ಹಣ್ಣು ಹಂಪಲು ಬೆಳೆಯಲ್ಲಿ ಸುಮಾರು 50 % ಕ್ಕೂ ಹೆಚ್ಚು ಹಣ್ಣು ಹಕ್ಕಿ- ಬಾವಲಿ, ಮಂಗ, ಅಳಿಲು ನವಿಲು ಮತ್ತು ಪತಂಗಗಳಿಂದ ಹಾನಿಯಾಗುತ್ತದೆ. ಕೆಲವು ತಿಂದು ಹಾಳಾದರೆ ಮತ್ತೆ ಕೆಲವು ಗಾಯ ಮಾಡಿ ಹಾಳು ಮಾಡುತ್ತವೆ. ಇದನ್ನು ತಡೆಯಲು ಇರುವ ಏಕೈಕ ಉಪಾಯ ಬಲೆ ಹಾಕುವುದು..
- ಬಲೆ ಹಾಕುವ ಪದ್ದತಿ ಸುಮಾರು 25-30 ವರ್ಷಗಳಿಂದ ದ್ರಾಕ್ಷಿ ಬೇಸಾಯದಲ್ಲಿ ಚಾಲ್ತಿಯಲ್ಲಿ ಇತ್ತು.
- ಈಗ ಇದು ಬಹುತೇಕ ಹಣ್ಣಿನ ಬೆಳೆಗಳಲ್ಲಿ ಬಳಸಲ್ಪಡುತ್ತದೆ. ಬಲೆ ಇಲ್ಲದಿದ್ದರೆ ಹಣ್ಣೇ ಇಲ್ಲ.
ಬೇಸಿಗೆಯಲ್ಲಿ ಬಹುತೇಕ ಹಣ್ಣಿನ ಬೆಳೆಗಳಲ್ಲಿ ಫಸಲು ಇರುತ್ತದೆ. ಈ ಸಮಯದಲ್ಲಿ ಹಣ್ಣಿನ ಬೆಳೆಗಳನ್ನು ಭಕ್ಷಿಸಿ ಹಾಳು ಮಾಡುವ ಪಕ್ಷಿಗಳ ಕಾಟ ಅತ್ಯಧಿಕ. ಪಕ್ಷಿಗಳು ಬರೇ ಹಣ್ಣು ತಿನ್ನುವುದೇ ಅಲ್ಲದೆ ಅದನ್ನು ಗರಿಷ್ಟ ಪ್ರಮಾಣದಲ್ಲಿ ಹಾಳು ಸಹ ಮಾಡುತ್ತವೆ. ಇದರಿಂದ ಬೆಳೆಗಾರರಿಗೆ ಅಧಿಕ ನಷ್ಟ ಉಂಟಾಗುತ್ತದೆ.
ಹೊಲಕ್ಕೆ ಬಲೆ ಚಪ್ಪರ:
- ಈ ನಷ್ಟವನ್ನು ತಡೆಯಲು ದಾಳಿಂಬೆ ಬೆಳೆಗಾರರು ಇಡೀ ಹೊಲಕ್ಕೆ ಬಲೆಯನ್ನು ಹೊದಿಸುತ್ತಾರೆ.
- ಅದೇ ರೀತಿಯಲ್ಲಿ ದ್ರಾಕ್ಷಿ ಬೆಳೆಗಾರರೂ ಸಹ ಬಲೆಯನ್ನು ಹೊದಿಸುತ್ತಾರೆ.
- ಬಲೆ ಹಾಕಿ ಕೊಡುವ ಕಾಂಟ್ರಾಕ್ಟ್ ಕೆಲಸದವರೇ ಇದ್ದಾರೆ.
- ಬಲೆ ಹಾಕುವುದರಿಂದ ದಂಶಕಗಳಾದ ಹಕ್ಕಿಗಳಿಂದ ಉಂಟಾಗುವ ಸುಮಾರು 20% ಫಸಲು ಉಳಿಯುತ್ತದೆ ಎನ್ನುತ್ತಾರೆ ಬೆಳೆಗಾರರು.
ಯಾವ ಬೆಳೆಗೆ :
- ಬಲೆ ಹಾಕುವ ಮೂಲಕ ಫಸಲು ಸಂರಕ್ಷಣೆ ಮಾಡುವ ವಿಧಾನ ದ್ರಾಕ್ಷಿ – ದಾಳಿಂಬೆ ಅಲ್ಲದೆ ಅಂಜೂರ ಬೆಳೆಗೂ ಇದೆ.
