ಒಬ್ಬನಿಗೆ ತಾನು ಮಹಾಮಂತ್ರಿ ಆಗೇ ಬಿಟ್ಟೆ ಎಂಬ ಭ್ರಮೆ ಉಂಟಾಯಿತು. ತಕ್ಷಣ ವಿಧಾನ ಸೌಧದ ಒಳ ಹೋಗಿ ಮುಖ್ಯಮಂತ್ರಿ ಆಸನದಲ್ಲಿ ಕುಳಿತು ತಕ್ಷಣ ಮಾಡಿದ್ದು, ರೈತರ ಎಲ್ಲಾ ಸಾಲ ಮನ್ನಾ. ರೈತರ ಮೇಲಿನ ಮೊಕದ್ದಮೆ ವಜಾ. 24 ಗಂಟೆ ವಿದ್ಯುತ್, ರೈತರಿಗೆ ಪೆನ್ಶನ್. ಇದೆಲ್ಲಾ ಮಾಡಿದ್ದು ಬರೇ ಶಯನದ ಕನಸಿನಲ್ಲಿ. ಕನಸಿನಿಂದೇಳುವಾಗ ಮುಖ್ಯ ಮಂತ್ರಿಗಿರಿ ಅವರದ್ದಾಗಿರಲಿಲ್ಲ.

- ಒಂದು ವೇಳೆ ಅದೇ ರಾಜಕಾರಣಿ ಮುಂದೆ ಮುಖ್ಯ ಮಂತ್ರಿಯೇ ಆದನೆಂದಿಟ್ಟುಕೊಳ್ಳೋಣ.
- ಆಗ ಈ ಹಿಂದೆ ಮಾಡಿದಂತೆ ಸಾಲಮನ್ನಾ ಮಾಡಲು ಮನಸ್ಸು ಬಂದೀತೇ?.
- ಆ ನಂತರ ಮಾಡುವುದೆಲ್ಲಾ ರೈತ ವಿರೋಧಿ ಕೆಲಸಗಳನ್ನೇ.
ರೈತ ಸಂಘವನ್ನು ಹುಟ್ಟು ಹಾಕಿದ ಪ್ರೊಫೆಸರ್ ನಾಂಜುಂಡ ಸ್ವಾಮಿಯವರು ರೈತರ ಒಗ್ಗಟ್ಟಿನ ದ್ಯೋತಕವಾಗಿ ಕೊಟ್ಟ ಹಸುರು ಶಾಲಿನ ಮಾನ ಮರ್ಯಾದೆಯನ್ನು ಕೆಲವು ರಾಜಕಾರಣಿಗಳು ಹರಾಜು ಹಾಕುತ್ತಿದ್ದಾರೆ.

ಎಲ್ಲವೂ ಸ್ಥಭ್ದ ಕೃಷಿ ಮಾತ್ರ ಜೀವಂತ:
- ಕೊರೋನಾ ಸಾಂಕ್ರಾಮಿಕ ರೋಗದ ತಡೆಗಾಗಿ ದೇಶವ್ಯಾಪೀ ನಿಷೇಧಾಜ್ಞೆ ಜ್ಯಾರಿಯಲ್ಲಿದೆ.
- ಎಲ್ಲೂ ಯಾವ ಉದ್ದಿಮೆಯೂ ನಡೆಯುತ್ತಿಲ್ಲ.
- ಕರ್ನಾಟಕವೂ ಇದಕ್ಕೆ ಹೊರತಲ್ಲ.
- ಆದರೆ ಒಂದೇ ಒಂದು ಉದ್ದಿಮೆ ಈಗಲೂ ನಡೆಯುತ್ತಿವುದು ಅದೇ ಗ್ರಾಮೀಣ ಕೃಷಿ ಉದ್ದಿಮೆ.
- ರೈತನಿಗೆ ಲಾಕ್ ಡೌನ್ ಬರೇ ಅವನ ಹೊಲದ ಒಳಗೆ ಮಾತ್ರ. ಕೃಷಿ ಕೆಲಸಗಳು ಯಾವ ತೊಂದರೆಯೂ ಇಲ್ಲದೆ ಸಾಗುತ್ತಿವೆ.

- ಕೆಲಸಗಾರರ ಲಭ್ಯತೆ ಇಲ್ಲದಾಗ್ಯೂ ಹೊಲದ ಒಡೆಯರೇ ಕೆಲಸಗಳನ್ನು ಮಾಡುತ್ತಾ, ಕೃಷಿಯನ್ನು ಸ್ಥಬ್ಧ ಗೊಳ್ಳಲು ಬಿಡಲಿಲ್ಲ.
