ಮಾವಿನ ಹಣ್ಣಿನಲ್ಲಿ ಹುಳವಾಗುತ್ತದೆಯೇ? ಈ ಉಪಾಯ ಮಾಡಿ.

fruit fly less mango

ಮಾವಿನ ಹಣ್ಣನ್ನು ಕೊರೆದು ನೋಡದೆ ಬಳಕೆ ಮಾಡುವುದು ಸಾಧ್ಯವೇ ಇಲ್ಲ. ನೋಡಲು ಸರಿಯಾಗಿದ್ದರೂ ಒಳಗೆ ಹುಳ ಇರಬಹುದು. ಹುಳ ಇಲ್ಲವಾದರೆ  ಒಳಗೆ ರಸ ಕದಡಿರಬಹುದು. ಮಾವಿನ ಹಣ್ಣಿನಲ್ಲಿ ಹುಳ ಬರುವುದಿಲ್ಲ ಎಂದಾದರೆ ಎಷ್ಟು ಖುಷಿ ಪಟ್ಟು ತಿನ್ನಬಹುದು. ಆದರೆ  ಹುಳ ಇರದ ಮಾವು ಹುಡುಕುವುದೇ ಕಷ್ಟ

 •  ಮಾವಿನ ಮರದಲ್ಲಿ ಕಾಯಿಗಳು ಲಿಂಬೆ ಗಾತ್ರದಷ್ಟು ಬೆಳೆಯುವಾಗ ನೊಣ ತೊಂದರೆ ಕೊಡಲು ಪ್ರಾರಂಭಿಸುತ್ತದೆ.
 • ವಾಗುತ್ತದೆ.
 • ಹಂತದಿಂದಲೇ ಪ್ರಾರಂಭಿಸಿ ಹಣ್ಣು ನೊಣ ಬಾರದಂತೆ ಮಾಡಿದರೆ ಸ್ವಲ್ಪ ಮಟ್ಟಿಗೆಯಾದರೂ ಉತ್ತಮ ಹಣ್ಣನ್ನು ಉಳಿಸಬಹುದು.

 ಯಾವ ನೊಣ: 

FRUIT FLY LAYING EGGS
ಹಣ್ಣು ನೊಣ ಮೊಟ್ತೆ ಇಡುವುದು,
 • ಕಂಚುಕಾರ ನೊಣದ ತರಹದ  ಒಂದು ನೊಣ, ಮಾವು ಕಾಯಿ ಹಂತದಲ್ಲಿದ್ದಾಗ ಪ್ರಾರಂಭಿಸಿ ಸಿಪ್ಪೆಯ ಮೇಲೆ ಚುಚ್ಚಿ ಮೊಟ್ಟೆ ಇಡುತ್ತದೆ.
 • ಹಣ್ಣು ಪಕ್ವವಾಗುವಾಗ ಹಣ್ಣಿನೊಳಗೆಲ್ಲಾ ಹುಳವಿರುತ್ತದೆ.
 • ಮಾವು ಬೆಳೆಯಲಾಗುವ ಎಲ್ಲಾ ಕಡೆ  ಹಣ್ಣು ನೊಣ ಇದೆ. ಹಣ್ಣು ಇರುವಲ್ಲೆಲ್ಲಾ ಹಣ್ಣು ನೊಣ ಇದೆ ಎನ್ನಬಹುದು.
 • ಮಾರಾಟ, ದಾಸ್ತಾನುರಫ್ತು ಪ್ರತೀಯೊಂದರಲ್ಲೂ  ಮಾವಿಗೆ ಕೆಟ್ಟ ಹೆಸರು ತಂದ ಕೀಟ ಇದು.

larvae inside fruit

ಮಳೆ ಬರುವುದಕ್ಕೆ  ಮುಂಚೆ ಹಣ್ಣಾಗುವ ಮಾವಿನ ಕಾಯಿಗೆ ಹಣ್ಣು ನೊಣ ಉಪಟಳ ಸ್ವಲ್ಪ ಕಡಿಮೆ. ಒಂದು ಮಳೆ ಬಂದರೆ ಸಾಕು ತೊಂದರೆ  ಹೇಳತೀರದು.

