ಚಾಲಿ ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದ್ದು, ಇದರ ಮುನ್ಸೂಚನೆ ಶಿರಸಿ, ಸಿದ್ದಾಪುರ, ಸಾಗರ ಮಾರುಕಟ್ಟೆಯ ಮೂಲಕ ಕಾಣಿಸುತ್ತಿದೆ. ಇಲ್ಲಿನ ಅಡಿಕೆಗೆ ದರ ಹೆಚ್ಚಳವಾದರೆ ಸಧ್ಯವೇ ಉಳಿದೆದೆ ದರ ಏರುವುದು ಹಿಂದಿನಿಂದಲೂ ಬಂದ ವಾಡಿಕೆ. ಇಂದು ಶಿವಮೊಗ್ಗ, ಉತ್ತರಕನ್ನಡದ ಮಾರುಕಟ್ಟೆಯಲ್ಲಿ ಚಾಲಿ ಕ್ವಿಂಟಾಲಿಗೆ 51000 ರೂ.ತಲುಪಿದೆ. ಕರಾವಳಿಯಲ್ಲೂ ಸಧ್ಯವೇ 53,000 ದಾಟುವ ಮುನ್ಸೂಚನೆ ಕಾಣಿಸುತ್ತಿದೆ.
ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಕೊರತೆ ಇದೆ. ಈ ವರ್ಷ ದರ ಏರಿಕೆಯಲ್ಲೇ ಇದ್ದ ಕಾರಣ ಹಾಗೆಯೇ ಅನಿಶ್ಚಿತತೆ ವಾತಾವರಣ ಇದ್ದ ಕಾರಣ ಬಹುತೇಕ ಬೆಳೆಗಾರರು ಚಾಲಿಯನ್ನು 49,000-50,000 ತಲುಪಿದ ಸಮಯದಲ್ಲಿ ಮಾರಾಟ ಮಾಡಿ, ಕೊರತೆ ಉಂಟಾಗಿದೆ. ಪ್ರತೀ ವರ್ಷ ನವೆಂಬರ್ ಸುಮಾರಿಗೆ ಹೊಸ ಅಡಿಕೆ ಬರುತ್ತಿತ್ತು. ಈ ವರ್ಷ ಬರುವ ಅಡಿಕೆ ತುಂಬಾ ಕಡಿಮೆ ಮತ್ತು ಗುಣಮಟ್ಟ ಇಲ್ಲದ್ದು. ಗುಣಮಟ್ಟದ ಅಡಿಕೆ ಬೇಕು ಎಂಬ ಕಾರಣಕ್ಕೆ ಸಿಂಗಲ್ ಚೋಲ್ ಮತ್ತು ಡಬ್ಬಲ್ ಚೋಲ್ ಅಡಿಕೆಗೆ ದರ ಏರಿಕೆ ಆಗುತ್ತಿದೆ.ಎಷ್ಟೇ ದರ ಏರಿಕೆ ಆದರೂ ಅಡಿಕೆ ಇದ್ದರೆ ತಾನೇ ಬರುವುದು ಈ ಪರಿಸ್ಥಿತಿ ಉಂಟಾಗಿದೆ. ಈ ಮಧ್ಯೆ ಸಿರಸಿ, ಸಿದಾಪುರ, ಯಲ್ಲಾಪುರ, ಸಾಗರ ಕಡೆ ಕೆಲವು ರೈತರು ಹಾಗೆಯೇ ಅಲ್ಪ ಸ್ವಲ್ಪ ಅಡಿಕೆ ಖರೀದಿ ಮಾಡಿ ದಾಸ್ತಾನು ಇಟ್ಟವರಲ್ಲಿ ಮಾತ್ರ ಚಾಲಿ ಇದೆ. ಅದೇ ಈಗ ಮಾರುಕಟ್ಟೆಗೆ ಬರುತ್ತಿದೆ. ಬೆಳೆಗಾರರಲ್ಲಿ ಅಲ್ಲೂ ಅಡಿಕೆ ಇಲ್ಲ. ಕಾರಾವಳಿಯಲ್ಲೂ ಅಡಿಕೆ ಇಲ್ಲ. ಈ ಕಾರಣಕ್ಕೆ ಡಿಸೆಂಬರ್ ತನಕ ಚಾಲಿಗೆ ಉತ್ತಮ ಬೆಲೆ ಬರಲಿದೆ.
