ಶುಕ್ರವಾರದ ಅಡಿಕೆ ಧಾರಣೆ-ದಿನಾಂಕ 03-12-2021

ಬಿಲಿ ಚಾಲಿ ಸುಪಾರಿ ಅಡಿಕೆ

ಅಡಿಕೆ ಬೆಳೆಗಾರರಿಗೆ 2021 ವರ್ಷ ಅಂತಹ ನಿರಾಸೆಯನ್ನೆನೂ ಮಾಡಲಿಲ್ಲ.  ವರ್ಷದ ಹೆಚ್ಚಿನ ಸಮಯದಲ್ಲಿ ಉತ್ತಮ ಬೆಲೆ ಇತ್ತು.  ಕಳೆದ ವರ್ಷ ಮತ್ತು ಈ ವರ್ಷ ಅಡಿಕೆಗೆ ಬೇಡಿಕೆ ಎಷ್ಟು ಇದೆ ಎಂಬುದರ ಪೂರ್ಣ ಚಿತ್ರಣ ಸಿಕ್ಕಿದೆ. ಆಮದು ಮಾಡುತ್ತಾ ದೇಶದ ಅಡಿಕೆ ಬೆಳೆಗಾರರ ಮೇಲೆ ಕಲ್ಲು ಹೊತ್ತು ಹಾಕುತ್ತಾ ಈ ತನಕ ನಮ್ಮನ್ನು ಮೋಸವೇ ಮಾಡಲಾಗಿತ್ತು. ಇದೆಲ್ಲವೂ ಈಗ ಜನತೆಗೆ ಗೊತ್ತಾಗಿದೆ. ವರ್ಷದ ಕೊನೆ ತಿಂಗಳು, ಮೊದಲ ವಾರ ಶುಕ್ರವಾರ ಅಡಿಕೆ ಬೆಳೆಗಾರರ ಪಾಲಿಗೆ ಉತ್ತಮ ಧಾರಣೆ ಸಿಗುವ ಯೋಗ ಬಂದಿದೆ.

ಅಡಿಕೆ ಬೆಳೆ ಪ್ರದೇಶ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ ಎಂಬುದಾಗಿ ಸುಮಾರು 20 ವರ್ಷಗಳಿಂದ ತಜ್ಞರೆನಿಸಿಕೊಂಡವರು ಹೇಳುತ್ತಲೇ ಬಂದಿದ್ದಾರೆ. ಬೆಳೆದವರು ಬೆಳೆದರು. ಅಂಜಿ ಕೂತವರು ಅಲ್ಲೇ ಬಾಕಿ. ಅಡಿಕೆ ಎಲ್ಲೂ ಸೋಲಲೇ ಇಲ್ಲ. ಮೇಲೇ ಮೇಲೆ ಏರುತ್ತಾ ಯಾರೂ ಕಲ್ಪಿಸಿಯೂ ಇರದ  ಮಟ್ಟಕ್ಕೆ ಧಾರಣೆ ಏರಿತು. ತಿಳುವಳಿಕೆ ಉಳ್ಳವರು ಹೇಳಿದ್ದು ಸತ್ಯವೋ ಸುಳ್ಳೋ? ಮಾರುಕಟ್ಟೆಯಲ್ಲಿ ಅಡಿಕೆಗೆ  ಉತ್ತಮ ಬೇಡಿಕೆ ಇದೆ ಎಂಬುದಂತೂ ಸುಸ್ಪಷ್ಟ. ಅಡಿಕೆಗೆ ಈ ಹಿಂದೆ ಬೆಲೆ ಕುಸಿದದ್ದು, ಅಡಿಕೆ ಬೆಳೆಯಬೇಡಿ, ಮುಂದೆ ಏನಾಗುತ್ತದೆಯೋ ತಿಳಿಯದು ಎಂಬುದಾಗಿ ಹೇಳಿದೆಲ್ಲಾ  ಬರೇ ಅಂಜಿಸಿದ್ದು ಮಾತ್ರ. ವ್ಯವಹಾರಸ್ಥರು ಸ್ವತಂತ್ರವಾಗಿ ಆಮದು ಮಾಡಿಕೊಳ್ಳುತ್ತಾ, ಬೆಳೆಗಾರರಿಂದ ಕಡಿಮೆ ಬೆಲೆಗೆ ಖರೀದಿ ಮಾಡುತ್ತಾ  ಗರಿಷ್ಟ ಲಾಭವನ್ನು ಬಾಚಿಕೊಂಡರು. ಇನ್ನು ಆಮದು ಇತ್ಯಾದಿಗಳಿಗೆ ಅನುಮತಿ ಕೊಟ್ಟರೆ ಜನ ನಮ್ಮ ಮೇಲೆ ತಿರುಗಿ ಬೀಳುತ್ತಾರೆ ಎಂದು ಸರಕಾರಕ್ಕೂ ಗೊತ್ತಾಗಿದೆ. ಹಾಗಾಗಿ ಆಮದು ಆಗುವುದನ್ನು ತಡೆಯಲಾಗಿದೆ. ಹೀಗೇ ಯಾವಾಗಲೂ ಮುಂದುವರಿಯಲಿ ಎಂದು ಎಲ್ಲಾ ಅಡಿಕೆ ಬೆಳೆಗಾರರೂ ಆಶಿಸೋಣ. ಅಡಿಕೆ ಬೆಳೆಗಾರರೆಲ್ಲಾ ಒಗ್ಗಟ್ಟಾದರೆ ಯಾವುದೇ ಸರಕಾರವಾದರೂ ತೊಂದರೆ ಮಾಡುವುದಿಲ್ಲ. ಎಲ್ಲರಿಗೂ ಜನರ  ಮತ ಅಗತ್ಯವಾಗಿ ಬೇಕು.

