಲದ  ಬಹು ಸಂಖ್ಯೆಯ ರೈತರಿಗೆ ಅಗತ್ಯವಿಲ್ಲದ ಈ ಇಲಾಖೆಗಳನ್ನು ನಿಲ್ಲಿಸುವುದರಿಂದ  ನಮ್ಮ ಕೃಷಿ , ತೋಟಗಾರಿಕಾ ಕ್ಷೇತ್ರ ಖಂಡಿತವಾಗಿಯೂ ಬಡವಾಗಲಾರದು. 
  • ಮುಂದುವರಿದು ಹೇಳಬೇಕೆಂದರೆ  ನಮ್ಮ ದೇಶದ ರೈತ ಇಂದು ತಮ್ಮ ವೃತ್ತಿಗೆ ಬೇಕಾದ  ಮಾಹಿತಿಗಳನ್ನು ಎಲ್ಲಿಂದಲಾರದರೂ ಪಡೆದು ವೃತ್ತಿಯನ್ನು ನಡೆಸುವಷ್ಟು ಮುಂದುವರಿದಿದ್ದಾರೆ.

ಇದು ಯಾರೂ ಗಂಭೀರವಾಗಿ ಯೋಚಿಸದ ವಿಚಾರ. ರೈತರು ಸರಕಾರದಿಂದ ಪರಿಹಾರ ಕೇಳುವುದರಲ್ಲಿ ನ್ಯಾಯ ಇದೆ. ನಾವು ಕೊಳ್ಳುವ ಪ್ರತೀಯೊಂದು ಬೆಳೆ ಒಳಸುರಿಗಳಿಗೂ ಟ್ಯಾಕ್ಸ್ ಕೊಡುತ್ತೇವೆ. ಸಮಾಜದ ಉಳಿದೆಲ್ಲಾ ವರ್ಗಕ್ಕೆ ಆಹಾರ ಸುರಕ್ಷತೆಯನ್ನು ಕೊಡುತ್ತೇವೆ. ಇಷ್ಟಿದ್ದೂ ನಾವು ಯಾಕೆ ದಿವಾಳಿ ಸ್ಥಿತಿಗೆ ಬರಬೇಕು?

ನಿಮಗಿದು ಇಷ್ಟವಾದರೆ Like  ಮಾಡಿ ಮತ್ತು Share  ಮಾಡಿ

Leave a Reply

Your email address will not be published. Required fields are marked *

error: Content is protected !!