ಭಾರೀ ಬದಲಾವಣೆ ಸಾಧ್ಯತೆ:
ಹೊಸ ವರ್ಷ ಚಾಲಿ ಇಳಿಮುಖ ವಾಗುವ ಪರಿಸ್ಥಿತಿ, ಕೆಂಪು ಭಾರೀ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂಬ ಸುದ್ದಿ ಇದೆ. ಕಾರಣ ಇದು.
ಪ್ರತೀ ವರ್ಷ ಮಲೆನಾಡು ಭಾಗದ ಶಿರಸಿ, ಯಲ್ಲಾಪುರ, ಸಾಗರ, ಶಿವಮೊಗ್ಗ, ಶಿಕಾರಿಪುರ, ಆನವಟ್ಟಿ ಕಡೆಗಳಲ್ಲಿ ಶೇ.10-15 ಚಾಲಿ ಆಗುತ್ತಿತ್ತು. ಇಲ್ಲಿ ಚಾಲಿ ಮಾಡುವುದು ಕಡಿಮೆ. ಮೊದಲ ಒಂದು ಗೊನೆ ಕೊಯಿಲು ಪ್ರಾರಂಭವಾಗುವ ಸಮಯದಲ್ಲಿ ಹಣ್ಣಾಗಿರುತ್ತದೆ. ಅದು ಚಾಲಿ ಆಗುತ್ತದೆ. ಈ ವರ್ಷ ಹಾಗಿಲ್ಲ. ಈ ಎಲ್ಲಾ ಪ್ರದೇಶಗಳಲ್ಲೂ ಎರಡು ಗೊನೆ ಚಾಲಿ ಆಗಿದೆ. ಇನ್ನೇನು ಮಳೆ ಒಂದು ವಾರ ತನಕ ಬಾರೆದೆ ಇದ್ದರೆ ಇನ್ನೊಂದು ಗೊನೆ ಹಣ್ಣಾಗುವ ಸ್ಥಿತಿ ಉಂಟಾಗಿದೆ.
ಈಗ ಫಸಲು ಗುತ್ತಿಗೆ ಪಡೆದವರು ಮಾತ್ರ ಕೊಯಿಲು ಮಾಡುತ್ತಿದ್ದಾರೆ ಹೊರತು ಯಾವ ಬೆಳೆಗಾರರೂ ಕೊಯಿಲು ಮಾಡಿಲ್ಲ. ಇದಲ್ಲದೆ ಚಾಲಿ ಮತ್ತು ಕೆಂಪಿನ ದರ ಸಮನಾಗಿ ಇರುವ ಕಾರಣ ಹೆಚ್ಚಿನವರು ಈ ವರ್ಷ ಚಾಲಿ ಮಾಡುವುದರಲ್ಲಿದ್ದಾರೆ. ಕೆಂಪಡಿಕೆ ಮಾಡಬೇಕಾದರೆ ಚಾಲಿಗೂ ಕೆಂಪಿಗೂ ಸುಮಾರು 5000-6000 ರೂ. ವ್ಯತ್ಯಾಸ ಇರಬೇಕು. ಈಗ ಅಂತಹ ದರ ವ್ಯತ್ಯಾಸ ಇಲ್ಲದೆ ಇರುವುದು ಚಾಲಿ ಹೆಚ್ಚಾಗಲು ಕಾರಣವಾಗಿದೆ.
ಸುಮಾರು 40% ಈಗಾಗಲೇ ಚಾಲಿ ಆಗಿದೆ. ಇದು ವಾಡಿಕೆಗಿಂತ 50-60% ಹೆಚ್ಚು ಅದ ಕಾರಣ ಅಷ್ಟು ಹೆಚ್ಚು ಚಾಲಿಯ ಉತ್ಪಾದನೆ ಇದೆ. ಸಾಂಪ್ರದಾಯಿಕ ಪ್ರದೇಶಗಳಲ್ಲೂ ಈ ವರ್ಷ ಕಳೆದ ಎರಡು ವರ್ಷಕ್ಕಿಂತ ಹೆಚ್ಚು ಇಳುವರಿ ಇದೆ. ಹಾಗಾಗಿ ಬೇಡಿಕೆ ಮತ್ತು ಪೂರೈಕೆಯ ನೆಲೆಯಲ್ಲಿ ಮಾರುಕಟ್ಟೆ ಇರುವುದೇ ಆದರೆ, ಮುಂದಿನ ವರ್ಷ ಚಾಲಿ ಹಿಂದೆ, ಕೆಂಪು ಏರಿಕೆ ಆಗುವ ಎಲ್ಲಾ ಸಾಧ್ಯತೆಗಳಿವೆ.