Fruit fly larvae
ಹಣ್ನು ನೊಣದ ಹುಳ

Fly attracting trap

ನಿಯಂತ್ರಣ ಹೇಗೆ?

 • ನಿಯಂತ್ರಣಕ್ಕೆ  ಕೀಟನಾಶಕದ  ಬಳಕೆ ಬೇಕೋ ಬೇಡವೋ  ಎಂದು ನಿರ್ಧರಿಸಲು ಮೋಹಕ ಬಲೆಗಳು ಸಹಕಾರಿ.
 • ಮೋಹಕ ಬಲೆಗಳೆಂದರೆ ಹಣ್ಣು ನೊಣದ ಟ್ರಾಪುಗಳು.
 • ಇದನ್ನು ಮಾವಿನ ಮಿಡಿ ಕಚ್ಚುವ ಸಮಯದಲ್ಲಿ ಮರದ ಗೆಲ್ಲಿನಲ್ಲಿ ನೆಲಮಟ್ಟದಿಂದ 4-5 ಅಡಿ ಎತ್ತರಕ್ಕಿರುವಂತೆ ನೆರಳಿನ ಜಾಗದಲ್ಲಿ ನೇತು ಹಾಕಬೇಕು.
 • ಅದರಲ್ಲಿ ಮಿಥೇಲ್ ಯುಜೆನಾಲ್ ಎಂಬ ರಾಸಾಯನಿಕ ಇರುತ್ತದೆ.
 • ಇದು ಹಣ್ಣು ನೊಣದ ಗಂಡು ದುಂಬಿಗೆ  ಹೆಣ್ಣಿನ ವಾಸನೆಯನ್ನು ಸೂಸುತ್ತದೆ.
 • ಅದಕ್ಕೆ  ಆಕರ್ಷಿತವಾಗಿ  ಗಂಡು ನೊಣಗಳು ಬರುತ್ತವೆ.
 • ಅಲ್ಲಿ ಸುತ್ತುತ್ತಾ  ತಲೆ ತಿರುಗಿ  ಬೀಳುತ್ತವೆ.

ಟ್ರಾಪುನ್ನು ಕಾಯಿಗಳು ನಿಂಬೆ ಕಾಯಿಯ ಗಾತ್ರದಲ್ಲಿರುವಾಗ ಇಟ್ಟರೆ  ಗಂಡು ಇಲ್ಲದೆ ಹೆಣ್ಣು ಸಂತಾನಾಭಿವೃದ್ದಿಗೆ ಅನನುಕೂಲವಾಗಿ  ಮೊಟ್ಟೆ ಇಡುವುದಕ್ಕೆ ಅನನುಕೂಲವಾಗುತ್ತದೆ.  ಟ್ರಾಪನ್ನು  ನೇತಾಡಿಸಿದಾಗ ಬೀಳುವ ನೊಣಗಳ ಸಂಖ್ಯೆಯನ್ನು  ಗಮನಿಸಿ ಮೊದಲ ಹಂತದಲ್ಲಿ  ( ಕಾಯಿ ಬೆಳವಣಿಗೆಗೆ 1 ತಿಂಗಳ ಮುಂಚೆ) ಕೀಟನಾಶಕ ಸಿಂಪಡಿಸಿ ಒಂದಷ್ಟು ನೊಣಗಳನ್ನು  ನಾಶಮಾಡಬಹುದು. 

 • ಒಂದು ಟ್ರಾಪಿನಲ್ಲಿ ದಿನಕ್ಕೆ 6ಕ್ಕಿಂತ ಹೆಚ್ಚು ನೊಣಗಳು ಬಿದ್ದರೆ ಅದರ ಸಂಖ್ಯೆ ಹೆಚ್ಚುಇದೆ ಎಂದರ್ಥ.
 • ಅದನ್ನು ಟ್ರಾಪಿನೊಂದಿಗೆ ಕೀಟನಾಶಕದ ಬಳಕೆ ಮಾಡಿ ನಿಯಂತ್ರಣ ಮಾಡಬೇಕಾಗುತ್ತದೆ.
 • ಮನೆ ಬಳಕೆಯ ಹಣ್ಣಿಗೆ ಆದರೆ ಎರಡು ಟ್ರಾಪು ಹಾಕಿದರೆ ಸಾಕು.
simple trap
ಸರಳ ಟ್ರಾಫ್