- ಈ ಒಂದು ಸಂದರ್ಭದಲ್ಲೂ ದೇಶದ ಜನರ ಹಸಿವೆಯನ್ನು ನೀಗಿಸಲು ಇವರು ಉದಾಸಿನ ತಳೆಯಲೇ ಇಲ್ಲ.
- ಕೆಲಸದ ಅಗತ್ಯ ಇದ್ದವರಿಗೆ ಕೆಲಸ ಕೊಡಲೂ ಹಿಂದೇಟು ಹಾಕಲಿಲ್ಲ.
ಇವರಿಗೆ ಸರಕಾರದ ಕೊಡುಗೆ:
- ಇದು ಬೇಸಿಗೆ . ಕೃಷಿ ಹೊಲದಲ್ಲಿ ಪ್ರಾಮುಖ್ಯ ಕೆಲಸ ಎಂದರೆ ನೀರಾವರಿ .
- ನೀರಾವರಿಗೆ ಬೇಕಾದುದು ವಿದ್ಯುತ್. ಉಳಿದ ಸಮಯದಲ್ಲಿ ಉದ್ದಿಮೆಗಳಿಗೆ ಕೊಡಬೇಕು.
- ಹಾಗೆಯೇ ಬೇರೆ ಬೇರೆ ಬಳಕೆಗೆ ಬೇಕಾಗುತ್ತದೆ.
- ಈಗ ಹಾಗಿಲ್ಲ. ಸಾಕಷ್ಟು ಮಿಗತೆ ವಿದ್ಯುತ್ ಇದ್ದಾಗ್ಯೂ ರೈತರಿಗೆ ಮಾತ್ರ ಅದನ್ನು ಕೊಡಲು ಹಿಂದೇಟು ಹಾಕುವ ಸರಕಾರ ರೈತರನ್ನು ಮುಗಿಸಲು ಹೊರಟಿರುವುದೇ ಅಲ್ಲವೇ?
ಎಲ್ಲೆಲ್ಲಿ ಎಷ್ಟು ವಿದ್ಯುತ್ ಸರಬರಾಜು:
- ತುಮಕೂರು ಗ್ರಾಮಾಂತರದಲ್ಲಿ ಹಗಲು 2 ಗಂಟೆ, ರಾತ್ರೆ 3 ಗಂಟೆ.
- ಹಾವೇರಿಯಲ್ಲಿ ದಿನಕ್ಕೆ ಹಗಲು 4 ಗಂಟೆ ರಾತ್ರೆ 3 ಗಂಟೆ.
- ಕೋಲಾರದಲ್ಲಿ ದಿನಕ್ಕೆ ಹಗಲು 3 ರಾತ್ರೆ 4 ಗಂಟೆ.
- ಸಂಡೂರಿನಲ್ಲಿ ದಿನಕ್ಕೆ 7 ಗಂಟೆ ಮಾತ್ರ.
- ಬೆಂಗಳೂರು ಗ್ರಾಮಾಂತರದಲ್ಲೂ ( ತಾವರೆಗೆರೆ ಮಾಗಡಿ)ದಿನಕ್ಕೆ 10-11 ಗಂಟೆ.
- ಬಳ್ಳಾರಿಯ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು ದಿನಕ್ಕೆ 7 ತಾಸು ಮಾತ್ರ.
- ಬಾಗಲಕೋಟೆಯ ಗ್ರಾಮಾಂತರದ ಕಬ್ಬು , ಹಣ್ಣು ಹಂಪಲು ಬೆಳೆಯುವ ಬೆಲ್ಟ್ ನಲ್ಲಿ ದಿನಕ್ಕೆ 4 ಗಂಟೆ.
- ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ ಮುಂತಾದ ಗ್ರಾಮೀಣ ಭಾಗಗಳಲ್ಲಿ ಬರೇ 4 ಗಂಟೆ.
- ಚಾಮರಾಜ ನಗರ ಜಿಲ್ಲೆಯ ಹಳ್ಳಿಗಳಿಗೆ ದಿನಕ್ಕೆ 7 ಗಂಟೆ.
- ಶಿವಮೊಗ್ಗದ ಗ್ರಾಮಾಂತರ ಪ್ರದೇಶಗಳಾದ ಸೊರಬ ಸುತ್ತಮುತ್ತ, ಶಿಕಾರಿಪುರ ಸುತ್ತಮುತ್ತ ದಿನಕ್ಕೆ 4 ಗಂಟೆ.
