ಅಡಿಕೆಗೆ ದರ ಎರಿಕೆಯಾಗುತ್ತಿದೆ- ಬೆಳೆಗಾರರು ಎಚ್ಚರವಹಿಸಿ. 30-11- 2021ರಂದು ಧಾರಣೆ.

ಅಡಿಕೆ ಮಾರಾಟ

ಇಷ್ಟೊಂದು ಅಡಿಕೆ ಉತ್ಪಾದನೆ ಇದೆ. ಬೆಳೆ ಕಡಿಮೆ ಇದ್ದರೂ ಹೊಸ ತೋಟಗಳು ಹೆಚ್ಚಾಗಿ ಉತ್ಪಾದನೆ ಕಡಿಮೆ ಆಗಿಲ್ಲ. ಒಂದೇ ಒಂದು ಎಂದರೆ  ಅಡಿಕೆ ಆಮದು ಇಲ್ಲ ಎಂಬುದು. ಈ ಕಾರಣಕ್ಕೆ  ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದೆ. ನವೆಂಬರ್ ತಿಂಗಳು ಅಡಿಕೆ ಬೆಳೆಗಾರರಿಗೆ ಎಲ್ಲೂ ನಿರಾಸೆ ಕೊಡಲಿಲ್ಲ. ಚಾಲಿ ಅಡಿಕೆ, ಕೆಂಪಡಿಕೆ ಎರಡೂ ಏರಿಕೆಯ ಯಲ್ಲೇ ಮುಂದುವರಿದಿದೆ. ಕರಿಮೆಣಸು ಮೊದಲು ಏರಿಕೆಯ ಗತಿಯಲ್ಲಿ ಇತ್ತಾದರೂ ನಂತರ ಇಳಿಕೆ ಹಾದಿ ಹಿಡಿಯಿತು. ಕೊಬ್ಬರಿ ಸಹ ಒಮ್ಮೆ ಏರಿಕೆ ಆಗಿ ಸ್ವಲ್ಪ ಇಳಿಕೆಯೇ ಆಗಿದೆ. ರಬ್ಬರ್ ಧಾರಣೆ ಏರಿಕೆಯಲ್ಲಿದೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಅಡಿಕೆ ಬೆಳೆಗಾರರಿಗೆ ದರ ಎರಿಕೆಯ ಖುಷಿ ಕೊಟ್ಟಿದೆ.