ಹಣ್ಣು ನೊಣಗಳು ಎಲ್ಲಿಂದ ಬರುತ್ತವೆ:

 • ಮಾವಿನ ಸಸಿ ನೆಟ್ಟ ಮೊದಲ ವರ್ಷ ಹಣ್ಣು ನೊಣದ ತೊಂದರೆ ಬಹಳ ಕಡಿಮೆ.
 • ನಂತರದ ವರ್ಷ  ಅದು ಪ್ರಾರಂಭವಾಗುತ್ತದೆ.
 • ಮಾವಿನ ಮರದಲ್ಲಿ ಬಿಡುವ ಎಲ್ಲಾ ಹಣ್ಣುಗಳೂ ಉಳಿಯುವುದಿಲ್ಲ.
 • ಕೆಲವು ಅಪಕ್ವ ಸ್ಥಿತಿಯಲ್ಲಿ ಉದುರುತ್ತವೆ.
 • ಅದನ್ನು ಯಾಕಾಗಿ ಹೆಕ್ಕುವುದು, ಹಾಳು ಮಾವಿನಿಂದ ನಮಗೇನು ಪ್ರಯೋಜನ ಎಂದು ಅದನ್ನು ಅಲ್ಲೇ ಬಿಡುತ್ತೇವೆ.
 • ಅದರ ಮೂಲಕ ಹಣ್ಣು ನೊಣ ಸಂತಾನಾಭಿವೃದ್ದಿಯಾಗುತ್ತದೆ.
 • ಅವು ಹಾರುವ ಕೀಟಗಳಾಗಿದ್ದು  ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾರಿ ಬರುತ್ತವೆ
 • ಬಿದ್ದ ಕಾಯಿಗಳ ಮೂಲಕ  ಸಂತಾನಾಭಿವೃದ್ದಿಯಾಗಿ ಅದು  ನೆಲದಲ್ಲಿ, ಮರದ ಎಡೆ ಸಂದುಗಳಲ್ಲಿ  ವಾಸ್ತವ್ಯವಿರುತ್ತದೆ.
 • ಮತ್ತೆ ಮಾವಿನ ಹಣ್ಣಿನ ಸೀಸನ್ನಲ್ಲಿ ಕಾಯಿಯ ಮೇಲೆ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ.
 • ಆದ ಕಾರಣ  ಮೂಲದಲ್ಲೇ  ಹಣ್ಣು ನೊಣದ ಸಂತತಿಯನ್ನು ಹತ್ತಿಕ್ಕಲು ಮಾವು ಬೆಳೆಸುವವರು ಬುಡದಲ್ಲಿ  ಬೀಳುವ ಯಾವುದೇ ಕಾಯಿಗಳನ್ನು ಅಲ್ಲೇ ಕೊಳೆಯಲು ಬಿಡಬಾರದು.
 • ಅದನ್ನು  ಸುಡಬೇಕು ಇಲ್ಲವೇ ಆಳದಲ್ಲಿ ಹುಗಿಯಬೇಕು. ಇಲ್ಲವೇ ಬಿದ್ದ ಕಾಯಿಗಳನ್ನು ಕೀಟನಾಶಕ ದ್ರಾವಣದಲ್ಲಿ  ಹಾಕಬೇಕು.   

ಜೀವನ ಚಕ್ರ: 

