ಉದ್ಯೋಗ ಖಾತ್ರಿ ಯೋಜನೆ ಎಂಬ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಭರವಸೆಯನ್ನು ನೀಡಲು ಈ ಯೊಜನೆಯು 2006 ರಲ್ಲಿ ಕರ್ನಾಟಕದಲ್ಲಿ ಆರಂಭಗೊಂಡಿದೆ. ಮೂಲತಹ ಕೃಷಿ ಕೂಲಿ ಕಾರ್ಮಿಕರಾಗಿದ್ದವರು, ವರ್ಷ ಪೂರ್ತಿ ರೈತರು ಜಮೀನಿನಲ್ಲಿ ಕೆಲಸ ಲಭ್ಯವಿಲ್ಲದಿದ್ದರೆ , ಪಂಚಾಯತು ವ್ಯವಸ್ಥೆಯು ಇವರಿಗೆ ವರ್ಷದ ಎಲ್ಲಾ ಎಲ್ಲಾ ಸಮಯದಲ್ಲಿ ಕೆಲಸ ಕೊಡುತ್ತದೆ.
- ಉದ್ಯೋಗ ಇಲ್ಲದ ಸಮಯದಲ್ಲಿ ಕೃಷಿ ಹೊಂಡ, ಕೆರೆ ಹೂಳೆತ್ತುವುದು, ಅರಣ್ಯೀಕರಣ ಮುಂತಾದ ಕಾಮಗಾರಿಗಳಲ್ಲಿ ತೊಡಗಿಸಿಕೊಂಡು ಜೀವನೋಪಾಯ ಮಾಡಿಕೊಳ್ಲಬಹುದು.
- 2020-21 ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಉದ್ಯೋಗದ ಗುರಿ ಹಾಗೂ ರೂ.6315.79 ಕೋಟಿ ಅನುದಾನ ನಿಗದಿಪಡಿಸಲಾಗಿದೆ.
ಎಷ್ಟು ದಿನ ಕೆಲಸ?
- ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಾನ್ಯ ಪ್ರದೇಶಗಳಲ್ಲಿ 100 ದಿನಗಳ ಕೆಲಸ ಕಲ್ಪಿಸಲು ಅವಕಾಶವಿದೆ. ಬರಪೀಡಿತ ಪ್ರದೇಶಗಳಲ್ಲಿ 150 ದಿನಗಳ ಕೆಲಸ ಕಲ್ಪಿಸಲು ಅವಕಾಶವಿದೆ.
ಯಾವ ಯಾವ ಕೆಲಸ?
- ಉದ್ಯೋಗ ಖಾತ್ರಿ ಯೋಜನೆಯಡಿ ಬದು, ಕೃಷಿ ಹೊಂಡ, ಕೆರೆ ಹೂಳೆತ್ತುವ ಕಾರ್ಯ, ಅರಣ್ಯೀಕರಣ ಮುಂತಾದ ಸಾರ್ವಜನಿಕ ಕಾಮಗಾರಿಗಳನ್ನು ಕೈಗೊಳಲಾಗುತ್ತದೆ.
- ಇದಲ್ಲದೆ ಅರಣ್ಯ ಸಂರಕ್ಷಣೆಯಂತಹ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ನೆಡಸಲಾಗುತ್ತಿದೆ.
- ವ್ಯೆಯಕ್ತಿಕ ಕಾಮಗಾರಿಗಳನ್ನು ಕೈಗೊಳುವಾಗ ಜಮೀನಿನ ರೈತರೇ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಮುಂದೆ ಬಂದರೆ, ಅವರಿಗೂ ಸಹ ಜಾಬ್ ಕಾಡ್ ನೀಡಲಾಗುತ್ತದೆ.
- ಇದರಿಂದ ಅವರ ಆದಾಯ ಕೂಡ ಹೆಚ್ಚಾಗುತ್ತದೆ.
- ಉದ್ಯೋಗ ಖಾತ್ರಿ ಕಾಮಗಾರಿ ನೆಡೆಯುವ ಸ್ಥಳದಲ್ಲಿ 30 ಜನ ಕಾರ್ಮಿಕರಿಗೆ ಒಬ್ಬರಂತೆ ಕಾಯಕ ಬಂಧು ಎಂದು ನೇಮಿಸಲಾಗುತ್ತದೆ.