ಚಾಲಿ ಅಡಿಕೆಗೆ 550 ದಾಟುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಬಹುಶಃ ಡಿಸೆಂಬರ್ ಮೊದಲವಾರದಲ್ಲೇ ಈ ದರ ಆದರೂ ಅಚ್ಚರಿ ಇಲ್ಲ. ಕೆಲವು  ವ್ಯಾಪಾರಿಗಳು ಇಂದೇ ಗುಣಮಟ್ಟದ ಹಳೆ ಅಡಿಕೆಯನ್ನು 530  ತನಕ, ಹೊಸ ಅಡಿಕೆಯನ್ನು 450 ರೂ. ತನಕ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಇದೆ. ಹೆಚ್ಚಿನ ಕಡೆ ಖಾಸಗಿ ವ್ಯಾಪಾರಿಗಳು ಸರಾಸರಿ 525 ದರಕ್ಕೆ ಖರೀದಿ ಮಾಡಿದ್ದಾರೆ.  ಅಡಿಕೆ ಇದೆಯೇ ಎಂದು ಕೇಳಿ ಕೇಳಿ ವ್ಯಾಪಾರ ಮಾಡುವ ಸ್ಥಿತಿ ಬಂದಿದೆ. ಶಿರಸಿ, ಸಿದ್ದಾಪುರ, ಸಾರದದಲ್ಲಿ  ಚಾಲಿಗೆ ಭಾರೀ ಬೇಡಿಕೆ. ಇಲ್ಲಿ ಕೆಲವು ರೈತರೂ ಹೊಸ ಅಡಿಕೆಯನ್ನು ಆನವಟ್ಟಿ, ಸುತ್ತಮುತ್ತಲಿನ ಭಾಗಗಳಿಂದ ಖರೀದಿಸಿ ದಾಸ್ತಾನು ಇಡಲಾರಂಭಿಸಿದ್ದಾರೆ.  ರೈತರಲ್ಲಿ ಹಳೆ ಅಡಿಕೆ ಬಹಳ ಕಡಿಮೆ ಇದೆ. ವ್ಯಾಪಾರ ಮಾಡುವ ಉದ್ದೇಶಕ್ಕೆ ಖರೀದಿ ಮಾಡಿಟ್ಟ ಅಡಿಕೆಯೇ  ಜಾಸ್ತಿ ಎನ್ನುತ್ತಾರೆ. ಇದೇ ಅಡಿಕೆ ಮಾರುಕಟ್ಟೆಗೆ ಬರುವುದು ಎಂಬ ಸುದ್ದಿ.  ಕೆಲವೇ ಕೆಲವು ರೈತರಲ್ಲಿ ಹಳೆ ಅಡಿಕೆ ಇದೆ. ಹೊಸ ಅಡಿಕೆ ಇನ್ನೂ ಸಿದ್ದ ಆಗಬೇಕಷ್ಟೇ. ಇದೇ ಕಾರಣಕ್ಕೆ ಅಂದರೆ ವ್ಯಾಪಾರಿಗಳು ಅವರ ಅಡಿಕೆಯನ್ನು  ಮಾರಾಟ ಮಾಡಿಕೊಳ್ಳಲು ದರ ಏರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಈ ತರಹದ ಏರಿಕೆ ಯಾವುದೋ ಒಂದು ಬದಲಾವಣೆಯನ್ನು ಉಂಟು ಮಾಡಬಹುದು. ಆಮದು ಆಗಬೇಕೆಂದು ಭಾರೀ ಒತ್ತಾಯಗಳೂ ಇವೆಯಂತೆ.

ದರ ಏರುತ್ತಿರಲಿ – ಗುಣಮಟ್ಟದ ಕಡೆಗೆ ಗಮನ ಇರಲಿ:

