ಕೊಕ್ಕೋವನ್ನು ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಕೊಕ್ಕೋ ಸಸ್ಯಗಳನ್ನು ಉತ್ತಮವಾಗಿ ಆರೈಕೆ ಮಾಡಿದಲ್ಲಿ ಹೆಚ್ಚುವರಿ ಕೊಡು ಪಡೆಯಬಹುದು. ನಾವು ಕಂಡುಕೊಂಡಂತೆ ಅರೆಮಲೆನಾಡು ಭಾಗದಲ್ಲಿ ಕೊಕ್ಕೋ ಬಹಳ ಉತ್ತಮವಾಗಿ ಬರುತ್ತದೆ. ರೋಗ ತೊಂದರೆ ಇಲ್ಲ.
- ಕೊಕ್ಕೋ ಸಸ್ಯವು ವರ್ಷದಲ್ಲಿ ಎರಡು ಬಾರಿ ಹೂ ಬಿಟ್ಟು ಎರಡು ಬೆಳೆ ಕೊಡುತ್ತದೆ.
- ಮೊದಲನೇ ಬೆಳೆ ಬೇಸಿಗೆ ಕಾಲದಲ್ಲೂ ಎರಡನೇ ಬೆಳೆ ಮಳೆಗಾಲದಲ್ಲೂ ದೊರೆಯುತ್ತದೆ.
- ಹೂವು ಬಿಟ್ಟು 6 ತಿಂಗಳಿಗೆ ಬೆಳೆಯುತ್ತದೆ.
- ಮಾರ್ಚ್ ತಿಂಗಳಿನಿಂದ ಜುಲೈ ತನಕ ಅಧಿಕ ಇಳುವರಿ.
- ಅನಂತರ ಸ್ವಲ್ಪ ಕಡಿಮೆ. ವರ್ಷ ಪೂರ್ತಿ ಫಸಲು ಇದ್ದೇ ಇರುತ್ತದೆ.
- ವಾರ ವಾರ ಖರ್ಚಿಗೆ ಹಣ ದೊರೆಯುತ್ತದೆ.
ಕೊಕ್ಕೋ ಒಂದು ಮಿಶ್ರ ಬೆಳೆಯಾದ ಕಾರಣ ಅದರ ಬೆಳವಣಿಗೆ ಇತರ ಮುಖ್ಯ ಬೆಳೆಗೆ ತೊಂದರೆದಾಯಕವೂ ಆಗಬಾರದು. ಅದಕ್ಕೋಸ್ಕರವೂ ಸಸಿಯ ಗೆಲ್ಲನ್ನು ಸವರುತ್ತಿರಬೇಕು.
ಯಾಕೆ ಪ್ರೂನಿಂಗ್:
- ಪ್ರೂನಿಂಗ್ ಮಾಡದಿದ್ದರೆ ಸಸ್ಯ 4-5 ಮೀ ಎತ್ತರದ ಮರವಾಗಿಯೂ ಬೆಳೆಯಬಲ್ಲುದು. ಮಾಡಿದರೆ ಕಾಯಿ ಹೆಚ್ಚು ಬಿಡುತ್ತದೆ.
- ಸಾಮಾನ್ಯವಾಗಿ ಹೂವು ಬರುವ 2 ತಿಂಗಳ ಮುಂಚೆ ಪ್ರೂನಿಂಗ್ ಮಾಡಬೇಕು.
- ಆಗಸ್ಟ್ ತಿಂಗಳಲ್ಲಿ ಪ್ರೂನಿಂಗ್ ಮಾಡಿದರೆ ಒಕ್ಟೋಬರ್ ತಿಂಗಳಿಗೆ ಹೂ ಮೊಗ್ಗು ಬಿಡಲಾರಂಭಿಸುತ್ತದೆ.
- ತಡ ಮಾಡಿದರೆ ಹೂ ಬಿಡುವಿಕೆಯೂ ಮುಂದೆ ಹೋಗುತ್ತದೆ.
ಅಕ್ಟೋಬರ್ ತಿಂಗಳಿಗೆ ಹೂ ಬಿಟ್ಟರೆ ಎಪ್ರೀಲ್ ತಿಂಗಳಿಗೆ ಹೆಚ್ಚು ಹಣ್ಣುಗಳು ದೊರೆಯುತ್ತದೆ. ಮಳೆಗಾಲ ಬರುವ ಜೂನ್ ತಿಂಗಳಿಗೆ ಕಾಯಿಗಳು ಹಣ್ಣಾಗಿ ಮುಗಿಯುತ್ತದೆ. ಈ ಸಮಯದ ಬೆಳೆ ಬೆಳೆಗಾಗರಿಗೆ ಹೆಚ್ಚು ಅನುಕೂಲಕರವಾದುದೂ, ಆದಾಯ ಕೊಡುವಂತದ್ದೂ ಆಗಿದ್ದು , ಯಾವುದೇ ಶಿಲೀಂದ್ರ ನಾಶಕ ಬೇಕಾಗುವುದಿಲ್ಲ. ದಂಶಕಗಳ ಉಪಟಳವೂ ಹೆಚ್ಚು ಇರುವುದಿಲ್ಲ. ಉತ್ಪಾದನೆ ಗರಿಷ್ಟ ಪ್ರಮಾಣದಲ್ಲಿ ಪಡೆಯುವುದಕ್ಕೆ ನಮ್ಮ ಗುರಿ ಇರಬೇಕು.