ಡಿಸೆಂಬರ್ ಮೊದಲ ದಿನ ಚಾಲಿ ಅಡಿಕೆಗೆ ಬೆಲೆ ಏರಿಕೆಯಾಗಿದೆ. ಹೊಚ್ಚ ಹೊಸ ಅಡಿಕೆಗೂ 45,000 ತನಕ ಖರೀದಿ ನಡೆಯುತ್ತಿದೆ. ಹಳೆ ಅಡಿಕೆಗೆ 510-520 ತನಕ ಹಾಗೂ 520-525 ತನಕ ಇದೆ.  ಇನ್ನೂ ಏರಿಕೆ ಆಗಬಹುದು ಎನ್ನುತ್ತಾರೆ. ಕರಾವಳಿ ಮಾತ್ರವಲ್ಲ ಶಿರಸಿ, (508.00) ಯಲ್ಲಾಪುರ,(505.00) ಸಿದ್ದಾಪುರದಲ್ಲೂ (504.00) ದರ ಏರಿಕೆ ಆಗಿದೆ. ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೆಂಪು, ಚಾಲಿ, ಕರಿಮೆಣಸು, ಕೊಬ್ಬರಿ ಧಾರಣೆ.

ಬೇಯಿಸಿದ ಕೆಂಪು ಅಡಿಕೆ

ಇಂದು ಅಡಿಕೆ ಧಾರಣೆ:

  • BANTWALA, 03/12/2021, Coca, 16, 12500, 25000, 22500
  • BANTWALA, 03/12/2021, New Variety, 1, 27500, 43500, 41000
  • BANTWALA, 03/12/2021, Old Variety, 19, 46000, 52500, 50000
  • BELTHANGADI, 30/11/2021, Old Variety, 100, 47000, 51500, 50000
  • BELTHANGADI, 02/12/2021, New Variety, 60, 25000, 43500, 35000
  • BELTHANGADI, 01/12/2021, Coca, 3, 24000, 28000, 25000
  • BHADRAVATHI, 03/12/2021, Rashi, 436, 45099, 46999, 46676
  • CHANNAGIRI, 02/12/2021, Rashi, 2964, 45400, 46809, 46042
  • CHITRADURGA, 03/12/2021, Api, 3, 46319, 46729, 46559
  • CHITRADURGA, 03/12/2021, Bette, 175, 39849, 40269, 40099
  • CHITRADURGA, 03/12/2021, Kempugotu, 290, 30609, 31010, 30800
  • CHITRADURGA, 03/12/2021, Rashi, 110, 45839, 46289, 46079
  • HOLALKERE, 30/11/2021, Rashi, 733, 44899, 46139, 45278
  • HONNALI, 03/12/2021, Rashi, 35, 46299, 46499, 46399
  • HOSANAGAR, 03/12/2021, Bilegotu, 2, 28799, 28799, 28799
  • HOSANAGAR, 03/12/2021, Chali, 2, 43599, 43599, 43599
  • HOSANAGAR, 03/12/2021, Kempugotu, 39, 36329, 39999, 38699
  • HOSANAGAR, 03/12/2021, Rashi, 761, 44799, 47709, 47399
  • HULIYAR, 02/12/2021, Red, 23, 42304, 42304, 42304
  • KARKALA, 03/12/2021, New Variety, 3, 38000, 43500, 41000
  • KARKALA, 03/12/2021, Old Variety, 5, 45000, 51500, 48000
  • KUMTA, 03/12/2021, Chippu, 30, 25509, 40999, 40279
  • KUMTA, 03/12/2021, Coca, 20, 21019, 35559, 34909
  • KUMTA, 03/12/2021, Factory, 97, 21019, 35559, 34909
  • KUMTA, 03/12/2021, Hale Chali, 175, 47509, 49599, 48799
  • KUMTA, 03/12/2021, Hosa Chali, 75, 37019, 41299, 40869
  • KUNDAPUR, 03/12/2021, Hale Chali, 1, 50000, 51500, 51000
  • KUNDAPUR, 03/12/2021, Hosa Chali, 9, 37500, 43500, 43000
  • MADIKERI, 30/11/2021, Raw, 49, 48930, 48930, 48930
  • MANGALURU, 03/12/2021, Coca, 46, 27000, 32000, 29500
  • PUTTUR, 30/11/2021, Coca, 1323, 11000, 26000, 18500
  • PUTTUR, 03/12/2021, New Variety, 12, 27500, 43500, 35500
  • SAGAR, 02/12/2021, Bilegotu, 7, 18989, 39209, 34250
  • SAGAR, 02/12/2021, Chali, 49, 36099, 48099, 47299
  • SAGAR, 02/12/2021, Coca, 4, 25200, 37699, 34899
  • SAGAR, 02/12/2021, Kempugotu, 1, 33899, 38899, 37499
  • SAGAR, 02/12/2021, Rashi, 53, 38144, 47329, 46889
  • SAGAR, 02/12/2021, Sippegotu, 22, 5690, 26820, 25779
  • SHIKARIPUR, 30/11/2021, Red, 48, 38000, 45200, 41700
  • SHIVAMOGGA, 03/12/2021, Bette, 15, 47609, 53589, 51650
  • SHIVAMOGGA, 03/12/2021, Gorabalu, 1648, 17045, 39069, 36870
  • SHIVAMOGGA, 03/12/2021, Rashi, 775, 44289, 47019, 46569
  • SHIVAMOGGA, 03/12/2021, Saraku, 13, 50059, 76696, 66400
  • SIDDAPURA, 03/12/2021, Bilegotu, 40, 31799, 42089, 37699
  • SIDDAPURA, 03/12/2021, Chali, 188, 46292, 50409, 50299
  • SIDDAPURA, 03/12/2021, Coca, 15, 25099, 37799, 29099
  • SIDDAPURA, 03/12/2021, Hosa Chali, 14, 34099, 38699, 34489
  • SIDDAPURA, 03/12/2021, Kempugotu, 4, 26399, 36099, 30089
  • SIDDAPURA, 03/12/2021, Rashi, 57, 44099, 49099, 48599
  • SIDDAPURA, 03/12/2021, Tattibettee, 3, 32099, 36469, 35699
  • SIRA, 30/11/2021, Other, 263, 9000, 48000, 44625
  • SIRSI, 03/12/2021, Bette, 9, 41269, 47899, 44723
  • SIRSI, 03/12/2021, Bilegotu, 27, 13599, 44009, 39921
  • SIRSI, 03/12/2021, Chali, 409, 36899, 50881, 49894
  • SIRSI, 03/12/2021, Rashi, 45, 36669, 50999, 49647
  • SULYA, 29/11/2021, Old Variety, 629, 45000, 51000, 48700
  • TIRTHAHALLI, 28/11/2021, Bette, 51, 44166, 52689, 51099
  • TIRTHAHALLI, 28/11/2021, EDI, 17, 42166, 47099, 46509
  • TIRTHAHALLI, 28/11/2021, Gorabalu, 83, 31199, 38585, 37545
  • TIRTHAHALLI, 28/11/2021, Rashi, 337, 44869, 47099, 46609
  • TIRTHAHALLI, 28/11/2021, Saraku, 18, 48099, 71300, 67212
  • TUMAKURU, 01/12/2021, Rashi, 266, 45200, 46500, 45600
  • YELLAPURA, 03/12/2021, Bilegotu, 21, 34899, 42769, 40212
  • YELLAPURA, 03/12/2021, Chali, 281, 44262, 50540, 49129
  • YELLAPURA, 03/12/2021, Coca, 36, 22899, 35100, 31069
  • YELLAPURA, 03/12/2021, Kempugotu, 1, 30199, 36499, 34689
  • YELLAPURA, 03/12/2021, Rashi, 78, 45607, 53972, 50972
  • YELLAPURA, 03/12/2021, Tattibettee, 8, 38399, 44899, 42696