ಬಿಳಿ ಅಡಿಕೆ -ಚಾಲಿ

ಅಕಾಲಿಕ ಮಳೆಯಿಂದಾಗಿ ಚಳಿ ವಾತಾವರಣ ಇಲ್ಲದೆ ಹೂ ಬರುವಿಕೆಗೆ ತೊಂದರೆ ಅಗಬಹುದು. ಆ ಕಾರಣ ಮುಂದಿನ ವರ್ಷ ಬೆಳೆ ಕಡಿಮೆ ಆಗುವ ಸಾದ್ಯತೆಯೂ ಇಲ್ಲದಿಲ್ಲ.  ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಅಡಿಕೆಯಲ್ಲಿ ಗುಣಮಟ್ಟ ಇಲ್ಲ ಎಂಬ ಸುದ್ದಿ ಕೇಳಿ ಬರುತ್ತಿದೆ.ಚಾಲಿಗೆ ಬೇಡಿಕೆ ಇದೆ ಎಂದು ಚಾಲಿ ಮಾಡುವವರು ಹಸಿ ಹಸಿ ಅಡಿಕೆಯನ್ನು ಮಾರಾಟ ಮಾಡಬೇಡಿ. ಚೆನ್ನಾಗಿ ಒಣಗಿಸಿಯೇ ಮಾರಾಟ ಮಾಡಿ. ಕೆಂಪಡಿಕೆ ಮಾಡುವವರು ಸರಿಯಾಗಿ ಒಣಗಿಸದೆ ಮಾರಾಟ ಮಾಡಬೇಡಿ. ಬಣ್ಣ ಹಾಕಿ ಮಾರಾಟ ಮಾಡಬೇಡಿ. ಕಳೆ ನಾಶಕ ಹೊಡೆದಾಗ ಅಡಿಕೆ ಸಿಪ್ಪೆ ಒಣಗುತ್ತದೆ ನಿಜ. ಅದರೆ ಸರಿಯಾಗಿ ಒಣಗಿಸದೆ ಮಾರಾಟ ಮಾಡಬೇಡಿ. ಇದು ಇಡೀ ಅಡಿಕೆ ಮಾರುಕಟ್ಟೆಯನ್ನು ಹಾಳು ಮಾಡಬಹುದಾದ ಸಾಧ್ಯತೆ ಇದೆ. ಈ ವರ್ಷ ಅಡಿಕೆಗೆ ಬೆಲೆ  ಚೆನ್ನಾಗಿದ್ದರೂ ಮುಂದಿನ ವರ್ಷಗಳಲ್ಲಿ ಇದೇ ಸ್ಥಿತಿ ನಿಲ್ಲಬಹುದು ಎಂಬಂತಿಲ್ಲ. ಹೊರ ರಾಜ್ಯಗಳಲ್ಲೂ ಅಡಿಕೆ ಬೆಳೆ ಪ್ರಾರಂಭವಾಗಿದೆ. ಆಮದು ಆಗಲೇ ಬೇಕು ಎಂಬ ಒತ್ತಾಯವೂ ಇದೆ. ಹಾಗಿರುವಾಗ ನಾವು ಗುಣಮಟ್ಟದಲ್ಲಿ ಹಿಂದೆ ಬೀಳಬಾರದು. ವಿದೇಶಗಳಿಂದ ಬರುವ ಅಡಿಕೆಗೆ ಗುಣಮಟ್ಟ ಇಲ್ಲ ಎನ್ನುವ ವಾದ ಹಳೆಯದು. ಈಗ ಅಲ್ಲಿಯೂ ನಮ್ಮಂತೇ ಉತ್ತಮ ಗುಣಮಟ್ಟದ ಅಡಿಕೆಯನ್ನು ಉತ್ಪಾದಿಸಲಾಗುತ್ತದೆ. ಅವರೂ ಅಡಿಕೆ ಸಂಸ್ಕರಣೆಯಲ್ಲಿ ಪಳಗಿದ್ದಾರೆ. ಈಗ ನಮಗೆ ಇರುವ ಏಕೈಕ ಪ್ಲಸ್ ಎಂದರೆ ಗುಣಮಟ್ಟ. ಅದನ್ನು ಯಾವುದೇ ಕಾರಣಕ್ಕೆ ಬಿಡಬೇಡಿ. ಒಂದು ವೇಳೆ ಗುಣಮಟ್ಟದ ಅಡಿಕೆ ಉತ್ಪಾದನೆಯಲ್ಲಿ ಹಿಂದೆ ಬಿದ್ದರೆ ಆಮದು ಆಗುತ್ತದೆ. ಬೆಲೆಯೂ ಇಳಿಯುತ್ತದೆ. ಆರೋಗ್ಯ ವಿಷಯವೂ ಅಲ್ಲಿ ಮಧ್ಯಪ್ರವೇಶವಾಗುತ್ತದೆ. ಇದು ನಮಗೇ ತೊಂದರೆ ಉಂಟು ಮಾಡುತ್ತದೆ.

ಇಂದು ಅಡಿಕೆ ಧಾರಣೆ: ಕ್ವಿಂಟಾಲು.

