ಸಾವಯವ ಅಂಶ ಮತ್ತು ಬೆಳೆ ಉತ್ಪಾದಕತೆ.

by | Mar 17, 2020 | Organic Cultivation (ಸಾವಯವ ಕೃಷಿ) | 0 comments

ಮಣ್ಣು ಕಲ್ಲು ಖನಿಜಗಳ ಶಿತಿಲತ್ವದಿಂದ ಉಂಟಾದುದು. ಮಣ್ಣಿನಲ್ಲಿ ಹುಟ್ಟಿ ಬೆಳೆದ ಸಸ್ಯ, ಪ್ರಾಣಿಗಳ ತ್ಯಾಜ್ಯಗಳು ಮಣ್ಣಿಗೆ ಸೇರಲ್ಪಟ್ಟು ಅದು ಸಾವಯವ ಅಂಶವನ್ನು ಹೆಚ್ಚಿಸುತ್ತಾ ಬಂದಿದೆ. ಸಾವಯವ ಅಂಶ ಇಲ್ಲದ ವಿನಹ ಮಣ್ಣು ಜೀವಂತಿಕೆಯಲ್ಲಿರುವುದಿಲ್ಲ…..

ಏನು ಆಗಿದೆ?

  • ಇತ್ತೀಚಿನ ದಿನಗಳಲ್ಲಿ ಅತೀಯಾದ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ.
  • ಹಾಗೇಯೇ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ.
  • ಅವುಗಳ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದರೂ ಅವುಗಳ ಚಟುವಟಿಕೆಗೆ ಅನುಕೂಲಕರವಾಗಿಲ್ಲ.
  • ಇದರಿಂದಾಗಿ ಮಣ್ಣು ಜೀವಂತಿಕೆ ಕಳೆದು ಕೊಳ್ಳುತ್ತಿದೆ. ಬೆಳೆ ಉತ್ಪಾದಕತೆ- ಗುಣಮಟ್ಟ ಕಡಿಮೆ ಆಗುತ್ತಿದೆ.
  • ಸಾವಯವ ಅಂಶ ಕಡಿಮೆ ಇರುವ ಹೊಲದಲ್ಲಿ ಕೃಷಿ ಮಾಡುವುದು ದುಸ್ಸಾಹಸ ಎಂದೇ ಹೇಳಬಹುದು.
  • ಬೆಳೆ ಪೋಷಣೆಗಾಗಿ ನಾವು ಕೊಡುವ ರಾಸಾಯನಿಕ ಗೊಬ್ಬರಗಳ ಪ್ರತಿಫಲ ಸರಿಯಾಗಿ ದೊರೆಯಲು ಮಣ್ಣಿನಲ್ಲಿ ಸಾವಯವ ಅಂಶಗಳು ಇರಲೇ ಬೇಕು.
  • ಸಾವಯವ ಸಂಮೃದ್ಧ ಮಣ್ಣು ಉತ್ತಮ ಮಧ್ಯವರ್ತಿ ಇದ್ದಂತೆ.
  • ಆದ ಕಾರಣ ಮಣ್ಣು ಹೆಚ್ಚು ಹೆಚ್ಚು ಸಾವಯವ ಸಂಪನ್ನ ಆಗಬೇಕು.

ಸಾವಯವ ಅಂಶವು ಹೆಚ್ಚಿನ ಪ್ರಮಾಣದಲ್ಲಿದಾಗ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳಿಗೆ ಕಾರ್ಬನ್ (ಇಂಗಾಲ) ಅಂಶವು ಚೆನ್ನಾಗಿ ದೊರೆಯುತ್ತದೆ. ಇದು ಅವುಗಳಿಗೆ ಪ್ರಮುಖ ಆಹಾರ (ಶಕ್ತಿಯ) ಮೂಲವಾಗಿದೆ. ಆದ ಕಾರಣ ರಾಸಾಯನಿಕ ಗೊಬ್ಬರ ಒಂದರಿಂದಲೇ ಕೃಷಿ ಮಾಡಲು ಸಾಧ್ಯ ಎಂದೆಣಿಸದಿರಿ. ಇದರಿಂದ ಜಮೀನು ಬರಡು ಆಕಳಿನಂತಾಗಬಹುದು.

ಸಾವಯವ ಸಂಪನ್ನ ಮಣ್ಣಿನಲ್ಲಿ ಬೀಜ ಬಿಸಾಡಿದರೂ ಹುಟ್ಟುತ್ತದೆ.