ಕೊಬ್ಬರಿ ಮಾರುಕಟ್ಟೆ:

ಮೇಲೆ ಏರಿದ ಕೊಬ್ಬರಿ ಧಾರಣೆ ಹಾಗೆಯೇ ಸ್ವಲ್ಪ ಕೆಳಗೆ ಬಂದಿದೆ.ಅಂತಹ ದೊಡ್ದ ಕಾರಣ ಇಲ್ಲ. ಬೇಸಿಗೆಯಲ್ಲಿ ಇನ್ನೂ ಸ್ವಲ್ಪ ಹೆಚ್ಚಳ ಆಗಬಹುದು.

  • ARSIKERE, 30/11/2021, Copra, 204, 14000, 17125, 14742
  • BENGALURU, 29/11/2021, Copra, 4, 17000, 19000, 18000
  • C.R.PATNA, 30/11/2021, Ball, 100, 15000, 15000, 15000
  • C.R.PATNA, 01/12/2021, Milling, 10, 10300, 10300, 10300
  • C.R.PATNA, 01/12/2021, Other, 25, 6000, 6000, 6000
  • HULIYAR, 02/12/2021, Ball, 5, 17260, 17260, 17260
  • MANGALURU, 02/12/2021, Milling, 1019, 9000, 14760, 9330
  • PUTTUR, 30/11/2021, Other, 16, 4500, 11500, 8000
  • TUMAKURU, 03/12/2021, Other, 65, 8600, 11500, 9200
  • TUMAKURU, 01/12/2021, Ball, 12, 14500, 17200, 15500
  • TURUVEKERE, 03/12/2021, Copra, 198, 17450, 17500, 17450

 ಹಸಿ ಶುಂಠಿ ಮಾರುಕಟ್ಟೆ:

ಹೊಲದಲ್ಲಿ ಕಿತ್ತು ಹಾಕಿದ ಹಸಿ ಶುಂಠಿ

ಈ ವರ್ಷ ಅತಿಯಾದ ಮಳೆ ಶುಂಠಿ ಬೆಳೆಗಾರರಿಗೆ ಬಾರೀ ತೊಂದರೆ  ಮಾಡಿದೆ. ಸಂಸ್ಕರಣೆ ಮಾಡುವುದು ಕಷ್ಟವಾಗಿದೆ. ಸಕಲೇಶಪುರ, ಹಾಸನ  ಬೇಲೂರು ಕಡೆ ಆಗಲೇ ಒಕ್ಕಣೆ ಮಾಡಲು ಪ್ರಾರಂಭವಾಗಿದೆ. ಸಾಗರ,ಶಿವಮೊಗ್ಗ ಸೊರಬ ಮುಂತಾದ ಕಡೆ ಹೆಚ್ಚಿನವರು ಡಿಸೆಂಬರ್ ನಂತರ ಒಕ್ಕಣೆ ಮಾಡುವುದು ಕ್ರಮ. ಮಳೆಯಿಂದ ಸ್ವಲ್ಪ ಬೆಳೆ ನಷ್ಟವಾಗಿದೆ. ಹಾಗೆಯೇ ಒಣಗಿಸಲು ಕಷ್ಟವಾದ ಕಾರಣ ಹಸಿ ಶುಂಠಿಯ  ಮಾರುಕಟ್ಟೆ ಮೇಲೆ ಹೊರೆ ಬಿದ್ದಿದೆ. ಸ್ವಲ್ಪ ಕಾದು ಬಿಸಿಲು ಬಂದ ನಂತರ ಒನಗಿಸಿದರೆ ಒಣ ಶುಂಠಿಗೆ ಬೆಲೆ ಹೆಚ್ಚಾಗಬಹುದು.