  • ಬಂಟ್ವಾಳ: ಕೊಕಾ -12500, 25000, 22500
  • ಬಂಟ್ವಾಳ: ಹೊಸ ಅಡಿಕೆ- 27500, 42500, 40000
  • ಬಂಟ್ವಾಳ: ಹಳೆ ಅಡಿಕೆ-   46000, 52500, 50000
  • ಬೆಳ್ತಂಗಡಿ  ಹೊಸ ಅಡಿಕೆ –  29780, 42500, 38000
  • ಬೆಳ್ತಂಗಡಿ ಹಳೆ ಅಡಿಕೆ- 47560, 51500, 49000
  • ಬೆಳ್ತಂಗಡಿ ಕೋಕಾ- 27000, 27500, 27200
  • ಭದ್ರಾವತಿ  ರಾಶಿ-44599, 46699, 45922
  • ಚೆನ್ನಗಿರಿ:  ರಾಶಿ- 2545, 44089, 46639, 45753
  • ಹೊಳಲ್ಕೆರೆ  ರಾಶಿ – 44899, 46139, 45278
  • ಹೊನ್ನಳಿ    ರಾಶಿ – 39, 45939, 46039, 46000
  • ಹೊಸನಗರ- ಚಾಲಿ  38009, 38009, 38009
  • ಹೊಸನಗರ ಕೆಂಪುಗೋಟು- 35699, 38899, 38009
  • ಹೊಸನಗರ  ರಾಶಿ- 43899, 47770, 46899
  • ಕಾರ್ಕಳ  ಹೊಸ ಚಾಲಿ- 35000, 42500, 38000
  • ಕಾರ್ಕಳ ಹಳೆ ಚಾಲಿ- 46000, 52500, 48000
  • ಕುಮ್ಟಾ ಚಿಪ್ಪು – 23599, 40609, 38789
  • ಕುಮ್ಟಾ ಹಳೆ ಚಾಲಿ- 47089, 50099, 49569
  • ಕುಮ್ಟಾ ಹೊಸ ಚಾಲಿ- 35609, 40611, 40149
  • ಕುಂದಾಪುರ ಹಳೆ ಚಾಲಿ-  44000, 51000, 44000
  • ಕುಂದಾಪುರ ಹೊಸ ಚಾಲಿ – 37500, 42500, 37500
  • ಮಡಿಕೇರಿ, ಕಚ್ಚಾ – 48930, 48930, 48930
  • ಮಂಗಳೂರು ಕೋಕಾ- 25000, 35000, 30000
  • ಪುತ್ತೂರು ಕೋಕಾ- 11000, 26000, 18500
  • ಪುತ್ತೂರು ಹೊಸ ಅಡಿಕೆ- 27500, 42500, 35000
  • ಸಾಗರ ಬಿಳೇಗೋಟು-  24786, 24786, 24786
  • ಸಾಗರ ಚಾಲಿ –  47309, 48509, 47309
  • ಸಾಗರ ಕೆಂಪು ಗೋಟು- 32569, 32569, 32569
  • ಸಾಗರ ರಾಶಿ- 42699, 45309, 42699
  • ಸಾಗರ ಸಿಪ್ಪೆಗೋಟು- 27299, 27299, 27299
  • ಸಾಗರ ಕೋಕಾ- 22500, 37499, 36099
  • ಶಿಕಾರಿಪುರ ಕೆಂಪು – 38000, 45200, 41700
  • ಶಿವಮೊಗ್ಗ ಗೊರಬಲು- 17085, 39469, 37500
  • ಶಿವಮೊಗ್ಗ ರಾಶಿ- 44149, 47259, 46290
  • ಶಿವಮೊಗ್ಗ ರಾಶಿ- 50100, 76696, 66100
  • ಶಿವಮೊಗ್ಗ ಬೆಟ್ಟೆ – 47210, 53910, 53600
  • ಸಿದ್ದಾಪುರ ಬಿಳೇಗೋಟು- 33089, 43099, 35699
  • ಸಿದ್ದಾಪುರ ಚಾಲಿ – 46699, 50599, 49299
  • ಸಿದ್ದಾಪುರ ಕೊಕಾ- 28099, 37399, 29889
  • ಸಿದಾಪುರ ಹೊಸ ಚಾಲಿ- 33099, 36099, 34699
  • ಸಿದ್ದಾಪುರ ಕೆಂಪುಗೋಟು- 25629, 33019, 26099
  • ಸಿದ್ದಾಪುರ  ರಾಶಿ- 46109, 48109, 47899
  • ಸಿದ್ದಾಪುರ ತಟ್ಟೆ ಬೆಟ್ಟೆ- 34609, 44099, 38309
  • ಸಿರಾ ಇತರ – 9000, 46000, 40787
  • ಸಿರ್ಸಿ ಬೆಟ್ಟೆ- 20069, 44699, 43193
  • ಸಿರ್ಸಿ ಬಿಳೇ ಗೋಟು- 19069, 43810, 39897
  • ಸಿರ್ಸಿ ಚಾಲಿ- 33700, 50801, 50026
  • ಸಿರ್ಸಿ ರಾಶಿ- 39099, 51300, 50363
  • ಸುಳ್ಯ ಹಳೆ ಅಡಿಕೆ- 629, 45000, 51000, 48700
  • ತೀರ್ಥಹಳ್ಳಿ  ಬೆಟ್ಟೆ- 44166, 52689, 51099
  • ತೀರ್ಥಹಳ್ಳಿ ಇಡಿ-, 47099, 46509
  • ತೀರ್ಥಹಳ್ಳಿ ಗೊರಬಲು- 31199, 38585, 37545
  • ತೀರ್ಥಹಳ್ಳಿ  ರಾಶಿ- 44869, 47099, 46609
  • ತೀರ್ಥಹಳ್ಳಿ  ಸರಕು-48099, 71300, 67212
  • ತುಮಕೂರು ರಾಸಿ, 45000, 46100, 45400
  • ಯಲ್ಲಾಪುರ ಬಿಳೇ ಗೋಟು- 31011, 42931, 41012
  • ಯಲ್ಲಾಪುರ ಚಾಲಿ- 44389, 50894, 49363
  • ಯಲ್ಲಾಪುರ ಕೋಕಾ- 22011, 34899, 29669
  • ಯಲ್ಲಾಪುರ ಕೆಂಪು ಗೋಟು- 28899, 31850, 31850
  • ಯಲ್ಲಾಪುರ ರಾಶಿ- 46891, 53799, 51891
  • ಯಲ್ಲಾಪುರ ತಟ್ಟೆ ಬೆಟ್ಟೆ- 39161, 45699, 43091