ಈ ವರ್ಷ ಕೇರಳದಲ್ಲಿ ಅಡಿಕೆ ಇಲ್ಲ. ತಮಿಳುನಾಡಿನಲ್ಲೂ ಇಲ್ಲ. ಮಳೆ ಕಾರಣ ಅಲ್ಲಿಯೂ ಚಾಲಿ ಆಗಿದೆ ಎನ್ನುತ್ತಾರೆ ಸಾಗರದ ಒಬ್ಬ ವರ್ತಕರು. ಕೇರಳ ಮತ್ತು ತಮಿಳುನಾಡಿನಿಂದ ಸ್ವಲ್ಪ ಕೆಂಪಡಿಕೆ ತಂದು ಇಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ವರ್ಷ ಅದಕ್ಕೂ ಕಷ್ಟವಾಗಿದೆ. ಅಸ್ಸಾಂ ನಲ್ಲೂ ಮಳೆಯಿಂದ ಅಡಿಕೆ ಕಡಿಮೆ ಎನ್ನುತ್ತಾರೆ ವರ್ತಕರು.
ಇಂದು ಅಡಿಕೆ ಧಾರಣೆ:
- ಬಂಟ್ವಾಳ: 26/11/2021, ಕೋಕಾ 12500, 25000, 22500
- BANTWALA, 26/11/2021, ಹೊಸ ಅಡಿಕೆ, 27500, 42500, 40000
- BANTWALA, 26/11/2021, ಹಳೆ ಅಡಿಕೆ, 46000, 52000, 50000
- ಬೆಳ್ತಂಗಡಿ: 25/11/2021, ಕೋಕಾ, 27000, 27500, 27200
- BELTHANGADI, 25/11/2021, ಹೊಸ ಅಡಿಕೆ, 32500, 42500, 40000
- BELTHANGADI, 24/11/2021, ಹಳೆ ಅಡಿಕೆ, 46650, 51500, 49000
- BELTHANGADI, 24/11/2021, ಕೋಕಾ 18000, 37000, 30000
- BENGALURU, 23/11/2021, ಕೆಂಪು 45000, 48000, 46500
- ಬಧ್ರಾವತಿ: 26/11/2021, ರಾಶಿ 44599, 46599, 46303
- ಚೆನ್ನಗಿರಿ: 25/11/2021, ರಾಶಿ, 45099, 46309, 45833
- ಹೊಳಲ್ಕೆರೆ: 23/11/2021, ರಾಶಿ 44879, 46409, 45626
- ಹೊನ್ನಾಳಿ: 26/11/2021, ರಾಶಿ 46109, 46109, 46109
- ಹೊಸನಗರ: 26/11/2021, ಚಾಲಿ 38009, 38009, 38009
- HOSANAGAR, 26/11/2021, Kempugotu, 14, 35699, 38899, 38009
- HOSANAGAR, 26/11/2021, ರಾಶಿ 43899, 47770, 46899
- ಕಾರ್ಕಳ: 26/11/2021, ಹೊಸ ಅಡಿಕೆ 35000, 42500, 38000
- KARKALA, 26/11/2021, ಹಳೆ ಅಡಿಕೆ 46000, 51000, 48000
- ಕುಮಟಾ: 26/11/2021, Chippu, 24509, 40999, 37569
- KUMTA, 26/11/2021, Coca, 21069, 35019, 34609
- KUMTA, 26/11/2021, Factory, 12019, 18929, 18429
- KUMTA, 26/11/2021, ಹಳೆ ಚಾಲಿ 47019, 50009, 49629
- KUMTA, 26/11/2021, ಹೊಸ ಚಾಲಿ 34869, 41109, 38749
- ಕುಂದಾಪುರ: 26/11/2021, ಹಳೆ ಚಾಲಿ 44000, 51000, 44000
- KUNDAPUR, 26/11/2021, ಹೊಸ ಚಾಲಿ 37500, 42500, 37500
- MADIKERI, 26/11/2021, ಕಚ್ಚಾ 23220, 23220, 23220
- MALUR, 24/11/2021, ಕೆಂಪು 40000, 45000, 41666
- ಮಂಗಳೂರು: 26/11/2021, ಕೋಕಾ, 30000, 36500, 31000
- ಪುತ್ತೂರು: 25/11/2021, ಕೊಕಾ 10500, 26000, 18250
- PUTTUR, 25/11/2021, ಹೊಸ ಅಡಿಕೆ, 27500, 42500, 35000
- ಸಾಗರ: 25/11/2021, Bilegotu, 21969, 39089, 37289