ಇಂದಿನ ಧಾರಣೆ:

  • BELUR, 28/11/2021, Green Ginger, 80, 1000, 1000, 1000
  • BENGALURU, 03/12/2021, Green Ginger, 328, 1500, 1800, 1650
  • BINNY MILL (F&V), 03/12/2021, Green Ginger, 149, 2600, 3100, 2800
  • CHICKBALLAPUR, 27/11/2021, Green Ginger, 25, 2500, 3000, 2750
  • CHINTAMANI, 02/12/2021, Green Ginger, 40, 3000, 4000, 3500
  • HASSAN, 02/12/2021, Green Ginger, 125, 600, 600, 600
  • KOLAR, 02/12/2021, Green Ginger, 20, 2500, 3500, 3000
  • MYSURU, 02/12/2021, Green Ginger, 194, 3800, 4000, 3900
  • RAMANAGARA, 03/12/2021, Green Ginger, 11, 2400, 3200, 3000
  • SHIVAMOGGA, 03/12/2021, Green Ginger, 6, 2200, 2400, 2300
  • T.NARSIPUR, 03/12/2021, Green Ginger, 1, 2000, 2000, 2000

 ಕರಿಮೆಣಸು ಮಾರುಕಟ್ಟೆ:

ಹೊಸ ಕರಿಮೆಣಸು ಬೆಳೆ ಪ್ರಾರಂಭವಾಗಿದೆ. ಕೆಲವು ಬೇಗ ಹಣ್ಣಾಗುವ ಕರಿಮುಂಡ ಜಾತಿಯ ಮೆಣಸು ಬೆಳೆಯುತ್ತಿದೆ. ಕೇರಳದಲ್ಲಿ ನಿಯಮಿತವಾಗಿ ಕೊಯಿಲು ಆಗಿದೆ ಎನ್ನಲಾಗುತ್ತ್ದೆ. ಹೊಸ ಮೆಣಸು ಮಾರುಕಟ್ಟೆ ದರ ಸುಮಾರು 10.00 ರೂ. ಕಡಿಮೆ ಇದೆ.

ಈಗ ದರ ಇಳಿಕೆಯಾದದ್ದು, ತಾತ್ಕಾಲಿಕ. ಬೆಲೆ ಏರಿಕೆ ಆಗುತ್ತಿದ್ದರೂ ಮಾರುಕಟ್ಟೆಗೆ ಅತೀ ಕಡಿಮೆ ಪ್ರಮಾಣದಲ್ಲಿ ಮಾಲು ಬರುತ್ತಿತ್ತು. ದಾಸ್ತಾನು ಇಟ್ಟವರ ನಿರೀಕ್ಷೆ 600.00 ಕ್ಕಿಂತ ಮೇಲೆ ಇರುವ ಕಾರಣ ಯಾರೂ ಕೊಡುತ್ತಿಲ್ಲ. ಇಂತಹ ಸಂಧರ್ಭದಲ್ಲಿ ಬೆಲೆ ಇಳಿಕೆ ಮಾಡಿ ಮಾಲು ತರಿಸುವ ತಂತ್ರಗಾರಿಕೆ ಎಂಬುದಾಗಿ ಕೆಲವು ಬೆಳೆಗಾರರು ಅಭಿಪ್ರಾಯ ಪಡುತ್ತಾರೆ. ಹಾಗಾಗಿ ಬೆಲೆ ಈಗ ಇಳಿಕೆಯಾದರೂ ಕೆಲವೇ ಸಮಯದಲ್ಲಿ ಮತ್ತೆ ಏರಿಕೆ ಆಗಬಹುದು.  ಆದರೆ ಕೊಯಿಲಿನ ಸಮಯದಲ್ಲಿ ಹೆಚ್ಚಿನ ದರ ಏರಿಕೆ ಕಷ್ಟ. 