ಕರಿಮೆಣಸು ಧಾರಣೆ: ಕಿಲೊ.

ಕರಿಮೆಣಸು ಆಮದು ಇದೆ ಎಂಬುದಾಗಿ ಶಿರಸಿಯಲ್ಲಿ ಓರ್ವ ವರ್ತಕರು ಹೇಳುತ್ತಾರೆ. ವ್ಯಾಪಾರಿಗಳು ಬೆಳೆಗಾರರಿಂದ ಮೆಣಸು ತರಿಸಲು ಈ ತಂತ್ರ ಮಾಡುತ್ತಿದ್ದಾರೆಯೋ ಎಂಬ ಅನುಮಾನವೂ ಇದೆ. ಅವಕ ತುಂಬಾ ಕಡಿಮೆ ಇದೆ. ಕೆಲವು ಮಾಧ್ಯಮಗಳ ವರದಿಗಳಿಂದಾಗಿ ಬೆಳೆಗಾರರು ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷವಾದರೂ ಬೆಲೆ ಬಂದೇ ಬರುತ್ತದೆ ಎಂದು ಮಾರಾಟ ಮಾಡದೆ ಉಳಿಸಿದ್ದಾರೆ. ಸಣ್ಣ ಬೆಳೆಗಾರರು ಮಾರಾಟ ಮಾಡಿದ್ದಾರೆ. ದೊಡ್ಡ ಬೆಳೆಗಾರರು ದಾಸ್ತಾನು ಇಟ್ಟಿದ್ದಾರೆ. ಕೇರಳ, ಮಲೆನಾಡು, ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆಗೆ ಬೆಳೆ ಹಾನಿಯಾಗಿದೆ. ಕರಾವಳಿಯಲ್ಲಿ  ತುಂಬಾ ರೋಗ ಇದೆ. ಹಾಗಾಗಿ ಮುಂದಿನ ವರ್ಷ ನಮ್ಮಲ್ಲಿ ಬೆಳೆ ಕಡಿಮೆ ಆಗುವ ಸಾಧ್ಯತೆ ಇದೆ. ವಿಯೆಟ್ನಾಂ ಮೆಣಸು ಆಮದು ಆಗಿದ್ದು, ಅದಕ್ಕೆ ಮಿಶ್ರಣ ಮಾಡಲು ಈಗ ದರ ಏರಿಕೆ ಆಗಿದೆ ಎಂಬುದಾಗಿಯೂ ಹೇಳುತ್ತಿದ್ದಾರೆ.