- ಇವರು ಪ್ರತಿ ದಿನ ಕಾಮಗಾರಿ ಅಳತೆ ಮಾಡಿ ಕೆಲಸವನ್ನು ಕೂಲಿ ಕಾರ್ಮಿಕರಿಗೆ ನೀಡುವುದು ಹಾಗೂ ಕಾಮಗಾರಿ ಮುಗಿದ ನಂತರ ಪುನಃ ಅಳತೆ ಮಾಡುವುದು ಹಾಗೂ ಆ ಕೆಲಸದ ವಿವರವನ್ನು ಬರೆಯುವುದು.
ಕೆಲಸ ಮಾಡಲು ಇರಬೇಕಾದ ಅರ್ಹತೆಗಳು;
- 18 ವರ್ಷ ಮೇಲ್ಟಟ್ಟವರಾಗಿರಬೇಕು.
- ಕಾಮಗಾರಿ ನೆಡೆಯುವ ಪ್ರದೇಶದವರಾಗಿರಬೇಕು.
- 100 ದಿನಗಳ ಕಾಲ ಕೆಲಸ ನಿರ್ವಹಿಸಲು ತಯಾರಿರಬೇಕು.
- ಕನಿಷ್ಟ ಅವರಿಗೆ ಕೊಟ್ಟ ಜಾಬ್ ಕಾರ್ಡ್ ನಂಬರ್ ಗೊತ್ತಿರಬೇಕು.
ಎಷ್ಟು ಹಣ ಸಿಗುತ್ತದೆ?
- ದಿನಕ್ಕೆ ರೂ. 275 (2020ರ ಅನ್ವಯ) ರಂತೆ 100 ದಿನಗಳ ಕಾಲ ಕೆಲಸ ಮಾಡಿದಾದ ಒಬ್ಬ ವಾರ್ಷಿಕ 27,500 ರೂ. ವಾರ್ಷಿಕ ಸಂಪಾದನೆ ಮಾಡಬಹುದು.
- ಬರ ಪೀಡಿತ ಪ್ರದೇಶಗಳ ಜನ ವಾರ್ಷಿಕ 41,250 ರೂ. ಸಂಪಾದನೆ ಮಾಡಬಹುದು.
- ಕೃಷಿ ಹೊಲದಲ್ಲಿ ಉದ್ಯೋಗ ಖಾತ್ರಿ ಯೋಜನೆಯಂತೆ ಕೆಲಸ ಮಾಡಲು ಹೊಸತಾಗಿ ಬೆಳೆ ಮಾಡುವುದಕ್ಕೆ, ಪುನಶ್ಚೇತನಕ ಕೆಲಸಕ್ಕೆ ಅವಕಾಶ ಇದೆ.
- ಈ ಬಗ್ಗೆ ಹೊಲದ ಮಾಲಿಕನು ಉದ್ಯೋಗ ಚೀಟಿಯನ್ನು ಮಾಡಿಸಿಕೊಳ್ಳಬೇಕು.
- ತಾವು ಕೆಲಸ ಮಾಡಿಸುವ ಕೆಲ್ಸದ ವಿವರವನ್ನು ಸ್ಥಳೀಯ ಪಂಚಾಯತು ವ್ಯವಸ್ಥೆಗೆ ತಿಳಿಸಿ ಅವರ ಅನುಮತಿಯ ಮೇರೆಗೆ ಕಾಮಗಾರಿಯನ್ನು ಮಾಡಿಸಿ, ಅದಕ್ಕೆ ಸರಕಾರ ನಿಗದಿಪಡಿಸಿದ ಮೊತ್ತವು ಹೊಲದ ಮಾಲಿಕನಿಗೆ ಸಂದಾಯವಾಗುವ ವ್ಯವಸ್ಥೆ ಇದೆ.
- ಅಡಿಕೆ , ತೆಂಗು, ಅರಣ್ಯ ಬೆಳೆ, ಹೊಲಕ್ಕೆ ಮಣ್ಣು ಹಾಕಿಸುವುದು, ಪುನರ್ ನಾಟಿ ಮುಂತಾದ ಕಾಮಾಗಾರಿಗಳಿಗೆ ಅವಕಾಶ ಇದೆ.
ಲೇಖಕರು : ಮಾನಸ ಎಲ್. ಪಿ ಕೃ. ವಿ. ವಿ ಧಾರವಾಡ.ಮುನಿಯಪ್ಪ ಕೃ. ವಿ. ವಿ ರಾಯಚೂರು.ಶೃತಿ ಎಸ್. ಎಮ್ ಕೃ. ವಿ. ವಿ ಧಾರವಾಡ.ಪೂಜಾ ಎಸ್.ಪಿ ಕೃ. ವಿ. ವಿ ಬೆಂಗಳೂರು.