- SAGAR, 25/11/2021, ಚಾಲಿ 41699, 48099, 47599
- SAGAR, 25/11/2021, Coca, 26899, 38599, 36939
- SAGAR, 25/11/2021, Kempugotu, 28899, 38619, 37399
- SAGAR, 25/11/2021, ರಾಶಿ 36899, 46899, 45699
- SAGAR, 25/11/2021, Sippegotu, 10, 8290, 26599, 25589
- ಶಿಕಾರಿಪುರ: 25/11/2021, Red, 325, 39900, 44700, 42600
- ಶಿವಮೊಗ್ಗ: 26/11/2021, Bette, 51, 47689, 54009, 52409
- SHIVAMOGGA, 26/11/2021, Gorabalu, 573, 15010, 39169, 37890
- SHIVAMOGGA, 26/11/2021, ರಾಶಿ 43899, 47059, 46100
- SHIVAMOGGA, 26/11/2021, ಸರಕು, 50099, 71809, 65600
- ಸಿದ್ದಾಪುರ: 26/11/2021, Bilegotu, 34, 33611, 42569, 38929
- SIDDAPURA, 26/11/2021, ಚಾಲಿ 45409, 51009, 50499
- SIDDAPURA, 26/11/2021, Coca, 24499, 36889, 32689
- SIDDAPURA, 26/11/2021, ಹೊಸ ಚಾಲಿ 30012, 38099, 37899
- SIDDAPURA, 26/11/2021, Kempugotu, 27609, 37199, 34689
- SIDDAPURA, 26/11/2021, ರಾಶಿ 42899, 48744, 47939
- SIDDAPURA, 26/11/2021, Tattibettee, 3, 37799, 45099, 44269
- SIRA, 22/11/2021, ಇತರ 9000, 46000, 41108
- ಸಿರ್ಸಿ: 26/11/2021, Bette, 34699, 48899, 44855
- SIRSI, 26/11/2021, Bilegotu, 21669, 44899, 40265
- SIRSI, 26/11/2021, ಚಾಲಿ , 45809, 51158, 50388
- SIRSI, 26/11/2021, ರಾಶಿ 43869, 51199, 49361
- ತೀರ್ಥಹಳ್ಳಿ: 21/11/2021, Bette, 88, 46109, 54099, 53559
- TIRTHAHALLI, 21/11/2021, EDI, 135, 42366, 47099, 46399
- TIRTHAHALLI, 21/11/2021, Gorabalu, 123, 36009, 38119, 37869
- TIRTHAHALLI, 21/11/2021, ರಾಶಿ 41668, 47019, 46309
- TIRTHAHALLI, 21/11/2021, Saraku, 149, 48189, 74080, 66300
- ತುಮಕೂರು: 26/11/2021, ಇತರ, 45100, 46200, 45500
- TUMAKURU, 22/11/2021, ರಾಶಿ 45000, 46200, 45500
- ಯಲ್ಲಾಪುರ: 26/11/2021, Bilegotu, 15, 33212, 42899, 41699
- YELLAPURA, 26/11/2021, ಚಾಲಿ, 44329, 50780, 49297
- YELLAPURA, 26/11/2021, Coca, 20, 26899, 32899, 30699
- YELLAPURA, 26/11/2021, Kempugotu, 1, 27101, 34219, 32099
- YELLAPURA, 26/11/2021, ರಾಶಿ, 46399, 53910, 50899
- YELLAPURA, 26/11/2021, Tattibettee, 16, 38969, 45369, 43300