ಭಾರತದ ಮೆಣಸು
  • ಕಾರ್ಕಳ, UG, 480.00, 515.00, 500.00
  • ಮಂಗಳೂರು , UnG , 371.00, 515.00, 380.00
  • ಪುತ್ತೂರು UnG  215.00, 525.00, 362.50
  • ಸಿದ್ದಾಪುರ, UnG, 480.89, 522.22, 520.89
  • ಸಿರ್ಸಿ: UnG  480.90, 541.99, 503.82
  • ಯಲ್ಲಾಪುರ: UnG  441.71, 537.80, 506.90
  • ಸಕಲೇಶಪುರ:-Royal Traders, UnG,  525.00 
  • ಸಕಲೇಶಪುರ-Gain Coffee, UnG 500.00 
  • ಸಕಲೇಶಪುರ Sathya Murthy, Garbled,  560.00,
  • ಸಕಲೇಶಪುರ -Sathya Murthy, Ung,  540.00
  • ಸಾಗರ- 42290, 50999, 42290
  • ಸಕಲೇಶಪುರ -S.K Traders, UnG,  525.00 
  • ಸಕಲೇಶಪುರ -H.K.G & Bros- UnG  510.00 
  • ಸಕಲೇಶಪುರ -Nasir UnG  500.00
  • ಸಕಲೇಶಪುರ -Sainath UnG  530.00 
  • ಬಾಳುಪೇಟೆ:-Geetha Coffee Trading, UnG  525.00 
  •  ಬಾಳುಪೇಟೆ -Coffee Age, UnG,  520.00 
  • ಮೂಡಿಗೆರೆ: Bhavarlal UnG,  520.00 
  • ಮೂಡಿಗೆರೆ -A1 Traders, UNg  510.00 
  • ಮೂಡಿಗೆರೆ -Harshika,UnG  525.00 
  • ಮೂಡಿಗೆರೆ -A.M Traders, UnG.  525.00
  • ಮೂಡಿಗೆರೆ -Hadhi Coffee, UnG 525.00
  • ಚಿಕ್ಕಮಗಳೂರು:Arihant UnG  525.00 
  • ಚಿಕ್ಕಮಗಳೂರು -Nirmal UnG,  520.00 
  • ಚಿಕ್ಕಮಗಳೂರು -M.R UnG,  530.00 
  • ಮಡಿಕೇರಿ: -Kiran Garbled,  510.00 
  • ಗೋಣಿಕೊಫ್ಫ-Sri Maruthi, UnG,  515.00-500.00
  • ಕಳಸ – PIB Traders, UnG,  515.00 -510.00
  • ತೀರ್ಥಹಳ್ಳಿ: Malenadu, UnG 500.00-510.00
  • ಬಿಳಿ ಮೆಣಸು (ಬೋಳು ಕಾಳು) 719.00-729.00 -724.50

ಹಸಿ ಶುಂಠಿ: ಕ್ವಿಂಟಾಲು.