 • ಹಣ್ಣು ನೊಣವು ಕಾಯಿಗಳ ಮೇಲೆ ಕುಳಿತು ತನ್ನ ಶರೀರದ ಭಾಗದ  ಕೊಂಡಿಯ ಮೂಲಕ ಚುಚ್ಚಿ ಮೊಟ್ಟೆ ಇಡುತ್ತದೆ.
 • ಮೊಟ್ಟೆಗಳು ಅದರೊಳಗೆ ಬೆಳೆಯುತ್ತಾ  ಸುಮಾರು 12 -13 ದಿನಗಳಲ್ಲಿ ದುಂಬಿಯಾಗುತ್ತದೆ.
 • ಮಾವು ಬಲಿಯುತ್ತಿರುವಾಗ ಕಾಯಿಗಳ ಮೇಲೆ ಕುಳಿತಿರುವುದನ್ನು ಗಮನಿಸಬಹುದು.
 • ಹುಳ ಭಾಧಿತವಾದುದು  ಉದುರಿ ಬಿದ್ದರೆ ಅದರಲ್ಲಿದ್ದ ಹಣ್ಣಿನ ಹುಳುಗಳು ಹೊರಬಂದು ಮಣ್ಣಿಗೆ ಸೇರಿ 4-5  ದಿನದಲ್ಲಿ ದುಂಬಿಯಾಗುತ್ತದೆ.
 •  ಮತ್ತೆ ಜೊಡಿಯಾಗಿ ಮೊಟ್ಟೆ ಇಡುತ್ತದೆ.
 • ಹಳದಿ ಬಣ್ಣದ ಹುಳ ಚಿಕ್ಕದಾದರೂ ಅದು ನೆಲಕ್ಕೆ ಬಿದ್ದಾಗ ಎರಡೂ ಮಗ್ಗುಲನ್ನೂ ನೆಲಕ್ಕೆ ಒತ್ತಿ ಸುಮಾರು 1 ಮೀ ಜಿಗಿಯುತ್ತದೆ.

ಟ್ರಾಪು ಹೇಗೆ: 

 • ಟ್ರಾಪುಳನ್ನು ಒಂದು ಎಕ್ರೆಗೆ 2 ರಿಂದ 10 ಸಂಖ್ಯೆಯಲ್ಲಿ ಕಟ್ಟಬೇಕು.
 • ನೀರಿನ  ಪ್ಲಾಸ್ಟಿಕ್ ಬಾಟಲಿಯನ್ನು  (ಚಿತ್ರದಲ್ಲಿ ತೋರಿದಂತೆ) ಎರಡೂ ಕಡೆ ತೆರೆದು ಮಿಥೇಲ್ ಯುಜಿನಾಲ್ ದ್ರವ ಹಾಕಿದ ಕಾರ್ಡ್ ಬೋರ್ಡ್ ತುಂಡನ್ನು ಬಾಟಲಿಯ  ಮುಚ್ಚಳಕ್ಕೆ ಹಗ್ಗದಿಂದ ಸುರಿದು ಬಾಟಲಿಯ ಒಳಭಾಗದೊಳಗೆ ನೇತಾಡಿಸಬೇಕು.
 • ಕೆಲವು  ತಯಾರಿಕೆಗಳಲ್ಲಿ  ನೇತಾಡಿಸುವ  ಕಂಟೈನರ್ ಸಹ ದೊರೆಯುತ್ತದೆ.
 • ಮೋಹಕ ಬಲೆಗಳನ್ನು  ಹಣ್ಣುಗಳೆಲ್ಲಾ ಮುಗಿಯುವ ವರೆಗೂ  ಉಳಿಸಬೇಕು.
 • ಒಂದು ಹಣ್ಣು ನೊಣಕ್ಕೆ ಆಹಾರವಾಗಿ ಕೊಳೆತು  ಕೆಳಕ್ಕೆ ಬಿದ್ದರೂ ಸಹ ಅದು ಮುಂದಿನ ವರ್ಷಕ್ಕೆ  ನೆಲದಲ್ಲಿ ಸುಪ್ತಾವಸ್ಥೆಯಲ್ಲಿ  ಇರುತ್ತದೆ.
 • ಕನಿಷ್ಟ ವಾರಕ್ಕೊಮ್ಮೆಯಾದರೂ  ಬಲೆಯ ಸಂಗ್ರಾಹಕದಲ್ಲಿ  ಬಿದ್ದ  ನೊಣಗಳನ್ನು ತೆಗೆದು ಸ್ವಚ್ಚಗೊಳಿಸುತ್ತಿರಬೇಕು.
 • ಪಾತ್ರೆಯೊಳಗೆ ನೀರು ಸೇರಿಕೊಂಡರೆ ಅದನ್ನು ತೆಗೆಯಬೇಕು.
 • ಮೋಹಕ ಬಲೆಗಳು ಮಾರುಕಟ್ಟೆಯಲ್ಲಿಯೂ ದೊರೆಯುತ್ತದೆ. ಬೆಂಗಳೂರಿನಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಸಹ ಲಭ್ಯವಿದೆ.
 • ತುಳಸಿ ಗಿಡ ಹೂ ಬಿಡುವಾಗ ಅದರ ಸುವಾಸನೆಗೆ ಈ ಹಣ್ಣು ನೊಣಗಳು ಬರುತ್ತದೆ. ಅದನ್ನು ಬಲೆ ಬೆಳೆಯಾಗಿ ಬೆಳೆಯಬಹುದು.