ಕರಿಮೆಣಸು ಧಾರಣೆ:
- ಕಾರ್ಕಳ, UG, 480.00, 535.00, 500.00
- ಮಂಗಳೂರು , UnG , , 371.00, 545.00, 380.00
- ಪುತ್ತೂರು UnG 215.00, 540.00, 362.50
- ಸಿದ್ದಾಪುರ, UnG, 600.89, 600.89, 600.89
- ಸಿರ್ಸಿ: UnG 446.90, 605.99, 535.37
- ಯಲ್ಲಾಪುರ: UnG 486.01, 518.80, 494.85
- ಸಕಲೇಶಪುರ:-Royal Traders, UnG, 540.00
- ಸಕಲೇಶಪುರ-Gain Coffee, UnG 540.00
- ಸಕಲೇಶಪುರ Sathya Murthy, Garbled, 560.00,
- ಸಕಲೇಶಪುರ -Sathya Murthy, Ung, 540.00
- ಸಕಲೇಶಪುರ -S.K Traders, UnG, 545.00
- ಸಕಲೇಶಪುರ -H.K.G & Bros- UnG 540.00
- ಸಕಲೇಶಪುರ -Nasir UnG 540.00
- ಸಕಲೇಶಪುರ -Sainath UnG 545.00
- ಬಾಳುಪೇಟೆ:-Geetha Coffee Trading, UnG 550.00
- ಬಾಳುಪೇಟೆ -Coffee Age, UnG, 540.00
- ಮೂಡಿಗೆರೆ: Bhavarlal UnG, 535.00
- ಮೂಡಿಗೆರೆ -A1 Traders, UNg 535.00
- ಮೂಡಿಗೆರೆ -Harshika,UnG 540.00
- ಮೂಡಿಗೆರೆ -A.M Traders, UnG. 540.00
- ಮೂಡಿಗೆರೆ -Hadhi Coffee, UnG 540.00
- ಚಿಕ್ಕಮಗಳೂರು:Arihant UnG 532.00
- ಚಿಕ್ಕಮಗಳೂರು -Nirmal UnG, 535.00
- ಚಿಕ್ಕಮಗಳೂರು -M.R UnG, 540.00
- ಚಿಕ್ಕಮಗಳೂರು -Kiran, UnG 540.00
- ಮಡಿಕೇರಿ: -Kiran Garbled, 530.00
- ಗೋಣಿಕೊಫ್ಫ-Sri Maruthi, UnG, 525.00
- ಕಳಸ – PIB Traders, UnG, 525.00
- ತೀರ್ಥಹಳ್ಳಿ: Malenadu, UnG 545.00
ಏಲಕ್ಕಿ ಧಾರಣೆ: ಕಿಲೋ
- ರಾಶಿ ಉತ್ತಮ:800-850
- ಜರಡಿ: 1200-1300
- ಆಯ್ದದ್ದು:1000-1050
- ಹಸಿರು ಸಾಧಾರಣ:800-900
- ಹಸಿರು ಬೋಲ್ಡ್: 1,300-1,400
ಜಾಯೀ ಸಾಂಬಾರ:
- ಜಾಯೀ ಕಾಯಿ ಕೊಲೋ: 195-200
- ಜಾಯೀ ಪತ್ರೆ ಕಿಲೋ: 900-1000
ರಬ್ಬರ್ ದರ:
ಈ ಹಿಂದೆ ಹೇಳಿದಂತೆ ಈ ವರ್ಷ ರಬ್ಬರ್ ದರ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅದರೆ ಟ್ಯಾಪಿಂಗ್ ಬಹಳ ಕಡಿಮೆಯಾಗಿದೆ. ರೈನ್ ಗಾರ್ಡ್ ಸೋರುವ ಸ್ಥಿತಿ ಉಂಟಾಗಿದೆ. ಒಂದಷ್ಟು ರಬ್ಬರ್ ತೋಟ ಕಡಿಯಲ್ಪಟ್ಟು ಉತ್ಪತ್ತಿ ಕಡಿಮೆಯಾಗಿದೆ. ಜನವರಿ ಸುಮಾರಿಗೆ RSS 4 190 ತಲುಪಿದರೂ ಅಚ್ಚರಿ ಇಲ್ಲ.
ಇಂದಿನ ದರ : ಕಿಲೋ:
- GREDE:1X 196-00
- RSS 4: 189-00
- RSS 3: 190-00
- RSS 5: 181-00
- LOT: 175-00
- SCRAP:123-00 115-00
ಕಾಫೀ ದಾರಣೆ:
ಮಳೆಯಿಂದಾಗಿ ಅರೇಬಿಕಾ ಕಾಫಿ ಬೆಳೆಗೆ ಭಾರೀ ಹಾನಿ ಉಂಟಾಗಿದೆ. ರೋಬಸ್ಟಾ ಇಳುವರಿ ಚೆನ್ನಾಗಿದೆ. ಬೆಲೆ ಸ್ವಲ್ಪ ಏರಿಕೆ ಆಗಿದೆ. ಇನ್ನೂ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ.