ಹಸಿ ಶುಂಠಿ ದರ ಈ ವರ್ಷ ಏರಿಕೆ ಸಾಧ್ಯತೆ ಕಡಿಮೆ. ಈ ವರ್ಷ ಬೆಳೆ ಜಾಸ್ತಿ ಇದೆ. ಜೊತೆಗೆ ಮಾರುಕಟ್ಟೆ ಸ್ವಲ್ಪ ಅಸ್ತಿರವಾಗಿಯೂ ಇದೆ.

  • ಬೇಲೂರು- 1000, 1000, 1000
  • ಬೆಂಗಳೂರು- 1000, 1200, 1100
  • ಬಿನ್ನಿ ಮಿಲ್- 2600, 3100, 2800
  • ಹಾಸನ  600, 800, 600
  • ಕೋಲಾರ: 2500, 4000, 3300
  • ಮೈಸೂರು- 4800, 5000, 4900
  • ರಾಮನಗರ- 2000, 3200, 2800
  • ಶಿವಮೊಗ್ಗ- 2400, 2600, 2500
  • ಟಿ ನರಸಿಪುರ- 2000, 2500, 2000
ಎಣ್ಣೆ ಕೊಬ್ಬರಿ

ಕೊಬ್ಬರಿ ಧಾರಣೆ: ಕ್ವಿಂಟಾಲು.

ಕಳೆದ ವಾರ 18,000 ಕ್ಕೆ ತಲುಪಿದ್ದ ಧಾರಣೆ ಸ್ವಲ್ಪ ಹಿಂದೆ ಬಂದಿದೆ. ಕೊರೋನಾ ಸುದ್ದಿಗೂ ಬೆಲೆ ಇಳಿಕೆಗೂ ತಾಳೆ ಹಾಕಲಾಗುತ್ತಿದೆ.

  • ಅರಸೀಕೆರೆ- ಬಾಲ್ 14000, 17125, 14742
  • ಬೆಂಗಳೂರು- ಬಾಲ್ 17000, 19000, 18000
  • ಚೆನ್ನರಾಯಪಟ್ನ ಬಾಲ್   50, 17000, 17000, 17000
  • ಚನ್ನರಾಯಪಟ್ನ, ಎಣ್ಣೆ -14000, 14000, 14000
  • ಕೆಆರ್‍ ಪೆಟೆ, ಎಣ್ಣೆ- 10369, 10379, 10379
  • ಮಂಗಳೂರು, ಎಣ್ಣೆ- 8000, 15200, 9000
  • ಪುತ್ತೂರು, ಎಣ್ಣೆ – 4500, 11500, 8000
  • ತಿಪ್ಟೂರು, ಖಾದ್ಯ- 17200, 17700, 17500
  • ತುರುವೇಕೆರೆ  ಖಾದ್ಯ- 17000, 17000, 17000

ಏಲಕ್ಕಿ ಧಾರಣೆ: ಕಿಲೋ

  • ರಾಶಿ ಉತ್ತಮ:800-850
  • ಜರಡಿ: 1000-1050
  • ಆಯ್ದದ್ದು:1000-1300
  • ಹಸಿರು ಸಾಧಾರಣ:800-850
  • ಹಸಿರು ಬೋಲ್ಡ್: 1,300-1,400

ಜಾಯೀ ಸಾಂಬಾರ: ಕಿಲೊ.

  • ಜಾಯೀ ಕಾಯಿ ಕೊಲೋ: 195-200
  • ಜಾಯೀ ಪತ್ರೆ ಕಿಲೋ: 900-1000

ರಬ್ಬರ್ ದರ: ಕಿಲೊ.