ಕಾಳು ಮೆಣಸು ಉತ್ತಮ

ಇಂದು ದಾರಣೆ:ಕಿಲೋ

  • BANTWALA, 29/11/2021, UnG, 300.00, 520.00, 450.00
  • CHANNAGIRI, 30/11/2021, UnG 457.79, 475.79, 467.54
  • KARKALA, 02/12/2021, UnG 460.00, 510.00, 480.00
  • MANGALURU, 01/12/2021, UnG, 288.00, 515.00, 500.00
  • PUTTUR, 30/11/2021, UnG  215.00, 520.00, 367.50
  • SAGAR, 02/12/2021, UnG 478.99, 502.79, 488.99
  • SIDDAPURA, 03/12/2021, UnG, 465.09, 500.89, 482.89
  • SIRSI, 03/12/2021, UnG, 481.70, 545.48, 499.47
  • SULYA, 29/11/2021, UnG, 215.00, 510.00, 477.00
  • YELLAPURA, 02/12/2021, UnG, 470.13, 508.79, 487.19
  • Sakaleshapura  UnG -505.00-520.00-515.00
  • Garbled- 540.00
  • White pepper-660.00-675.00
  • MUDIGERE : 510.00-520.00-515.00
  • CIKKAMAGALORE: 510.00-520.00-515.00
  • TIRTHAHALLI -530.00
  • KALASA: 510.00

ಏಲಕ್ಕಿ ಧಾರಣೆ: ಕಿಲೋ

  • ರಾಶಿ ಉತ್ತಮ:800-850
  • ಜರಡಿ: 1000-1050
  • ಆಯ್ದದ್ದು:1000-1300
  • ಹಸಿರು ಸಾಧಾರಣ:800-850
  • ಹಸಿರು ಬೋಲ್ಡ್: 1,300-1,400

ಜಾಯೀ ಸಾಂಬಾರ:ಕಿಲೋ

  • ಜಾಯೀ ಕಾಯಿ ಕೊಲೋ: 195-200
  • ಜಾಯೀ ಪತ್ರೆ ಕಿಲೋ: 900-1000

ರಬ್ಬರ್ ದರ:ಕಿಲೋ

ಇಂದು ರಬ್ಬರ್ ದರ ಸ್ವಲ್ಪ ಇಳಿಕೆಯಾಗಿದೆ.

ಇಂದಿನ ದರ : ಕಿಲೋ:

  • GREDE:1X 193.00
  • RSS 4: 186-00
  • RSS 3: 186-00
  • RSS 5: 179-00
  • LOT:  173-00
  • SCRAP:122-00 114-00

ಕಾಫೀ ದಾರಣೆ:

ಮಳೆಯಿಂದಾಗಿ ಅರೇಬಿಕಾ ಕಾಫಿ ಬೆಳೆಗೆ ಭಾರೀ ಹಾನಿ ಉಂಟಾಗಿದೆ. 30-40 % ಬೆಳೆ ನಷ್ಟ ಎನ್ನಲಾಗುತ್ತಿದೆ. ರೋಬಸ್ಟಾ ಇಳುವರಿ ಸಾಧಾರಣ. ಬೆಲೆ ಸ್ವಲ್ಪ ಏರಿಕೆ ಆಗಿದೆ. ಇನ್ನೂ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ.

  • ಅರೇಬಿಕಾ ಪಾರ್ಚ್ ಮೆಂಟ್: 14,300-14,600 (50 kg)
  • ಅರೇಬಿಕಾ ಚೆರಿ: 6100-6200(50 kg)
  • ರೋಬಸ್ಟಾ ಪಾರ್ಚ್ ಮೆಂಟ್: 6050-6200(50 kg)
  • ರೋಬಸ್ಟಾ ಚೆರಿ: 3750 (50 kg)

ಡಿಸೆಂಬರ್ ಕೊನೆ ತನಕ ಚಾಲಿ ಅಡಿಕೆ ದರ ಇಳಿಕೆಯಾಗುವ ಸಾಧ್ಯತೆ ಕಡಿಮೆ. ಹಾಗೆಯೇ ಕೆಂಪಡಿಕೆಯೂ ಸ್ಥಿರವಾಗಿ  ಮುಂದುವರಿಯಲಿದೆ. ಕೆಂಪಡಿಕೆ ಉತ್ಪಾದನೆ ಪ್ರತೀ ವರ್ಷಕ್ಕಿಂತ ಕಡಿಮೆ ಇರುವ ಕಾರಣ ಬೆಲೆ ಇಳಿಕೆ ಸಾಧ್ಯತೆ ಇಲ್ಲ.

Leave a Reply

Your email address will not be published. Required fields are marked *

error: Content is protected !!