- ಅರೇಬಿಕಾ ಪಾರ್ಚ್ ಮೆಂಟ್: 15,000 (50 kg)
- ಅರೇಬಿಕಾ ಚೆರಿ: 6450(50 kg)
- ರೋಬಸ್ಟಾ ಪಾರ್ಚ್ ಮೆಂಟ್: 6200(50 kg)
- ರೋಬಸ್ಟಾ ಚೆರಿ: 3350 (50 kg)
ಕೊಬ್ಬರಿ ದರ: ಕ್ವಿಂಟಾಲು
ಕೊಬ್ಬರಿ ದರ ಇಂದಿನ ಗರಿಷ್ಟ 18,100 ದಾಖಲಾಗಿದೆ. ಇನ್ನೂ ಬೇಡಿಕೆ ಚೆನ್ನಾಗಿದ್ದು, ಜನವರಿ ಸಮಯಕ್ಕೆ 19,000 ಆದರೂ ಅಚ್ಚರಿ ಇಲ್ಲ. ತೆಂಗಿನೆಣ್ಣೆಯ ಬೇಡಿಕೆ ಚೆನ್ನಾಗಿರುವ ಕಾರಣ ಎಣ್ನೆ ಕೊಬ್ಬರಿಗೂ ಬೆಲೆ ಉತ್ತಮವಾಗಿದೆ.
ಇಂದಿನ ಕೊಬ್ಬರಿ ದರ: ಕ್ವಿಂಟಾಲು.
- ಅರಸೀಕೆರೆ: 26/11/2021, Copra, 658, 14000, 17375, 16424
- ಚೆನ್ನರಾಯಪಟ್ನ: 24/11/2021, Milling, 31, 10000, 10300, 1300
- ಹುಲಿಯಾರು: 20/11/2021, Ball, 17710, 17710, 17710
- ಹುಲಿಯಾರು 20/11/2021, ಸಣ್ಣದು 12500, 12500, 12500
- ಕೆ ಆರ್ ಪೇಟೆ: 25/11/2021, ಎಣ್ಣೆ, 10369, 10379, 10369
- ಮಂಗಳೂರು: 25/11/2021,ಎಣ್ಣೆ 6500, 15500, 9000
- ಪುತ್ತೂರು: 25/11/2021, Other, 29, 4500, 11500, 80000
- ಟಿಪಟೂರು: 26/11/2021, Copra, 252, 17200, 17700, 17500
- ತುರುವೇಕೆರೆ: 26/11/2021, Copra, 43, 17375, 17375, 17375
ಶುಂಠಿ ಧಾರಣೆ:
- BELUR, 21/11/2021, Green Ginger, 80, 1000, 1000, 1000
- BENGALURU, 25/11/2021, Green Ginger, 436, 1800, 2000, 1900
- BINNY MILL (F&V), 25/11/2021, Green Ginger, 154, 3600, 4000, 3800
- CHICKBALLAPUR, 24/11/2021, Green Ginger, 25, 3000, 3500, 3250
- CHINTAMANI, 25/11/2021, Green Ginger, 40, 3000, 4000, 3500
- HASSAN, 24/11/2021, Green Ginger, 83, 600, 600, 600
- KOLAR, 24/11/2021, Green Ginger, 16, 2500, 3000, 2700
- MYSURU, 26/11/2021, Green Ginger, 87, 4000, 5000, 4500
- RAMANAGARA, 26/11/2021, Green Ginger, 14, 2400, 3600, 3200
- SHIVAMOGGA, 26/11/2021, Green Ginger, 1, 1800, 2000, 1900
- T.NARSIPUR, 26/11/2021, Green Ginger, 1, 1500, 1500, 1500
ಬೆಳೆಗಾರರು ಅದರಲ್ಲೀ ಕೆಂಪಡಿಕೆ ಮಾಡುವವರು ಗಮನಿಸಿ. ತಕ್ಷಣ ದರ ಏರಿಕೆ ಆಗದಿದ್ದರೂ ಮಾರುಕಟ್ಟೆಯಲ್ಲಿ ಕೊರತೆ ಇರುವ ಕಾರಣ ಮಾರ್ಚ್ ಎಪ್ರೀಲ್ 2022 ರ ಸಮಯಕ್ಕೆ ದರ ಏರಿಕೆ ಆಗುತ್ತದೆ. ಬಹುಷಃ ಈ ವರ್ಷ 60,000 ತಲುಪಿದರೂ ಅಚ್ಚರಿ ಇಲ್ಲ.