ಈ ಹಿಂದೆ ಹೇಳಿದಂತೆ  ಈ ವರ್ಷ ರಬ್ಬರ್ ದರ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅದರೆ ಟ್ಯಾಪಿಂಗ್ ಬಹಳ ಕಡಿಮೆಯಾಗಿದೆ. ರೈನ್ ಗಾರ್ಡ್ ಸೋರುವ ಸ್ಥಿತಿ ಉಂಟಾಗಿದೆ. ಒಂದಷ್ಟು ರಬ್ಬರ್ ತೋಟ ಕಡಿಯಲ್ಪಟ್ಟು ಉತ್ಪತ್ತಿ ಕಡಿಮೆಯಾಗಿದೆ. ಜನವರಿ ಸುಮಾರಿಗೆ RSS 4 195 ತಲುಪಿದರೂ ಅಚ್ಚರಿ ಇಲ್ಲ.

ಇಂದಿನ ದರ :

  • GREDE:1X 196-00
  • RSS 4: 188-00
  • RSS 3: 188-00
  • RSS 5: 181-00
  • LOT:  175-00
  • SCRAP:123-00 115-00

ಕಾಫೀ ದಾರಣೆ: 50 ಕಿಲೊ.

ಮಳೆಯಿಂದಾಗಿ ಅರೇಬಿಕಾ ಕಾಫಿ ಬೆಳೆಗೆ ಭಾರೀ ಹಾನಿ ಉಂಟಾಗಿದೆ. ರೋಬಸ್ಟಾ ಇಳುವರಿ ಚೆನ್ನಾಗಿದೆ. ಬೆಲೆ ಸ್ವಲ್ಪ ಏರಿಕೆ ಆಗಿದೆ. ಇನ್ನೂ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ.

  • ಅರೇಬಿಕಾ ಪಾರ್ಚ್ ಮೆಂಟ್: 14,700-14,800 (50 kg)
  • ಅರೇಬಿಕಾ ಚೆರಿ: 6250-6000(50 kg)
  • ರೋಬಸ್ಟಾ ಪಾರ್ಚ್ ಮೆಂಟ್: 6500(50 kg)
  • ರೋಬಸ್ಟಾ ಚೆರಿ: 3800 (50 kg

ಬೆಳೆಗಾರರಿಗೆ ಸೂಚನೆ:

ಇಲ್ಲಿ ತಿಳಿಸಲಾಗಿರುವ ಬೆಲೆಗಳು ಇಂದಿನ ಕೃಷಿ ಉತ್ಪನ್ನ  ಮಾರುಕಟ್ಟೆ ಸಮಿತಿಗಳಲ್ಲಿ ನಡೆದ ಧಾರಣೆ, ಮತ್ತು ಖಾಸಗಿ ವರ್ತಕರರು ಹೇಳಿದ ಧಾರಣೆಯಾಗಿರುತ್ತದೆ. ಹಾಗೆಯೇ ಇಲ್ಲಿ ಹೇಳಲಾದ ಮಾಹಿತಿಗಳು ಒಂದೆರಡು ಮಾಹಿತಿ ಕೊಡುವ ಮನಸ್ಸುಳ್ಳ ಕೆಲವು ವರ್ತಕರಿಂದ ಸಂಗ್ರಹಿಸಿದ ಅಭಿಪ್ರಾಯವೇ ಆಗಿರುತ್ತದೆ. ಇದು ಎಲ್ಲಾ ವರದಿಗಳಂತೆ ಮೇಲು ನೋಟದ ಸ್ಥಿತಿಗತಿಯ ವರದಿಯೇ ಹೊರತು ಆಳ ಅಧ್ಯಯನಾ ವರದಿ ಆಗಿರುವುದಿಲ್ಲ.  ಓದುಗರು ಇದಕ್ಕಿಂತ ಹೆಚ್ಚಿನ ಮಾಹಿತಿ ಹೊಂದಿದ್ದರೆ ಅದನ್ನು ಇಲ್ಲಿ ಕಮೆಂಟ್ ನಲ್ಲಿ ತಿಳಿಸಿದರೆ ಎಲ್ಲರಿಗೂ ಅನುಕೂಲವಾಗಬಹುದು.

Leave a Reply

Your email address will not be published. Required fields are marked *

error: Content is protected !!