- ಕೊಕ್ಕೋ ಸಸ್ಯವನ್ನು ಅಡಿಕೆ ತೋಟದಲ್ಲಿ ಬೆಳೆಸಿದ್ದರೆ ನೆಲಮಟ್ಟದಿಂದ 1 ರಿಂದ 1.5 ಮೀ. ಎತ್ತರಕ್ಕಿರುವಷ್ಟು ಮಾತ್ರ ಬೆಳೆಯಲು ಬಿಡಬೇಕು.
- ನಂತರ ಬರುವ ಚೂಪಾನನ್ನು ತೆಗೆಯುತ್ತಿರಬೇಕು. ಅಡ್ಡ ಗೆಲ್ಲುಗಳನ್ನೂ ಸಹ ಮರಕ್ಕೆ 4-5 ಸಂಖ್ಯೆಯಲ್ಲಿ ಮಾತ್ರವೇ ಉಳಿಸಿಕೊಳ್ಳಬೇಕು.
- ಗೆಲ್ಲುಗಳಲ್ಲಿ ಎಲೆಗಳು ಇರಬೇಕು. ಆದರೆ ಅದು ಪೂರ್ತಿ ಕವಿದುಕೊಂಡು ಇರಬಾರದು.
- ಒಂದು ಕಾಯಿಗೆ 30 ಎಲೆಗಳು ಇರಬೇಕು ಎಂಬುದು ಲೆಕ್ಕಾಚಾರವಾದರೂ ಆದಕ್ಕಿಂತ ಸ್ವಲ್ಪ ಕಡಿಮೆಯಾದರೂ ತೊಂದರೆ ಇಲ್ಲ.
- ಎಲೆ ಹೆಚ್ಚು ಇದ್ದರೆ ಕಾಯಿ ಜಾಸ್ತಿ ಲಭ್ಯ. ಕವಲು ಗೆಲ್ಲುಗಳ ತುದಿ ಭಾಗ 1 ಮೀ ದೂರ ಬೆಳೆದ ನಂತರ ಕತ್ತರಿಸುತ್ತಿರಬೇಕು.
ಉದ್ದ ಬೆಳೆದರೆ ಅದು ಬಾಗಿ ಅದರಲ್ಲಿ ಮತ್ತೆ ಕಂಬ ಚಿಗುರುಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಹೆಚ್ಚಿನ ಕಂಬ ಚಿಗುರುಗಳನ್ನು ತೆಗೆದು ಗಿಡಕ್ಕೆ ಗಾಳಿ ಬೆಳಕು ಹೆಚ್ಚು ದೊರೆಯುವಂತೆ ಮಾಡಬೇಕು.
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]
- ಸ್ಪ್ರಿಂಕ್ಲರ್ ನೀರಾವರಿಗೆ ಕೊಕ್ಕೋ ಸಸ್ಯ ನೀರಿನ ಎಸೆತಕ್ಕೆ ತೊಂದರೆ ಕೊಡದೇ ಇರಲಿ.
- ತೆಂಗಿನ ತೋಟದಲ್ಲಿ ಬೆಳೆಸುವಾಗ ಎರಡನೇ ಜಾರ್ಕೆಟ್ ಬಿಡಬಹುದು. ಅದರ ಎತ್ತರವೂ 3 ಮೀ ಗಿಂತ ಹೆಚ್ಚಾಗದಿರಲಿ. ಇದರಿಂದ ಕೊಯಿಲಿಗೆ ಅನುಕೂಲವಾಗುತ್ತದೆ.
- ಕಸಿ ಮಾಡಿದ ಸಸ್ಯಗಳಾದಲ್ಲಿ ಸವರುವಿಕೆ ಸ್ವಲ್ಪ ಜಠಿಲ.
- ಬುಡದಿಂದ ಒಂದೇ ಕಾಂಡ ಬಿಡಲಿಕ್ಕೂ ಕಷ್ಟವಾಗುತ್ತದೆ.
- 2-3 ಕಾಂಡಗಳು ಇರುತ್ತವೆ. ಈ ಸಸ್ಯಗಳಲ್ಲಿ ಎತ್ತರ ಬೆಳೆಯುವುದನ್ನು ನಿಯಂತ್ರಿಸಬೇಕಾಗಿಲ್ಲ.
- ಅಗಲ ಮತ್ತು ನಿಬಿಡವಾಗುವುದನ್ನು ನಿಯಂತ್ರಿಸಿ ಥಿನ್ನಿಂಗ್ ಮಾಡಬೇಕು.
ಪ್ರೂನಿಂಗ್ ಮಾಡುವುದರಿಂದ ಕಾಯಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗುತ್ತದೆಯಾದರೂ ಬರುವ ಕಾಯಿಗಳು ಪುಷ್ಟಿಯಾಗಿರುತ್ತವೆ. ಕೊಯಿಲಿಗೆ ಅನುಕೂಲವಾಗುತ್ತದೆ. ಚೆನ್ನಾಗಿ ಪಕ್ವಾಗುತ್ತದೆ. ದಂಶಕಗಳ ಉಪಟಳ ಸಹ ಕಡಿಮೆಯಾಗುತ್ತದೆ.