- ಅದೇ ರೀತಿಯಲ್ಲಿ ಕರಾವಳಿ ಮಲೆನಾಡಿನಲ್ಲಿ ಬೆಳೆಯಲ್ಪಡುವ ರಾಂಬುಟಾನ್ ಹಣ್ಣಿಗೂ ಸಹ ಬಲೆ ಹಾಕಿ ಹಕ್ಕಿಗಳಿಂದ ರಕ್ಷಣೆ ಪಡೆಯಲಾಗುತ್ತದೆ.
- ದ್ರಾಕ್ಷಿ – ದಾಳಿಂಬೆ ಬೆಳೆಗಳಿಗೆ ಬಲೆ ಹಾಕುವ ಕೆಲಸವನ್ನು ಸರಳವಾಗಿಸಲು ಆ ಕೆಲಸ ಮಾಡುವವರು ಮೊದಲಾಗಿ ಅಲ್ಲಲ್ಲಿ ಗೂಟಗಳನ್ನು ಹುಗಿದು ಅದಕ್ಕೆ ಸರಿಗೆಯನ್ನು ಎಳೆಯುತ್ತಾರೆ.
- ಆ ಸರಿಗೆಯ ಮೇಲೆ ಬಲೆಯನ್ನು ಎಳೆದು ಕೆಲಸ ಸರಳ ಮಾಡಿಕೊಳ್ಳುತ್ತಾರೆ.
- ಆಗ ಮಿಡಿಗಳು ಉದುರುವುದು, ಬಳ್ಳಿ – ಗಿಡಗಳಿಗೆ ಹಾನಿಯಾಗುವುದು ತಪ್ಪುತ್ತದೆ.
- ಆದರೆ ಅಂಜೂರ, ರಾಂಬೂಟಾನ್, ವಾಟರ್ ಆಪಲ್ ಬೆಳೆಯುವವರು ಬಲೆ ಹಾಕುವುದು ತುಂಬಾ ಕಷ್ಟದ ಕೆಲಸ.
- ಹೆಚ್ಚಾಗಿ ಬೆಳೆಗಾರರು ಇಡೀ ಮರಕ್ಕೆ ಬಲೆಯನ್ನು ಎಳೆದು ಮುಚ್ಚುತ್ತಾರೆ.
- ಈ ಕೆಲಸವನ್ನು ಸರಳವಾಗಿಸಲು ಪ್ರತೀ ಮರದ ಸುತ್ತ ನಾಲ್ಕು ಗೂಟಗಳನ್ನು ಹುಗಿದು, ಅದರ ತುದಿ ಭಾಗಕ್ಕೆ ಸರಿಗೆಯನ್ನು ಕಟ್ಟಿ ಆ ಸರಿಗೆಯ ಮೇಲೆ ಬಲೆಯನ್ನು ಎಳೆಯುವುದು ಸುಲಭ.
ಹಕ್ಕಿಗಳಿಗೆ ಮಾತ್ರವಲ್ಲ:
- ಮಹಾರಾಷ್ಟ್ರದ ಬಾರಾಮತಿಯಲ್ಲಿ ತೆಂಗಿನ ಮರಕ್ಕೆ ಕೋತಿಗಳ ಕಾಟ ತಡೆಯಲೂ ಸಹ ಬಲೆಯನ್ನು ಬಳಕೆ ಮಾಡುತ್ತಾರೆ.
- ಕೋತಿಗಳು, ನವಿಲುಗಳು ಹಾಗೆಯೇ ಇನ್ನಿತರ ಕೆಲವು ಕಾಡು ಪ್ರಾಣಿಗಳನ್ನು ಬಲೆ ಹಾಕಿ ದೂರ ಮಾಡಬಹುದು.
ಬಲೆ ಹಾಕಿ ಬೆಳೆ ಸಂರಕ್ಷಣೆ ಮಾಡುವುದರಿಂದ 20- 25 % ಹೆಚ್ಚಿನ ಫಸಲನ್ನು ಪಡೆಯಬಹುದು.ಅನವಶ್ಯಕ ಕೀಟನಾಶಕ ಅಥವಾ ಇನ್ನಿತರ ಹಿಂಸಾತ್ಮಕ ವಿಧಾನ ಬೇಕಾಗಿಲ್ಲ.