- ಸವದತ್ತಿಯ ರಾಯಭಾಗದ ಕೃಷಿ ಇರುವ ಗ್ರಾಮೀಣ ಭಾಗದಲ್ಲಿ ದಿನಕ್ಕೆ 7 ಗಂಟೆ.
- ರಾಮನಗರ, ಕನಕಪುರದ ಗ್ರಾಮೀಣ ಭಾಗಗಳಲ್ಲಿ ದಿನಕ್ಕೆ 3 ಗಂಟೆ ಮಾತ್ರ.
- ಶಿವಮೊಗ್ಗದ ಚೆನ್ನಗಿರಿಯ ಗ್ರಾಮೀಣ ಭಾಗಗಳಲ್ಲಿ ದಿನಕ್ಕೆ 5 ಗಂಟೆ ಮಾತ್ರ.
- ಮೈಸೂರಿನ ಕೆ ಆರ್ ನಗರ ದ ಗ್ರಾಮೀಣ ಭಾಗದಲ್ಲಿ ದಿನಕ್ಕೆ 6 ಗಂಟೆ.
- ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಹಗಲು 2 ತಾಸು ರಾತ್ರೆ 2 ತಾಸು ತ್ರೀ ಫೇಸ್ ವಿದ್ಯುತ್.
- ಬಸವನಬಾಗೇವಡಿ ಹೂವಿನ ಹಿಪ್ಪರಗಿಯಲ್ಲಿ ದಿನಕ್ಕೆ3 ತಾಸು ಹಗಲು 4 ತಾಸು ರಾತ್ರೆ ವಿದ್ಯುತ್ ಸರಬರಾಜು.
- ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ದಿನಕ್ಕೆ 12 ತಾಸು ವಿದ್ಯುತ್ ಸರಬರಾಜು ಇದೆ.
ಇದೂ ಕಳಪೆ:
- ವಿದ್ಯುತ್ ಸರಬರಾಜಿನ ಅವಧಿಯ ಹಂಚಿಕೆ ಹೀಗೆ.
- ಅದರ ಗುಣಮಟ್ಟ ಅತ್ಯಂತ ಕಳಪೆ.
- ಹಳ್ಳಿಯ ರೈತರಿಗೆ ತಿಂಗಳಿಗೊಮ್ಮೆ ಪಂಪು ಎತ್ತುವುದು, ವೈಂಡಿಂಗ್ ಮಾಡಿಸಿ ಮತ್ತೆ ಇಳಿಸುವುದು ಇದೇ ಕೆಲಸ.
- ಈಗ ಹಾಳಾದ ಪಂಪನ್ನು ರಿಪೇರಿ ಮಾಅಡುವವರೂ ಇಲ್ಲದಾಗಿದ್ದಾರೆ.
- ಪಂಪು ರಿಪೇರಿ ಮಾಡುವವರು ಕದ್ದು ಮುಚ್ಚಿ ಕೆಲಸ ಮಾಡಿಕೊಡುತ್ತಿದ್ದಾರೆ.
- ರೈತನ ಆದಾಯದಲ್ಲಿ ಹೆಚ್ಚಿನದ್ದು, ಈ ಖರ್ಚಿಗೇ ಹೋಗುತ್ತದೆ.
- ಇದು ಯಾವ ನಮ್ಮ ರೈತ ಮುಖವಾಡದ ಮಂತ್ರಿ ಮಹೋದಯರಿಗೂ ಗೊತ್ತಾಗುವುದಿಲ್ಲ.
- ಎಲ್ಲರೂ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವವರು.
- ಈಗ ಯಾವ ಉದ್ದಿಮೆಗೂ ವಿದ್ಯುತ್ ಬೇಡ ಆದರೂ ಅದನ್ನು ರೈತರಿಗೆ ಕೊಡಲೊಲ್ಲದ ನಮ್ಮ ಸರಕಾರ ಎಂತಹ ಕರುಣೆ ರಹಿತ ಎಂದು ನೀವೇ ಯೋಚಿಸಿ.
ಸಾಂಕ್ರಾಮಿಕ ರೋಗ ಯಾರೂ ಕೆರೆದು ಬಂದುದಲ್ಲ. ಆದರೆ ಗ್ರಾಮೀಣ ಭಾಗದ ರೈತಾಪಿ ವರ್ಗ ಅವರಷ್ಟಕ್ಕೇ ಕೃಷಿ ಮಾಡುವಾಗ ಅವರಿಗೆ ಸಹಕಾರ ಕೊಡಬೇಕಾದುದು ನ್ಯಾಯ.