  • ಭಾರತವು ವಿಶ್ವದ ಮೂರನೇ ಅತೀ ದೊಡ್ಡ ರಾಸಾಯನಿಕ ಗೊಬ್ಬರದ ಉತ್ಪಾದಕ ಮತ್ತು ಎರಡನೇ ಅತೀ ದೊಡ್ಡ ಗ್ರಾಹಕ ರಾಷ್ಟ್ರವಾಗಿದೆ.

ಸಾವಯವ ಅಂಶದ ಪ್ರಯೋಜನಗಳು:

  • ಮಣ್ಣು ಆರೋಗ್ಯವಾಗಿರಲು ಅದರಲ್ಲಿ ಕನಿಷ್ಠ ಶೇಕಡಾ 5 % ಸಾವಯವ ಅಂಶ ವಸ್ತುಗಳಿರಬೇಕು ಆದರೆ ನಮ್ಮ ದೇಶದ ಮಣ್ಣಿನಲ್ಲಿರುವ ಸಾವಯವ ಅಂಶ ಶೇಕಡಾ 0.4% ಮಾತ್ರ.
  •  ಮಣ್ಣಿನ ಗುಣಮಟ್ಟ ಮತ್ತು ಫಲವತ್ತತೆ ಹೆಚ್ಚಿಸುವಲ್ಲಿ ಸಹಾಯಕಾರಿ.
  •  ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಹೊರ ಮೂಲದಿಂದ ಪೂರೈಸಿದಾಗ ಅವು ಅಲ್ಲಿ ಬದುಕುತ್ತವೆ.
  •  ಸಸ್ಯದ ಬೇರುಗಳು ಆಳವಾಗಿ ಇಳಿಯಲು ಸಹಾಯಕಾರಿ ಮತ್ತು ಸಸ್ಯದ ಬೆಳವಣಿಗೆಗೆ ಪ್ರಚೋಧನ ಕಾರಿಯಾಗಿ ಕಾರ್ಯ ನಿರ್ವಹಿಸುವದು.


 

  • ನೈಸರ್ಗಿಕ ಮತ್ತು ಪರಿಸರ ಸಮತೋಲನ ನಿಯಂತ್ರಿಸುವಲ್ಲಿ ಬಹು ಉಪಕಾರಿ.
  •  ಸಸ್ಯ ಬೆಳವಣಿಗೆಗೆ ಅವಶ್ಯಕವಿರುವ ಪೋಷಕಾಂಶಗಳನ್ನು ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಮಾಣವನ್ನು ಇಂಗಾಲದ ಅಂಶ ವೃದ್ದಿಸುವುದು.
  • ಮಣ್ಣಿನಲ್ಲಿರುವ ಕೆಲವು ಸೂಕ್ಷ್ಮಾಣು ಜೀವಿಗಳು ಸಸ್ಯ ರೋಗವನ್ನು ನಿಯಂತ್ರಿಸುವಲ್ಲಿ ಸಹಾಯಕಾರಿ ಹಾಗೂ ಮಣ್ಣು ಗಟ್ಟಿಯಾಗುವುದನ್ನು ತಡೆಯುತ್ತದೆ.
  •  ಮಣ್ಣನಲ್ಲಿರುವ ಸಾವಯವ ಅಂಶವು ಮಣ್ಣಿನ ಸವೆತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  •  ಅಂತರ್ಜಲ ನೀರಿನ ಮಟ್ಟ ಏರಿಕೆ ಆಗಲು ಸಾವಯವ ಅಂಶ ಸಹಾಯಕಾರಿ.

ಸಾವಯವ ಅಂಶ ಹೆಚ್ಚು ಇರುವಲ್ಲಿಯೇ ಬೇರುಗಳು ಹೆಚ್ಚುವುದು

ಮಣ್ಣಿನಲ್ಲಿ ಸಾವಯವ ಪದಾರ್ಥವು ಒಂದು ಜೀರ್ಣ ಕ್ರಿಯೆ ಇದ್ದಂತೆ . ಕಿಣ್ವಗಳಿಂದ ಜೀರ್ಣಿಸಲ್ಪಟ್ಟು ಮಣ್ಣಿಗೆ ಅದು ಚೈತನ್ಯವನ್ನು ಕೊಡುತ್ತದೆ. ಯಾವುದೇ ಕಾರಣಕ್ಕೆ ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿಸದೆ ಕೃಷಿ ಮಾಡಬೇಡಿ. ಅದು ಶಾಶ್ವತ ಕೃಷಿ ಆಗಲಾರದು.

ಲೇಖಕರು : ಪೂಜಾ ಎಸ್.ಪಿ, ಮಧುಶ್ರೀ ಕೆರಕಲಮಟ್ಟಿ, ಪಿ.ಹೆಚ್.ಡಿ. ಸಂಶೋಧನಾ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!