ರಾಸಾಯನಿಕ ಹತೋಟಿ:

plastic or any other covering to fruit is safe method

 • ರಾಸಾಯನಿಕವಾಗಿ ಹತೋಟಿ ಮಾಡಲು ಹೂವು ಬಿಡುವ ಸಮಯದಲ್ಲಿ ಮರದ ಬುಡ ಭಾಗವನ್ನು ಉಳುಮೆ ಮಾಡಿ ತೆಳುವಾಗಿ ನೀರು ಸಿಂಪರಣೆ  ಮಾಡಿ ಮರದ ಗೆಲ್ಲು ವ್ಯಾಪಿಸಿರುವಷ್ಟು ಭಾಗಕ್ಕೆ  ಕ್ಲೋರೋಫೆರಿಫೋಸ್, ಅಥವಾ ಮೆಲಾಥಿಯಾನ್ ಕೀಟನಾಶಕವನ್ನು  (3-5 ಮಿಲಿ) ಸಿಂಪಡಿಸಿದರೆ ಬುಡ, ನೆಲ ಭಾಗದಲ್ಲಿ ಅಡಗಿರುವ ಹುಳದ ಕೊಶಗಳು ಸಾಯುತ್ತವೆ
 • ಜನವರಿಫೆಬ್ರವರಿ ತಿಂಗಳಲ್ಲಿ ಶೇ. 1 ಬೇವಿನ ಬೀಜದ ಕಷಾಯವನ್ನು ಸಿಂಪರಣೆ  ಮಾಡುವುದರಿಂದ ಬಹಳಷ್ಟು  ಕೀಟಗಳು  ಸಾಯುತ್ತವೆ.

ಮನೆ ಬಳಕೆಗಾಗಿ ಸಣ್ಣ ಪ್ರಮಾಣದಲ್ಲಿ ಮಾವು ಬೆಳೆಸಿದವರು ಕೈಗೆ ಎಟಕುವ ಮಾವಿನ ಕಾಯಿಗಳಿಗೆ ಲಿಂಬೆ ಕಾಯಿಯಷ್ಟು ಗಾತ್ರದಲ್ಲಿದ್ದಾಗ  ಪ್ಲಾಸ್ಟಿಕ್ ಇಲ್ಲವೇ  ನ್ಯೂಸ್ ಪೇಪರಿನ ಕವರ್ ಮಾಡಿ ಕಾಯಿಗಳನ್ನು ಮುಚ್ಚುವಂತೆ ಮಾಡಿದರೆ 100 ಕ್ಕೆ 100 ಹಣ್ಣು ನೊಣ ತೊಂದರೆ ಇಲ್ಲ. ಅದನ್ನು ಅಂಜಿಕೆ ಇಲ್ಲದೇ ಕಚ್ಚಿ ತಿನ್ನಬಹುದು

ಇತ್ತೀಚೆಗೆ ಇದರ ಹಾವಳಿ ಗಣನೀಯವಾಗಿ ಹೆಚ್ಚುತ್ತಿದ್ದು, ಕಾಡು ಅಮಾವು ಸಹ ಇದರಿಂದ ಹಾನಿಗೊಳಗಾಗುತ್ತಿವೆ. ಇದರ ನೈಸರ್ಗಿಕ ಶತ್ರುಗಳು ನಾಶವಾಗಿರುವುದೇ ಇದರ ವೃದ್ದಿಗೆ ಕಾರಣ.ಹಣ್ಣು ನೊಣ ನಿಯಂತ್ರಣ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗ ಬೇಕಿದೆ.

Leave a Reply

Your email address will not be published. Required fields are marked *

error: Content is protected !!